ಸಮೃದ್ಧ ರಾಷ್ಟ್ರದ ಕನಸು ಕಂಡಿದ್ದ ಮುಖರ್ಜಿ: ಕಿವಡೆ

KannadaprabhaNewsNetwork |  
Published : Jun 24, 2025, 12:32 AM ISTUpdated : Jun 24, 2025, 12:33 PM IST
ಕಿವಡೆ | Kannada Prabha

ಸಾರಾಂಶ

ಭಾರತದ ಪ್ರಗತಿಗಾಗಿ ಮುಖರ್ಜಿ ಶ್ರಮಿಸಿದರು. ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರದ ಕನಸು ಕಂಡಿದ್ದರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.

 ಇಂಡಿ :  ಭಾರತದ ಪ್ರಗತಿಗಾಗಿ ಮುಖರ್ಜಿ ಶ್ರಮಿಸಿದರು. ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರದ ಕನಸು ಕಂಡಿದ್ದರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ಹಮ್ಮಿಕೊಂಡ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಭಾರತದ ಏಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರ ಪ್ರಯತ್ನಗಳಿಗೆ ಪ್ರತಿಯೊಬ್ಬ ಭಾರತೀಯ ಋಣಿಯಾಗಬೇಕಾಗಿದೆ. ಅವರ ಕನಸುಗಳನ್ನು ನನಸಾಗಿಸಲು ನಾವು ಬದ್ಧರಾಗಬೇಕು ಎಂದರು. 

ಒಂದು ರಾಷ್ಟ್ರದ ಉಜ್ವಲ ಭವಿಷ್ಯ ಅದರ ಸಂಸ್ಕೃತಿ ಮತ್ತು ಚಿಂತನೆಯ ಬಲವಾದ ಅಡಿಪಾಯದ ಮೇಲೆ ಮಾತ್ರ ಸಾಧ್ಯ ಎಂದು ಡಾ.ಮುಖರ್ಜಿ ನಂಬಿದ್ದರು. ಶ್ಯಾಮ ಪ್ರಸಾದ್ ಮುಖರ್ಜಿ ಭಾರತೀಯ ಜನ ಸಂಘದ ಸ್ಥಾಪಕರಾಗಿದ್ದರು. ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮುಖರ್ಜಿ ಅವರು ಅಸಮಾನ ಶಕ್ತಿಯನ್ನು ಪ್ರದರ್ಶಿಸಿದರು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಅನಿಲ ಜಮಾದಾರ, ಹನುಮಂತರಾಯಗೌಡ ಪಾಟೀಲ ಮಾತನಾಡಿದರು. ದೇವೇಂದ್ರ ಕುಂಬಾರ, ಮಂಜು ದೇವರ, ಅಶೋಕ ಅಕಲಾದಿ, ಸೋಮು ನಿಂಬರಗಿಮಠ, ಅನೀಲಗೌಡ ಬಿರಾದಾರ, ಶಾಂತು ಕಂಬಾರ, ಸಂತೋಷ ಗೌಡ ಪಾಟೀಲ, ಮಲ್ಲು ಗುಡ್ಲ, ರಾಜಶೇಖರ ಯರಗಲ, ಸಾಗರ ಬಿರಾದಾರ, ರಾಚು ಬಡಿಗೇರ, ಶಾಂತು ಕಂಬಾರ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಸಂಜು ದಶವಂತ, ಗಜು ಗಿಣ್ಣಿ, ಸುನಂದ ಗಿರಣಿವಡ್ಡರ, ಗೌರಮ್ಮ ನಾವಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ