ಎಂ.ಎಸ್.ಸೋಮಲಿಂಗಪ್ಪನವರು ಸಿರುಗುಪ್ಪ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಜನಪರ ನಾಯಕ; ಬಿ.ಶ್ರೀರಾಮುಲು

KannadaprabhaNewsNetwork |  
Published : Nov 18, 2025, 01:00 AM IST
ಸ | Kannada Prabha

ಸಾರಾಂಶ

1969-70ನೇ ಸಾಲಿನಲ್ಲಿ ಸಿರುಗುಪ್ಪ ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ಸುಮಾರು 3,500 ಮನೆಗಳನ್ನು ಹಂಚಿಕೆ ಮಾಡಿದ್ದರು

ಸಿರುಗುಪ್ಪ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸಿರುಗುಪ್ಪ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಹರಿಕಾರರು. ಅಧಿಕಾರ ಇರಲಿ, ಬಿಡಲಿ ಜನರ ಶ್ರೇಯೋಭಿವೃದ್ಧಿಗಾಗಿ ದುಡಿದವರು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಬಣ್ಣಿಸಿದರು.

ತಾಲೂಕಿನ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ತಂದೆ ದಿ.ಎಂ.ಸಿದ್ದಪ್ಪ ಅವರ 55ನೇ ಪುಣ್ಯಸ್ಮರಣೆಯ ಪ್ರಯುಕ್ತ ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿ.ಎಂ.ಸಿದ್ದಪ್ಪ ಹುಟ್ಟು ಹೋರಾಟಗಾರರು. ಅವರಂತೆ ಎಂ.ಎಸ್. ಸೋಮಲಿಂಗಪ್ಪ ಸಹ ತಾಲೂಕಿನಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೋರಾಟಗಾರ ಹೊಟ್ಟೆಯಲ್ಲಿ ಹೋರಾಟಗಾರ ಹುಟ್ಟಿದ್ದಾರೆ. ಸೋಮಲಿಂಗಪ್ಪನವರ ತಂದೆಯವರ ಪುಣ್ಯಸ್ಮರಣೆ ದಿನ ಉಚಿತ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಸಾರ್ಥಕದ ಕೆಲಸವಾಗಿದೆ ಎಂದರು ಹೇಳಿದರು.

ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ನಮ್ಮ ತಂದೆಯವರಾದ ದಿ. ಎಂ.ಸಿದ್ದಪ್ಪ‌ನರು ರಾಜ್ಯ ಹೌಸಿಂಗ್ ಬೋರ್ಡ್‌ ಚೇರ್ಮನ್ ಭೀಮಪ್ಪನಾಯಕ ಕಮಿಟಿಯಲ್ಲಿ ರಾಜ್ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಡವರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಅವರು ಸಿರುಗುಪ್ಪ ಭಾಗದ ದೇವರಾಜ್ ಅರಸು ಎಂದು ಪ್ರಖ್ಯಾತರಾಗಿದ್ದರು. 1969-70ನೇ ಸಾಲಿನಲ್ಲಿ ಸಿರುಗುಪ್ಪ ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ಸುಮಾರು 3,500 ಮನೆಗಳನ್ನು ಹಂಚಿಕೆ ಮಾಡಿದ್ದರು ಎಂದರು.

ತೆಕ್ಕಲಕೋಟೆಯಲ್ಲಿ 1960ರಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಉಚಿತ ವಸತಿ ನಿಲಯ ಪ್ರಾರಂಭಿಸಿದ್ದರು. ಶೋಷಿತ ಸಮುದಾಯಗಳ ಹಿತಕ್ಕಾಗಿ ಹಗಲಿರುಳು ಶ್ರಮಿಸಿದರು ಎಂದು ತಿಳಿಸಿದರು

ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ಸಮುದಾಯವನ್ನು ಕಡೆಗಣಿಸಿದೆ. ನೀರಾವರಿ, ಶಿಕ್ಷಣ, ವಸತಿ ಕ್ಷೇತ್ರಗಳತ್ತ ಗಮನ ನೀಡುತ್ತಿಲ್ಲ. ಈ ಬಾರಿ ಬೇಸಿಗೆ ಬೆಳೆಗೆ ನೀರಿಲ್ಲದೆ ರೈತರು ತೀವ್ರ ಒದ್ದಾಡುವಂತಾಗಿದೆ. ಜಲಾಶಯದಲ್ಲಿ ನೀರಿದ್ದರೂ ಕಾಲುವೆಗಳಿಗೆ ನೀರು ಪೂರೈಕೆ ಮಾಡುವ ಕಾಳಜಿಯನ್ನು ರಾಜ್ಯ ಸರ್ಕಾರ ತೋರಿಸಿಲ್ಲ. ರೈತರು ಬೆಳೆದ ಬೆಳಗಳ ಖರೀದಿಯಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್ ಸಿದ್ದಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜ್, ವೈದ್ಯರಾದ ವಿಶ್ವನಾಥ್‌ರೆಡ್ಡಿ, ರಂಜಿತ್, ಹರ್ಷ, ಮುಖಂಡರಾದ ವೆಂಕಟಪ್ಪ, ಕುಮಾರಪ್ಪ, ರಾಘವೇಂದ್ರ, ಮಂಜುನಾಥ, ದ್ಯಾವಣ್ಣ, ಕೃಷ್ಣ, ಸಿದ್ದಪ್ಪ, ಯು.ವೇಂಕೊಬ, ಖಾಜಸಾಬ್, ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಪ್ರತಾಪ್ ಚೌದ್ರಿ, ಜಡೇ ಶಿವರುದ್ರಪ್ಪ, ಗಂಗಪ್ಪ, ದರೂರು ಪುರುಷೋತ್ತಮ ಗೌಡ, ಡಾ.ಮಧುಸೂದನ್ ಕಾರಿಗನೂರು, ಶಿವಶಂಕರಪ್ಪ ಮತ್ತಿತರರು ಭಾಗವಹಿಸಿದ್ದರು. ಶಾಸಕರ ನಿವಾಸದ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಹೃದಯರೋಗ, ನರರೋಗ, ಕ್ಯಾನ್ಸರ್, ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ತಪಾಸಣೆ ಮಾಡಲಾಯಿತು.

PREV

Recommended Stories

ಹುಬ್ಬಳ್ಳಿ ವಿಮಾನ ನಿಲ್ದಾಣ ಪಾರ್ಕಿಂಗ್‌ ಖಾಸಗೀಕರಣ
ಅಂಗವಿಕಲರ ವಿಶೇಷ ನಿಧಿ ಅನುದಾನ ಹೆಚ್ಚಳಕ್ಕೆ ಪಿಐಎಲ್ ದಾಖಲು