ಕನ್ನಡಪ್ರಭವಾರ್ತೆ ಮೂಲ್ಕಿ
ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಸಹಭಾಗಿತ್ವದಲ್ಲಿ ನೀಡುವ ಈ ಪ್ರಶಸ್ತಿಗೆ 78 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮೂಲ್ಕಿ ಸೀಮೆ 32 ಗ್ರಾಮ ವ್ಯಾಪ್ತಿಯಲ್ಲಿ ಸಾಧನೆಗೈದ 14 ಜನರನ್ನು ಗುರುತಿಸಿದ್ದು ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕ್ರತರು: ಶ್ರೀ ನಿಪ್ಪಾಣಿ ಪೀಠದ ಪರಮಪೂಜ್ಯ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ( ಸಾಧನ ಪ್ರಶಸ್ತಿ)
ಮರಣೋತ್ತರ ಪ್ರಶಸ್ತಿ : .ಎಚ್ ನಾರಾಯಣ ಸನಿಲ್( ಸಹಕಾರಿ ಕ್ಷೇತ್ರ), ಬಾಬು ಶೆಟ್ಟಿ ಮುಂಬೈ( ಕಂಬಳ ಕ್ಷೇತ್ರ). ಸಂಘ ಸಂಸ್ಥೆಗಳ ವಿಭಾಗ: ಶ್ರೀ ಸುಬ್ರಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಶಿವ ಸಂಜೀವಿನಿ ಸುರಗಿರಿ.ಸಾಹಿತ್ಯ ಕ್ಷೇತ್ರ: ಎಚ್. ಶಕುಂತಲಾ ಭಟ್ ಹಳೆಯಂಗಡಿ, ಪರಮಾನಂದ ಸಾಲಿಯಾನ್ ಸಸಿಹಿತ್ಲು. ಯಕ್ಷಗಾನ ಕ್ಷೇತ್ರ: ಶ್ರೀ ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು, ಸೀತಾರಾಮ್ ಕುಮಾರ್ ಕಟೀಲು. ಕೃಷಿ- ಪರಿಸರ ಕ್ಷೇತ್ರ: ವಾಲ್ಟರ್ ಡಿಸೋಜಾ ಪಕ್ಷಿಕೆರೆ, ವೈದ್ಯಕೀಯ ಕ್ಷೇತ್ರ: ಡಾ. ಹಸನ್ ಮುಬಾರಕ್ ಬೊಳ್ಳೂರು. ಸಾಮಾಜಿಕ ಕ್ಷೇತ್ರ: ಮಾಧವ ಶೆಟ್ಟಿಗಾರ್ ಬೆಳ್ಳಾಯರು( ಮುಕ್ತಿದಾತ), ಚಂದ್ರ ಕುಮಾರ್ ಸಸಿಹಿತ್ಲು. ಶೈಕ್ಷಣಿಕ ಕ್ಷೇತ್ರ: ಮೀರಾಬಾಯಿ ಕೆ ಪಾವಂಜೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.