ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ರಂಗಾಯಣ ವತಿಯಿಂದ ಮಾ.6 ರಿಂದ 11 ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2024 ಅನ್ನು ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿದೆ ಎಂದು ನಾಟಕೋತ್ಸವ ಸಂಚಾಲಕ ಪ್ರೊ.ಎಚ್.ಎಸ್. ಉಮೇಶ್ ತಿಳಿಸಿದರು.
ಮಾ.5ರ ಸಂಜೆ 5.30ಕ್ಕೆ ಜನಪದ ಸಂಭ್ರಮವನ್ನು ಕಿಂದರಿ ಜೋಗಿ ವೇದಿಕೆಯಲ್ಲಿ ಹಿರಿಯ ಜಾನಪದ ಗಾಯಕ ಡಾ. ಮಳವಳ್ಳಿ ಮಹದೇವಸ್ವಾಮಿ ಉದ್ಘಾಟಿಸುವರು. ಜಾನಪದ ವಿದ್ವಾಂಸರಾದ ಡಾ. ಜಯಲಕ್ಷ್ಮಿ ಸೀತಾಪುರೆ ಅತಿಥಿಯಾಗುವರು. ಬಹುರೂಪಿ ಚಲನಚಿತ್ರೋತ್ಸವವನ್ನು ಮಾ.7ರ ಬೆಳಗ್ಗೆ 10.30ಕ್ಕೆ ಶ್ರೀರಂಗದಲ್ಲಿ ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಉದ್ಘಾಟಿಸುವರು ಎಂದರು.
ಹಾಗೆಯೇ, ಬಹುರೂಪಿ ನಾಟಕೋತ್ಸವವನ್ನು ಮಾ.7ರ ಸಂಜೆ 4.30ಕ್ಕೆ ವನರಂಗದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ್ ಎಸ್. ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ. ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭಾಗವಹಿಸುವರು ಎಂದರು.ವಿಚಾರ ಸಂಕಿರಣ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗಕರ್ಮಿಗಳಾದ ನಂದಾ ಹಳೆಮನೆ, ಕೃಷ್ಣಪ್ರಸಾದ್ ಇದ್ದರು.
- ನಿರ್ಮಲಾ ಮಠಪತಿ, ಉಪ ನಿರ್ದೇಶಕಿ, ರಂಗಾಯಣ
ಬಹುರೂಪಿ ನಾಟಕಗಳ ಪ್ರದರ್ಶನ
ಮಾ.7 ರಂದು ಮುಟ್ಟಿಸಿಕೊಂಡವನು(ಕನ್ನಡ), ಲೋಕದ ಒಳಹೊರಗೆ (ಕನ್ನಡ), ಶಿಶುನಾಳ ಶರೀಫ (ಕನ್ನಡ), ಮಾ.8 ರಂದು ದುಖ್ವಾ ಮೇ ಬೀತಲ್ ರತಿಯಾ(ಹಿಂದಿ), ದ್ರೋಪದಿ ಹೇಳ್ತವ್ಳೆ (ಕನ್ನಡ), ಕಲ್ಯಾಣದ ಬಾಗಿಲು(ಕನ್ನಡ), ಸೀತೆಯ ವ್ಯಥೆ (ಕನ್ನಡ), ಮಾ.9 ರಂದು ಜಂಪ್ (ಹಿಂದಿ), ಗ್ಲಾನಿ (ಕನ್ನಡ), ಚಾವುಂಡರಾಯ (ಕನ್ನಡ), ಖಟಾರ (ಮರಾಠಿ). ಮಾ.10 ರಂದು ಕಿಟನ್ ಕೋಲಾ (ಬಂಗಾಳಿ), ಬ್ಲ್ಯಾಕ್ ಔಟ್ (ಕನ್ನಡ), ಚಿಲ್ಲರ ಸಮರಂ (ಮಲಯಾಳಂ), ಕರಿಯದೇವರ ಹುಡುಕಿ (ಕನ್ನಡ). ಮಾ.11 ರಂದು ಅಬೊರಿಜಿನಲ್ ಕ್ರೈ (ಮಣಿಪುರಿ), ಪಾರ್ಶ್ವಸಂಗೀತ (ಕನ್ನಡ), ಕಥೆ ಎಡ್ಡೇಂಡು (ತುಳು) ಹಾಗೂ ಬೆರಳ್ಗೆ ಕೊರಳ್ (ಕನ್ನಡ) ನಾಟಕಗಳು ಪ್ರದರ್ಶನವಾಗಲಿದೆ.