ಪ್ಲಾಸ್ಟಿಕ್ ಮುಕ್ತಗೊಳಿಸಲು ಪುರಸಭಾ ಅಧ್ಯಕ್ಷ ಅಶೋಕ್ ಮನವಿ

KannadaprabhaNewsNetwork |  
Published : Mar 01, 2025, 01:07 AM IST
28ಎಚ್ಎಸ್ಎನ್‌7 :  | Kannada Prabha

ಸಾರಾಂಶ

ಪ್ಲಾಸ್ಟಿಕ್‌ನ ಮರುಬಳಕೆಗಿಂತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಾರ್ವಜನಿಕರ ಪಣ ತೊಡುವುದು ಬಹುಮುಖ್ಯವಾಗಿದೆ ಎಂದು ಪುರಸಭಾಧ್ಯಕ್ಷ ಎ.ಆರ್.ಅಶೋಕ್ ಹೇಳಿದರು. ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡಲು ಏಕಬಳಕೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುವುದು ನಮ್ಮ ಜವಾಬ್ದಾರಿ. ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕೊಳ್ಳುವುದರ ಬದಲು ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಹೋಗುವುದು, ಸ್ಟ್ರಾ ಬಳಸದಿರುವುದು, ದಿನಸಿ, ತರಕಾರಿಗಳನ್ನು ಕೊಳ್ಳುವಾಗ ಅಂಗಡಿಯವರ ಬಳಿ ಪ್ಲಾಸ್ಟಿಕ್ ಕವರ್‌ ಅನ್ನು ಕೇಳದಿರುವುದು, ಬಟ್ಟೆಯ ಚೀಲಗಳನ್ನು ಬಳಸುವುದು ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪ್ಲಾಸ್ಟಿಕ್‌ನ ಮರುಬಳಕೆಗಿಂತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಾರ್ವಜನಿಕರ ಪಣ ತೊಡುವುದು ಬಹುಮುಖ್ಯವಾಗಿದೆ ಎಂದು ಪುರಸಭಾಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಚೆನ್ನಕೇಶವ ದೇಗುಲದ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ "ಪ್ಲಾಸ್ಟಿಕ್ ಸಂಗ್ರಹಣಾ ಡಬ್ಬ ಪುರಸಭೆಗೆ ಹಸ್ತಾಂತರ " ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡಲು ಏಕಬಳಕೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸುವುದು ನಮ್ಮ ಜವಾಬ್ದಾರಿ. ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕೊಳ್ಳುವುದರ ಬದಲು ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಹೋಗುವುದು, ಸ್ಟ್ರಾ ಬಳಸದಿರುವುದು, ದಿನಸಿ, ತರಕಾರಿಗಳನ್ನು ಕೊಳ್ಳುವಾಗ ಅಂಗಡಿಯವರ ಬಳಿ ಪ್ಲಾಸ್ಟಿಕ್ ಕವರ್‌ ಅನ್ನು ಕೇಳದಿರುವುದು, ಬಟ್ಟೆಯ ಚೀಲಗಳನ್ನು ಬಳಸುವುದು, ಬಳಸಿ ಎಸೆಯುವಂತಹ ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚಗಳನ್ನು ಬಳಕೆ ನಿಲ್ಲಿಸುವುದು ಇಂತಹ ಸಣ್ಣ ಸಣ್ಣ ನಿರ್ಧಾರಗಳು ಬೃಹತ್ ಬದಲಾವಣೆಗೆ ನಾಂದಿಯಾಗಬಲ್ಲದು. ನಮ್ಮ ಭವಿಷ್ಯದ, ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದೂ ಆಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗೋಣ. ಸ್ವಚ್ಛ ಆರೋಗ್ಯಕರ ಪರಿಸರ ನಿರ್ಮಿಸೋಣ ಎಂದರು.

ರೋಟರಿ ಸಂಸ್ಥೆ ತಾಲೂಕಿನಲ್ಲಿ ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಸಂಸ್ಥೆಯ ಸದಸ್ಯರ ಸ್ವಂತ ಹಣದಿಂದ ಉತ್ತಮ ಕಾರ್ಯವನ್ನು ಮಾಡುತ್ತಾ ಸಮಾಜಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಮಾಜಮುಖಿ ಕಾರ್ಯ ಮಾಡಲಿ, ಪುರಸಭೆ ವತಿಯಿಂದ ರೋಟರಿ ಸಂಸ್ಥೆಯಿಂದ ನಿರ್ಮಿಸಲು ಹೊರಟಿರುವ ಕಟ್ಟಡದ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ಗವರ್ನರ್‌ ಸಿ. ಎ. ದೇವ್ ಆನಂದ್ ಮಾತನಾಡಿ, ಸ್ವಚ್ಛತೆಗೆ ನಾವೆಲ್ಲರೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು. ಏಕೆಂದರೆ ಬೇಲೂರು ಜಗತ್ಪ್ರಸಿದ್ಧವಾಗಿದ್ದು, ಇಲ್ಲಿನ ದೇಗುಲ ವೀಕ್ಷಣೆಗೆ ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಲು ಪ್ರತಿಯೊಬ್ಬರು ಸಹಕರಿಸಬೇಕು ಮತ್ತು ಮರುಬಳಕೆ ಮಾಡದಂತೆ ಪ್ರತಿಯೊಬ್ಬರು ಅರಿವು ಮೂಡಿಸಬೇಕು. ಪ್ರವಾಸಿಗರು ಭಕ್ತರು ಪ್ರವಾಸ ಬಂದಾಗ ಪ್ಲಾಸ್ಟಿಕ್ ಬಾಟಲ್‌ಗಳನ್ನು ಕಸದ ಬುಟ್ಟಿಯಲ್ಲಿ ಹಾಕಲು ಡಬ್ಬಗಳನ್ನು ಇಡಲಾಗಿದೆ. ಇಂತಹ ಪುಣ್ಯ ಸ್ಥಳಗಳು ಸ್ವಚ್ಛತೆಯಿಂದ ಇದ್ದರೆ ಇಡೀ ದೇಶವೇ ಸ್ವಚ್ಛತೆಯಿಂದ ಇರುತ್ತದೆ. ಪುರಸಭಾ ಅಧ್ಯಕ್ಷರು ಯುವಕರು ಹಾಗೂ ಕ್ರಿಯಾಶೀಲರಿದ್ದು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸಂಸ್ಥೆಯೊಂದಿಗೂ ಹೆಚ್ಚಿನ ಸಮಾಜಮುಖಿ ಕಾರ್ಯವನ್ನು ಮಾಡಲಿ ನಾವು ಕೂಡ ಸಹಕಾರ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎನ್. ಶಂಭುಗೌಡ, ಪ್ರಧಾನ ಕಾರ್ಯದರ್ಶಿ ಬಿ. ಬಿ. ಶಿವರಾಜು, ಸಹಾಯಕ ಗವರ್ನರ್ ಅರುಣ್ ರಕ್ಷಿಧಿ, ಝೋನಲ್ ಲೆಫ್ಟಿನೆಂಟ್ ವೈ. ಡಿ. ಲೋಕೇಶ್, ಖಜಾಂಚಿ ರಮೇಶ್, ಸದಸ್ಯರಾದ ರಂಗನಾಥ್, ರಾಜೇಗೌಡ, ಮೊಗಪ್ಪಗೌಡ, ರೇಖಾ ದೇವ್‌ ಆನಂದ್, ಸಂದೇಶ್, ರಾಘವೇಂದ್ರ, ಮುರುಳಿ, ಇತರೆ ಸದಸ್ಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''