ಕಳ್ಳತನ ಪ್ರಕರಣ ಬೇಧಿಸಿದ ಮುಂಡರಗಿ ಪೊಲೀಸರು

KannadaprabhaNewsNetwork |  
Published : Mar 20, 2025, 01:18 AM IST
 ಮುಂಡರಗಿ ಹಾಗೂ ಅಣ್ಣೀಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬಂಗಾರದ ಆಭರಣ ಹಾಗೂ ರೋಖ ಹಣವನ್ನು ಮುಂಡರಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ. | Kannada Prabha

ಸಾರಾಂಶ

ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದರಿಂದ ಆತನಿಂದ ₹ 4.10 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹90 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ

ಮುಂಡರಗಿ: ಫೆ.8, 2025 ರಂದು ಪಟ್ಟಣದ ಎಸ್‌.ಎಸ್‌. ಪಾಟೀಲ ನಗರದಲ್ಲಿ ಕಳ್ಳತನವಾಗಿದ್ದ ₹4.10 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹ 90 ಸಾವಿರ ಹಣವನ್ನು ಪತ್ತೆ ಹಚ್ಚುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ ಪತ್ತೆಗಾಗಿ ಎಸ್ಪಿ ಬಿ.ಎಸ್. ನೇಮಗೌಡ ವಿಶೇಷ ತಂಡ ರಚನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ನರಗುಂದ ಉಪವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಇನೆಸ್ಪೆಕ್ಟರ್ ಮಂಜುನಾಥ ಕುಸುಗಲ್, ಪಿಎಸ್ಐ ವಿ.ಜೆ.ಪವಾರ, ಇನ್ನೊರ್ವ ಪಿಎಸ್ಐ ಬಿ.ಎನ್.ಯಳವತ್ತಿ ನುರಿತ ಸಿಬ್ಬಂದಿಯೊಂದಿಗೆ 2025ರ ಮಾ.18 ರಂದು ಕಳ್ಳತನ ಮಾಡಿದ ಆರೋಪಿ ಕಾರ್ತಿಕ ಅಪ್ಪಣ್ಣ ಕೊಂಪಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಂಡರಗಿ ಪಟ್ಟಣ ಹಾಗೂ ಅಣ್ಣೀಗೇರಿ ಪೊಲೀಸ್ ಠಾಣೆಯ ಹದ್ದಿನಲ್ಲಿ ಬರುವ ಅಣ್ಣೀಗೇರಿ ಶಹರದಲ್ಲಿ ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದರಿಂದ ಆತನಿಂದ ₹ 4.10 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹90 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ.

ಬಂಗಾರದ ಆಭರಣ ಹಾಗೂ ಹಣ ಪತ್ತೆ ಮಾಡಲು ಶ್ರಮಿಸಿದ ಮುಂಡರಗಿ ಪೊಲೀಸ್ ಇನೆಸ್ಪೆಕ್ಟರ್ ಮಂಜುನಾಥ ಕುಸುಗಲ್, ಪಿಎಸ್ಐ ವಿ.ಜೆ. ಪವಾರ, ಇನ್ನೊರ್ವ ಪಿಎಸ್ಐ ಬಿ.ಎನ್. ಯಳವತ್ತಿ ಸಿಬ್ಬಂದಿಗಳಾದ ಎಎಸ್ಐ ಎಸ್.ಎಂ.ಹಡಪದ, ಗುರು ಬೂದಿಹಾಳ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಜೆ.ಐ. ಬಚ್ಚೇರಿ, ವಿ.ಬಿ. ಬಿಸನಹಳ್ಳಿ ಹಾಗೂ ಮಹೇಶ ಗೋಳಗೊಳಕಿ, ಎಂ.ಎಂ. ಬನ್ನಿಕೊಪ್ಪ, ಕೆ.ಎನ್. ಮುಡಿಯಮ್ಮನವರ, ಲಕ್ಷ್ಮಣ ಲಮಾಣಿ, ಎಸ್.ಎಸ್. ಕಂಚಗಾರ, ಎಚ್.ಎಫ್.ಡಂಬಳ, ಬಸವರಾಜ ಬಣಕಾರ, ವಿನಾಯಕ ಬಾಲರೆಡ್ಡಿ, ಸಂಜೀವ ಕೊರಡೂರ ಇವರಿಗೆ ಎಸ್‌ಪಿ ಬಿಎಸ್ ನೇಮಗೌಡ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ಸಂಕದ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...