ಮೂಲ್ಕಿ: ಕಿನ್ನಿಗೋಳಿ ಮತ್ತು ಬಜಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದ್ದರೂ ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಹೇಳಿದರು.
ಮೂಲ್ಕಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್ , ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಜಿಲ್ಲಾ ಡಾಕ್ಟರ್ ಸೆಲ್ ಅಧ್ಯಕ್ಷ ಡಾ. ಶೇಖರ್ ಪೂಜಾರಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಲ್ವಿನ್ ಕುಟಿನ್ಯೂ, ಬಜಪೆ ಸೊಸೈಟಿಯ ಮಾಜಿ ಅಧ್ಯಕ್ಷ ಎಕ್ಕಾರು ಮೋನಪ್ಪ ಶೆಟ್ಟಿ ಬಜಪೆ ಪ್ರಜಾಪ್ರತಿನಿಧಿ ಅಧ್ಯಕ್ಷ ಬಿ ಜೆ ರಹೀಮ್, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪದ್ಮಾವತಿ ಶೆಟ್ಟಿ, ಸೂರಿಂಜಿ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ ವಂದಿಸಿದರು.