ಮೂಲ್ಕಿಯ ನಾರಾಯಣ ಗುರು ಕಾಲೇಜಿಗೆ ಶೇ. ೧೦೦ ಫಲಿತಾಂಶ

KannadaprabhaNewsNetwork |  
Published : Apr 11, 2024, 12:55 AM IST
ದ್ವಿತೀಯ ಪಿಯುಸಿ ಫಲಿತಾಂಶ  | Kannada Prabha

ಸಾರಾಂಶ

ಬುಧವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಶೇಕಡಾ 100 ಫಲಿತಾಂಶ ಗಳಿಸಿದೆ. ವಿಜ್ಞಾನ ವಿಭಾಗದಲ್ಲಿ 43ಮಂದಿ ಪರೀಕ್ಷೆಗೆ ಹಾಜರಾಗಿದ್ದು ವಿಶಿಷ್ಟ ಶ್ರೇಣಿ 13 , ಪ್ರಥಮ ದರ್ಜೆ 29, ದ್ವಿತೀಯ ದರ್ಜೆ 1 ಫಲಿತಾಂಶ ಬಂದಿದೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಶೇಕಡಾ 100 ಫಲಿತಾಂಶ ಗಳಿಸಿದೆ. ವಿಜ್ಞಾನ ವಿಭಾಗದಲ್ಲಿ 43ಮಂದಿ ಪರೀಕ್ಷೆಗೆ ಹಾಜರಾಗಿದ್ದು ವಿಶಿಷ್ಟ ಶ್ರೇಣಿ 13 , ಪ್ರಥಮ ದರ್ಜೆ 29, ದ್ವಿತೀಯ ದರ್ಜೆ 1 ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ವಿಶಿಷ್ಟ ಶ್ರೇಣಿ 18 , ಪ್ರಥಮ ದರ್ಜೆ 55, ದ್ವಿತೀಯ ದರ್ಜೆ 13 ಫಲಿತಾಂಶ ಬಂದಿದೆ .ವಿಜ್ಞಾನ ವಿಭಾಗದಲ್ಲಿ 568 ಅಂಕ ಪಡೆದು ಲಕ್ಷಿತ್‌ ಪ್ರಥಮ,ವಾಣಿಜ್ಯ ವಿಭಾಗದಲ್ಲಿ 585 ಅಂಕ ಪಡೆದು ಅಕ್ಷಯ ಪ್ರಥಮ ಸ್ಥಾನ ಪಡೆದಿದ್ದಾಳೆ.

-------------

ವಿಜಯ ಪ.ಪೂ.ಕಾಲೇಜಿಗೆ ಶೇ೯೯.೦೯%ಮೂಲ್ಕಿ ವಿಜಯ ಪ.ಪೂ.ಕಾಲೇಜು೯೯.೦೯ ಶೇಕಡಾ ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು ೪೬ ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು, ೧೭ ಮಂದಿ ವಿಶಿಷ್ಠ ಶ್ರೇಣಿಯಲ್ಲಿ ಮತ್ತು ೨೯ ಮಂದಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಶೇ. ೧೦೦ ಫಲಿತಾಂಶ ಲಭಿಸಿದೆ. ಕಾಮರ್ಸ್ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದಒಟ್ಟು ೬೫ ವಿದ್ಯಾರ್ಥಿಗಳಲ್ಲಿ ೬೪ ವಿದ್ಯಾರ್ಥಿಗಳು ಪಾಸಾಗಿದ್ದು, ೧೯ ಮಂದಿ ವಿಶಿಷ್ಠ ಶ್ರೇಣಿಯಲ್ಲಿ, ೩೫ ಮಂದಿ ಪ್ರಥಮದರ್ಜೆಯಲ್ಲಿ, ೭ ಮಂದಿ ದ್ವಿತೀಯದರ್ಜೆಯಲ್ಲಿ ಹಾಗೂ ೩ ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು , ಶೇ. ೯೮.೪೬ ಫಲಿತಾಂಶ ಲಭಿಸಿದೆ. --------------ಮೆಡಲಿನ್ ಪದವಿಪೂರ್ವ ಕಾಲೇಜಿಗೆ ಶೇ.೯೮.೦೩% ಫಲಿತಾಂಶಮೂಲ್ಕಿ: ಕಿಲ್ಪಾಡಿ ಮೆಡಲಿನ್ ಪದವಿ ಪೂರ್ವ ಕಾಲೇಜಿಗೆ ಶೇ ೯೮.೦೩ ಫಲಿತಾಂಶ ಲಭಿಸಿದೆ.ಕಲಾ ವಿಭಾಗದಲ್ಲಿ ೧೧ ಮಂದಿ ಪರೀಕ್ಷೇಗೆ ಹಾಜರಾಗಿದ್ದು ಶೇ%೧೦೦ ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ ೩೫ ಮಂದಿ ಪರೀಕ್ಷೇಗೆ ಹಾಜರಾಗಿ ಶೇ೧೦೦% ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ ೫೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೫೩ ಮಂದಿ ತೇರ್ಗಡೆಯಾಗಿ ಶೇ೯೬.೩೬ ಫಲಿತಾಂಶ ಲಭಿಸಿದೆ.ಒಟ್ಟು ಪರೀಕ್ಷೆಗೆ ಹಾಜರಾದ ೧೦೧ ವಿದ್ಯಾರ್ಥಿಗಳಲ್ಲಿ ೧೫ ವಿಶಿಷ್ಟ ಶ್ರೇಣಿ, ಪ್ರಥಮದರ್ಜೆ ೬೭ ದ್ವಿತೀಯ ದರ್ಜೆ ೧೭ ಫಲಿತಾಂಶ ಲಭಿಸಿದೆ.

ಕಮ್ಮಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 100 ಫಲಿತಾಂಶ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ ಸತತ ಆರನೇ ಬಾರಿಗೆ ಶೆಕಡಾ ನೂರು ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 80 ವಿದ್ಯಾರ್ಥಿಗಳಲ್ಲಿ 77 ಅತ್ಯುನ್ನತ ಶ್ರೇಣೆ,3 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು ವಿಕಾಸ ಗೌಡ ಎಂ ಕೆ 591 (98.33),ಮಲ್ಲಿಕಾರ್ಜುನ ಎಂ ಕೆ 589(ಶೇಕಡಾ 98.17,ರೋಹಿತ್‌ ಗೌಡ ಎಸ್‌ ಎಸ್‌ 589(98.17) ಅಂಕ ಪಡೆದಿದ್ದಾರೆ. ಚಿತ್ರ:ವಿಕಾಸ ಗೌಡ, ಮಲ್ಲಿಕಾರ್ಜುನ, ರೋಹಿತ್‌ ಗೌಡ

-----------------

ಕಟೀಲು ದೇವಳ ಪದವಿಪೂರ್ವ ಕಾಲೇಜು ಶೇ. 95 ಫಲಿತಾಂಶ

ಕಟೀಲು ದೇವಳ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇಕಡಾ 97, ವಿಜ್ಞಾನ ವಿಭಾಗದಲ್ಲಿ ಶೇಕಡಾ 92 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ ಒಟ್ಟು 379 ವಿದ್ಯಾರ್ಥಿಗಳಲ್ಲಿ 358 ತೇರ್ಗಡೆ ಹೊಂದಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ತಲಾ 54 ಮಂದಿ ಉನ್ನತ ಶ್ರೇಣೆಯಲ್ಲಿ ಪಾಸಾಗಿದ್ದಾರೆ. ವಾಣೀಜ್ಯ ವಿಭಾಗದಲ್ಲಿ ಪ್ರಥ್ವಿ ಎಚ್‌ ಪೂಜಾರಿ ಹಾಗೂ ವಿಶ್ರುತ ತಲಾ 585,ವಿಜ್ಞಾನ ವಿಭಾಗದಲ್ಲಿ ಸಮ್ಯತಾ ಆಚಾರ್ಯ 579 ಅಂಕ ಪಡೆದಿದ್ದಾರೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ