ಕನ್ನಡಪ್ರಭ ವಾರ್ತೆ ಹಲಗೂರು
ಜೂ.21 ಸಂಜೆ 4 ಗಂಟೆಗೆ ತಟ್ಟೆಪೂಜೆ, ಜೂ.23ರ ರಾತ್ರಿ 10.30ಗಂಟೆಗೆ ಶ್ರೀಮುನೇಶ್ವರಸ್ವಾಮಿ, ಶ್ರೀ ಶಂಭುಲಿಂಗೇಶ್ವರಸ್ವಾಮಿ, ಶ್ರೀವೆಂಕಟೇಶ್ವರಸ್ವಾಮಿ, ದಡಮಹಳ್ಳಿ ಶ್ರೀ ಸಿದ್ದೇಶ್ವರಸ್ವಾಮಿ, ಮುಲ್ಲೇತಿಮ್ಮನದೊಡ್ಡಿ ಶ್ರೀ ಸಿದ್ದೇಶ್ವರಸ್ವಾಮಿ, ಶ್ರೀ ಕರಿಯಣ್ಣ, ಶ್ರೀ ಕೆಂಚಣ್ಣ ದೇವರುಗಳನ್ನು ಕರೆತಂದು ಗ್ರಾಮದಲ್ಲಿ ತಮಟೆ ನಗಾರಿ ಪೂಜಾ ಕುಣಿತ ಮತ್ತು ಇತರೆ ಜಾನಪದ ಕಲಾ ತಂಡಗಳೊಂದಿಗೆ ದೇವರ ಮೆರವಣಿಗೆ ಜಾತ್ರಾ ಮಹೋತ್ಸವ ನಡೆಸಲಾಗುವುದು.
ಜೂ.24ರಂದು ಬೆಳಗ್ಗೆ 9 ಗಂಟೆಗೆ ಶ್ರೀಮುನೇಶ್ವರ ಸ್ವಾಮಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಸಿ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ಸೇವಾ ಸಮಿತಿ ತಿಳಿಸಿದೆ.ಇಂದು ಶನೇಶ್ವರ ಸ್ವಾಮಿ 54 ನೇ ವರ್ಷದ ಪೂಜಾ ಮಹೋತ್ಸವ
ಶುಕ್ರವಾರ ಸಂಜೆ 7 ಗಂಟೆಗೆ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ಪೂರ್ಣಾಹುತಿಯ ನಂತರ ಶ್ರೀಶನೇಶ್ವರ ಸ್ವಾಮಿ ಮತ್ತು ಶ್ರೀ ಅಭಯ ಅಂಜನೇಯ ಸ್ವಾಮಿಗೆ ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯಿತು.
ಜೂ.21 ರಂದು ಬೆಳಗ್ಗೆ 9 ಗಂಟೆಗೆ ಶಿಂಷಾ ನದಿಯಲ್ಲಿ ಶನೇಶ್ವರ ಸ್ವಾಮಿಗೆ ಹೂ ಹೊಂಬಾಳೆ ಧರಿಸಿ, ಪೂರ್ಣಕುಂಭ, ಬಾಯಿ ಬೀಗ ಸಮೇತ ಮಂಗಳ ವಾದ್ಯಗಳೊಂದಿಗೆ ಸ್ವಾಮಿಯ ಸನ್ನಿಧಿಗೆ ಕರೆ ತರಲಾಗುವುದು. ದೇವಾಲಯದಲ್ಲಿ ಶನೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಮಹಾ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಸಂಜೆ 7 ಗಂಟೆಗೆ ಶನೇಶ್ವರ ಸ್ವಾಮಿ ಮತ್ತು ಶ್ರೀಅಭಯ ಆಂಜನೇಯಸ್ವಾಮಿ ದೇವರ ಉತ್ಸವ ನಡೆಯಲಿದೆ. ಪುರದದೊಡ್ಡಿ, ಬಾಣಸಮುದ್ರ ಮತ್ತು ದಡಮಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.