ಕನ್ನಡಪ್ರಭ ವಾರ್ತೆ ಪುತ್ತೂರು
ಸಂತೋಷ ಸೃಷ್ಟಿಸುವ ಗುಣ ಬಹಳ ಮುಖ್ಯವಾಗಿದ್ದು, ನಮ್ಮೊಳಗೇ ಸಂತೋಷ ಸಿಗುವ ಕಾರ್ಯವಾಗಬೇಕಾಗಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸ್ಲೂಗನ್, ಫಿಲಾಸಫಿ ಹಾಗೂ ಈ ಸಂಸ್ಥೆಯನ್ನು ನಡೆಸುತ್ತಿರುವ ಸಹೋದರರ ಸಂಸ್ಕೃತಿಗೆ ಮಾರುಹೋಗಿ ಮುಳಿಯ ಸಂಸ್ಥೆಯ ರಾಯಭಾರಿಯಾಗಿದ್ದೇನೆ ಎಂದರು.
ನಮ್ಮ ಸಂಪಾದನೆಯ ಒಂದು ಭಾಗವನ್ನು ಚಿನ್ನದ ಮೂಲಕ ಉಳಿತಾಯ ಮಾಡುವುದು ಹೆಚ್ಚು ಶ್ರೇಯಸ್ಕರ ಎಂಬ ಚಿಂತನೆ ನಮ್ಮಲ್ಲಿ ಹೆಚ್ಚಾಗಬೇಕು ಎಂದು ರಮೇಶ್ ಕರೆ ನೀಡಿದರು.ಮುಳಿಯ ಸಂಸ್ಥೆಯ ಚೇರ್ಮೆನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, 81 ವರ್ಷಗಳ ಹಿಂದೆ ಕಟ್ಟೆಯಲ್ಲಿ ಆರಂಭಗೊಂಡಿದ್ದ ಮುಳಿಯ ಸಂಸ್ಥೆ ಇದೀಗ ತನ್ನ ಪಾರಂಪರಿಕ ವ್ಯವಸ್ಥೆಯೊಂದಿಗೆ ಹೊಸತನಕ್ಕೆ ತೆರೆದುಕೊಂಡಿದೆ. ಮುಳಿಯ ಸಂಸ್ಥೆ ಎಂಬುವುದು ಗ್ರಾಹಕರ ದೇಗುಲವಾಗಿದ್ದು, ಈ ಸಂಸ್ಥೆಗೊಂದು ವ್ಯಕ್ತಿತ್ವದ ಬ್ರ್ಯಾಂಡ್ ಇದೆ. ಗ್ರಾಹಕರಿಗೆ ನಷ್ಟವಾಗಬಾರದು ಎಂಬುವುದೇ ಮುಳಿಯ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.
ಮುಳಿಯ ಮಳಿಗೆಗಳಲ್ಲಿ ಗ್ರಾಹಕರಿಗೆ ಅನುಕೂಲವಾದ ವಾತಾವರಣಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಲಾಗಿದೆ ಎಂದರು.
ಮುಳಿಯ ಸಂಸ್ಥೆಯ ವಿಸ್ತೃತ ಕಟ್ಟಡವನ್ನು ತೆರೆ ಸರಿಸುವ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟಿಸಲಾಯಿತು. ಬಲೂನು ಹಾರಿ ಬಿಡುವ ಮೂಲಕ ಕಟ್ಟಡ ಅನಾವರಣ ಮಾಡಲಾಯಿತು. ಮಳಿಗೆಯ ವಿವಿಧ ಕೆಲಸದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು. ರಮೇಶ್ ಅರವಿಂದ್ ಅವರಿಗೆ ವಿಶೇಷ ಬ್ರಾಂಡ್‌ನ ಕಡಗ ಉಡುಗೊರೆಯಾಗಿ ತೊಡಿಸಲಾಯಿತು.
ವಿದುಷಿ ನಂದಿನಿ ನಾಯಕ್ ಪ್ರಾರ್ಥಿಸಿದರು. ಸಂಸ್ಥೆಯ ಬ್ರ್ಯಾಂಡ್ ಕನ್ಸಲ್ಟೆಂಟ್ ವೇಣು ಶರ್ಮ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಬಿಗ್‌ಬಾಸ್ ಖ್ಯಾತಿಯ ಕಲಾವಿದ ಪ್ರದೀಪ್ ಬಡೆಕ್ಕಿಲ ನಿರೂಪಿಸಿದರು.