ಹಿಪ್ಪುನೇರಳೆ ಲಾಭದಾಯಕ ಕೃಷಿ: ಶಿವಕುಮಾರ್

KannadaprabhaNewsNetwork |  
Published : Jan 23, 2026, 01:45 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ಹಿಪ್ಪುನೇರಳೆ ಕೃಷಿ ರೈತರಿಗೆ ಉತ್ತಮ ಲಾಭದಾಯದ ಕೃಷಿ ರೈತರ ಆರ್ಥಿಕ ಬೆಳೆಯಾಗಿದೆ ಈ ಕೃಷಿ ರೈತರಿಗೆ ಸಂಸ್ಕಾರ ಶಿಸ್ತು, ಸಭ್ಯತೆ ಸಮಯಪ್ರಜ್ಞೆಯನ್ನು ಕಲಿಸುತ್ತದೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ದೇವನಹಳ್ಳಿ: ಹಿಪ್ಪುನೇರಳೆ ಕೃಷಿ ರೈತರಿಗೆ ಉತ್ತಮ ಲಾಭದಾಯದ ಕೃಷಿ ರೈತರ ಆರ್ಥಿಕ ಬೆಳೆಯಾಗಿದೆ ಈ ಕೃಷಿ ರೈತರಿಗೆ ಸಂಸ್ಕಾರ ಶಿಸ್ತು, ಸಭ್ಯತೆ ಸಮಯಪ್ರಜ್ಞೆಯನ್ನು ಕಲಿಸುತ್ತದೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಕ್ಲಸ್ಟರ್ ವ್ಯಾಪ್ತಿಯ ಯಶಸ್ವಿ ದ್ವಿತಳಿ ಬೆಳೆಗಾರರಿಂದ ಗ್ರಾಮಮಟ್ಟದ ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಒಬ್ಬ ರೈತನಾಗಿ ಹಿಪ್ಪುನೇರಳೆ ಬೆಳೆದಿದ್ದೇನೆ. ಇತ್ತೀಚೆಗೆ ಹಿಪ್ಪುನೇರಳೆ ಕೃಷಿ ಕ್ಷೀಣಿಸುತ್ತಿದೆ. ನುಸಿ ರೋಗದಿಂದ ಬೆಳೆ ನಷ್ಟವಾಗುತ್ತಿದೆ. ದೇವನಹಳ್ಳಿ ಸುತ್ತಮುತ್ತಲು ಭೂಮಿಬೆಲೆ ಗಗನಕ್ಕೇರಿದ್ದು ಕೈಗಾರಿಕೆ, ಬಡಾವಣೆ, ನಗರೀಕರಣದಿಂದ ಪಟ್ಟಣವಾಗಿ ಪರಿವರ್ತನೆಯಾಗುತ್ತಿದೆ ರೈತರು ಜಮೀನನ್ನು ಮಾರಬೇಡಿ ರೇಷ್ಮೆ ಕೃಷಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ, ರೇಷ್ಮೆ ಕೃಷಿಯಿಂದ ಅನೇಕರು ಜೀವನ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ಅತಿಹೆಚ್ಚು ಪರಿಣಾಮ ಬೀರುತ್ತಿದೆ. ಮನುಷ್ಯನ ಬದುಕು ಕ್ಷೀಣಿಸುತ್ತಿದೆ. ನರೇಗಾದಲ್ಲಿ ರೇಷ್ಮೆ ಕೃಷಿಗೆ ಸಬ್ಸಿಡಿ ದೊರೆಯುತ್ತಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬೇರೆ ಬೆಳೆಗಳಿಗೆ ಔಷದಿ ಸಿಂಪಡಣೆಯಿಂದ ಭೂಮಿ ನಾಷವಾಗುವುದರ ಜೊತೆಗೆ ರೈತರ ಜೋಬು ಸಹ ಖಾಲಿ ಮಾಡುತ್ತಿದೆ ರೇಷ್ಮೆ ಬೆಳೆ ಬಡವರನ್ನು ಬದುಕಿಸುವ ಬೆಳೆಯಾಗಿದೆ. ರೈತರು ಕಡೆಗಣೆನೆ ಮಾಡಬೇಡಿ ಯಲಿಯೂರು ಭಾಗದಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ರೈತರು ತಮ್ಮ ಕಸುಬನ್ನು ಬಿಡಬೇಡಿ ಎಂದರು.

ಇದೆ ವೇಳೆ ಜಿಲ್ಲಾ ಪಂಚಾಯತ್‌ನ ಯೋಜನ ನಿರ್ದೇಶಕ ರಾಮಕೃಷ್ಣಯ್ಯ, ರೈತ ಮುಖಂಡ ಶಿವಣ್ಣ, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಕೆ.ಎನ್.ರವಿ, ಉಪನಿರ್ದೇಶಕ ಸಿ.ಎಂ.ಲಕ್ಷ್ಮಣ್, ಸಹಾಕಯ ನಿರ್ದೇಷಕರಾದ ಧನಂಜಯ್, ಕೃಷಿ ವಿಜ್ಞಾನಿ ಪರಮೇಶ್‌ನಾಯಕ್, ಯಲಿಯೂರು ಗ್ರಾಮಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸದಸ್ಯೆ ನೇತ್ರಾವತಿ, ಮುಖಂಡರಾದ ಮುನಿವೀರ, ರಾಮಾಂಜಿನಪ್ಪ, ಆನಂದ್, ಮುತ್ತಪ್ಪ, ಆಂಜಿನಪ್ಪ, ಭಾಗ್ಯಮ್ಮ, ಮಂಜೇಶ್, ತಿಮ್ಮರಾಯಪ್ಪ, ಶ್ರೀನಿವಾಸ್‌ಗೌಡ, ಮುನಿರಾಜು, ಕೃಷ್ಣಮೂರ್ತಿ, ಮೋಹನ್, ಲಕ್ಷ್ಮಮ್ಮ, ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.

೨೨ ದೇವನಹಳ್ಳಿ ಚಿತ್ರಸುದ್ದಿ: ೦೧ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತರಿಂದ ರೈತರಿಗೆ ತರಬೇತಿ ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ
ರ್‍ಯಾಗಿಂಗ್ ಮಾಡಿದ ಮೂವರ ಬಂಧನ