ಧಾರವಾಡ:
2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ ₹ 8,768 ಹಾಗೂ ಉದ್ದಿನಕಾಳು ಉತ್ಪನ್ನವನ್ನು ₹ 7,800ರಂತೆ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೆ.25ರಿಂದ ಡಿ.13ರ ವರೆಗೆ ನೋಂದಣಿ ನಡೆಯಲಿದ್ದು ಡಿ.23ರ ವರೆಗೆ ಖರೀದಿಸಲಾಗುವುದು ಎಂದರು.
ಹೆಸರು ಖರೀದಿ ಕೇಂದ್ರ:ಧಾರವಾಡದ ಟಿಎಪಿಸಿಎಎಂಎಸ್ (9916259625), ಉಪ್ಪಿನ ಬೆಟಗೇರಿಯ ಪಿಕೆಪಿಎಸ್ (9620048221), ಹೆಬ್ಬಳ್ಳಿಯ ಪಿಕೆಪಿಎಸ್ (9448424876), ಹುಬ್ಬಳ್ಳಿ ಟಿಎಪಿಸಿಎಎಂಎಸ್ (6360506861), ಬ್ಯಾಹಟ್ಟಿಯ ಪಿಕೆಪಿಎಸ್ (9986211378), ಹೆಬಸೂರ ಪಿಕೆಪಿಎಸ್ (9945894870), ಕೋಳಿವಾಡ ನಂ-1 ಪಿಕೆಪಿಎಸ್ (9945846878), ನೂಲ್ವಿ ಪಿಕೆಪಿಎಸ್ (9743836535), ನವಲಗುಂದ ತಾಲೂಕಿನ ಹೆಬ್ಬಾಳ ಪಿಕೆಪಿಎಸ್ (9449065613), ತಿರ್ಲಾಪೂರ ಪಿಕೆಪಿಎಸ್ (8494801475), ಆರೇಕುರಹಟ್ಟಿ ಪಿಕೆಪಿಎಸ್ (9845822903), ಶಿರೂರ, ಮೊರಬ ಎಫ್‌ಪಿಒ (9900189128), ಮೊರಬ ಕೆಎಸ್‌ಎಫ್‌ಪಿಒ ಖರೀದಿ ಸಂಸ್ಥೆ ( 9620107330), ಮೊರಬ ಪಿಕೆಪಿಎಸ್ (8431012192), ಹಾಲಕುಸುಗಲ್ ಪಿಕೆಪಿಎಸ್ (8123836380), ನವಲಗುಂದ ಪಿಕೆಪಿಎಸ್ (9886491644), ನವಲಗುಂದ ಟಿಎಪಿಸಿಎಂಎಸ್ (8861008191), ಶಿರಕೋಳ ಪಿಕೆಪಿಎಸ್ (8150834048), ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ ಪಿಕೆಪಿಎಸ್ (760184669), ಅಣ್ಣಿಗೇರಿ ಟಿಎಪಿಸಿಎಂಎಸ್ (8861008191), ಕುಂದಗೋಳ ತಾಲೂಕಿನ ಯಳಿವಾಳ ಪಿಕೆಪಿಎಸ್ (9945163891), ಕುಂದಗೋಳನ ಯರಗುಪ್ಪಿ ಪಿಕೆಪಿಎಸ್ (9845169206). ಖರೀದಿ ಕೇಂದ್ರಗಳಾಗಿವೆ.ಉದ್ದಿನಕಾಳು ಖರೀದಿ ಕೇಂದ್ರ:
ಧಾರವಾಡ ಟಿಎಪಿಸಿಎಂಎಸ್ (9916259625), ಉಪ್ಪಿನಬೇಟಗೇರಿ ಪಿಕೆಪಿಎಸ್ (9620048221), ಹುಬ್ಬಳ್ಳಿ ಟಿಎಪಿಸಿಎಂಎಸ್ (6360506861), ಯರಗುಪ್ಪಿ ಪಿಕೆಪಿಎಸ್ (9845169206), ನವಲಗುಂದ ಪಿಕೆಪಿಎಸ್ (9886491644), ಅಣ್ಣಿಗೇರಿ ಟಿಎಪಿಸಿಎಂಎಸ್‌ನಲ್ಲಿ (8861008191) ಉದ್ದಿನಕಾಳು ಖರೀದಿಸಲಾಗುತ್ತದೆ.ರೈತರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನೀಡುವ ಗೋಣಿ ಚೀಲದಲ್ಲಿ 50 ಕೆಜಿ. ಪ್ರಮಾಣದಲ್ಲಿ ತುಂಬಬೇಕು. ಹೆಸರುಕಾಳು ಪ್ರತಿ ಎಕರೆಗೆ 3 ಕ್ವಿಂಟಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ವರೆಗೆ ಖರೀದಿಸಲಾಗುವುದು. ಸರ್ಕಾರಿ ರಜೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಮಾತ್ರ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.