ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್)ಗೆ ಪರಿಸರ ಸಂರಕ್ಷಣಾ ಕೊಡುಗೆಗಳ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ 24ನೇ ಗ್ಲೋಬಲ್ ಗ್ರೀನ್‌ಟೆಕ್ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ ಲಭಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರುದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಲ್)ಗೆ ಪರಿಸರ ಸಂರಕ್ಷಣಾ ಕೊಡುಗೆಗಳ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ 24ನೇ ಗ್ಲೋಬಲ್ ಗ್ರೀನ್‌ಟೆಕ್ ಪರಿಸರ ಮತ್ತು ಸುಸ್ಥಿರತೆ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್ ಪರವಾಗಿ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಮತ್ತು ಜಿಎಂ ನಿರಂಕರ್ ಸಿಂಗ್ ಪ್ರಶಸ್ತಿ ಸ್ವೀಕರಿಸಿದರು.ಅಸ್ಸಾಂನ ಮಾಜಿ ಗವರ್ನರ್ ಡಾ. ಜಗದೀಶ್ ಮುಖಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಮಾಜಿ ಕಾರ್ಯದರ್ಶಿ ಡಾ. ಭಾಸ್ಕರ್ ಚಟರ್ಜಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಶಂಕರ್ ಪ್ರಸಾದ್ ಅವರು ಎಂಆರ್‌ಪಿಎಲ್ ತಂಡಕ್ಕೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದರು.ಎಂಆರ್‌ಪಿಎಲ್‌ನ ಪ್ರಮುಖ ಯೋಜನೆಗಳಾದ ಆರ್‌ಎಲ್‌ಎನ್‌ಜಿ (ರಿಗ್ಯಾಸಿಫೈಡ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಅನ್ನು ಕ್ಲೀನರ್ ಇಂಧನವಾಗಿ ಬಳಸುವುದು, ಇಟಿಪಿಯಲ್ಲಿ ಆಂತರಿಕವಾಗಿ ಅಭಿವೃದ್ಧಿಪಡಿಸಿದ ವಾಸನೆಯ ಘಟಕವನ್ನು ಸ್ಥಾಪಿಸುವುದು, ಅನುಸರಣೆಗೆ ಮೀರಿದ ಕಣಗಳನ್ನು ಕಡಿಮೆ ಮಾಡಲು ವೆಟ್ ಗ್ಯಾಸ್ ಸ್ಕ್ರಬ್ಬರ್ ಅಳವಡಿಕೆ, ಡಿಸಿ ಸಿಟಿ ಕೊಳಚೆನೀರನ್ನು ತೈಲ ಸಂಸ್ಕರಣಾ ಘಟಕಗಳಲ್ಲಿ ಉಪಯುಕ್ತವಾದ ಇಟಿಪಿ ಯುನಿಟ್‌ಗಳಲ್ಲಿ ಬಳಸುವುದು ಮುಂತಾದ ಪರಿಸರ ಸ್ನೇಹಿ ಯೋಜನೆಗಳನನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.