ಮುಡಿಪು: ಡಾ.ಅಮ್ಮೆಂಬಳ ಬಾಳಪ್ಪರ ವೃತ್ತ, ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : Jan 30, 2024, 02:06 AM IST
 ಅಮ್ಮೆಂಬಳ ಬಾಳಪ್ಪ‌ ಸರ್ಕಲ್ ನಿರ್ಮಾ‌ಣ‌ ಕಾಮಗಾರಿಗೆ ಶಿಲಾನ್ಯಾಸ | Kannada Prabha

ಸಾರಾಂಶ

ಉಳ್ಳಾಲ ತಾಲೂಕು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪುವಿನ ಕಾಯೆರ್‌ಗೋಳಿ ಬಳಿ ನಿರ್ಮಾಣಗೊಳ್ಳಲಿರುವ ಡಾ.ಅಮ್ಮೆಂಬಳ ಬಾಳಪ್ಪರ ವೃತ್ತ ಹಾಗೂ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭಾನುವಾರ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಸ್ವಾತಂತ್ರ್ಯ ಹೋರಾಟಗಾರನಾಗಿ, ಭೂಸುಧಾರಣೆಯ ಹರಿಕಾರನಾಗಿ ತಮ್ಮ ಜೀವನದುದ್ದಕ್ಕೂ ದೇಶ ಪ್ರೇಮದೊಂದಿಗೆ ಹೋರಾಟದ ಬದುಕು ಸಾಗಿಸಿದವರು ಅಮ್ಮೆಂಬಳ ಬಾಳಪ್ಪರು. ಇಂತಹ ಮಹಾತ್ಮರ ಬದುಕು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ಮುಂದಿನ ಪೀಳಿಗೆಗೂ ಈ ಸಾಧಕರ‌ ಪರಿಚಯವಿರಬೇಕು. ಆ ನಿಟ್ಟಿನಲ್ಲಿ ಮುಡಿಪುವಿನಲ್ಲಿ ಅಮ್ಮೆಂಬಳ ಬಾಳಪ್ಪ ವೃತ್ತ ನಿರ್ಮಾಣವಾಗುವುದರ ಮೂಲಕ ಅವರ ನೆನಪು ಶಾಶ್ವತವಾಗಿ ಉಳಿಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಅವರು ಮುಡಿಪುವಿನ ಕಾಯೆರ್‌ಗೋಳಿ ಬಳಿ ನಿರ್ಮಾಣಗೊಳ್ಳಲಿರುವ ಡಾ.ಅಮ್ಮೆಂಬಳ ಬಾಳಪ್ಪರ ವೃತ್ತ ಹಾಗೂ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಈ ಸಂದರ್ಭ ಮುಡಿಪು ಕುಲಾಲ ಸಂಘ ಅಧ್ಯಕ್ಷ ಪುಂಡರೀಕಾಕ್ಷ ಮೂಲ್ಯ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಲಾಲ್, ಕಾರ್ಯದರ್ಶಿ ಮೋಹನ್ ದಾಸ್ ಅಮ್ಮೆಂಬಳ, ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್, ಇರಾ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ಜನಾರ್ದನ ಗಟ್ಟಿ ಕೌಡೂರು, ರಘು ಆಳ್ವ ಭಂಡಾರಮನೆ, ಸತೀಶ್ ಕೌಡೂರು, ಲಂಬೋಧರ ಕೈರಂಗಳ, ಜನಾರ್ದನ ಕೈರಂಗಳ, ಧರ್ಮಪ್ಪ ಮೂಲ್ಯ ಚಕ್ರಕೋಡಿ, ಪದ್ಮನಾಭ ಚೇಳೂರು, ಜಯಪ್ರಕಾಶ್ ಕುಂಟಪದವು, ಸೌಮ್ಯ ಮುಡಿಪು, ನಾಗೇಶ್ ಕುಲಾಲ್, ಕೃಷ್ಣ ಪ್ರಸಾದ್, ಸಂತೋಷ್ ಕುಲಾಲ್ ಮುಡಿಪು, ಪ್ರಶಾಂತ ಶಾಂತನಗರ, ರವಿ ಪ್ರಕಾಶ್ ಕೊಲ್ಲರಮಜಲು, ಮೋನಪ್ಪ ಕುಲಾಲ್ ಪಡಿಕ್ಕಲ್ಲು, ರವೀಂದ್ರ ಬಬ್ಬರಕೋಡಿ, ವಿಶ್ವನಾಥ ಕುಲಾಲ್ ಸಜಿಪ, ಲಿಂಗಪ್ಪ ಮೂಲ್ಯ ಸಜಿಪ ನಡು, ಡಾ.ಯತೀಶ್ ಕುಲಾಲ್, ವೆಂಕಟೇಶ್ ಮುಡಿಪು, ಗೋಪಾಲ ಬಂಗೇರ ಮಿತ್ತಕೋಡಿ, ಜಯ ಕುಲಾಲ್ ಮೂಳೂರು, ಪ್ರಜ್ಞಶ್ರೀ, ಗಿರೀಶ್ ಕೊಲ್ಲರಮಜಲು ಮೊದಲಾದವರು ಉಪಸ್ಥಿತರಿದ್ದರು.ಪ್ರವೀಣ್ ಬಸ್ತಿ ಸ್ವಾಗತಿಸಿದರು, ಮೋಹನ್ ದಾಸ್ ಅಮ್ಮೆಂಬಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಸಂಜೀವಿನಿ: ಕೀರ್ತನಾ
ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ