ಕನ್ನಡಪ್ರಭ ವಾರ್ತೆ ಮಣಿಪಾಲಅಮೆರಿಕಾದ ೧೭ ಪೆಟೆಂಟ್ ಹೊಂದಿರುವ ದೇಶದ ಪ್ರಥಮ ಸಂಸ್ಥೆ ಮುನಿಯಾಲು ಆಯುರ್ವೇದ ಸಂಶೋಧನಾ ಕೇಂದ್ರದ ಔಷಧ ಅಂಗಡಿ ಸಮುಚ್ಚಯಗಳ ಪ್ರಥಮ ಶಾಖೆಯು ಮಂಗಳೂರಿನ ಬಿಜೈ ನ್ಯೂರೋಡ್ ನಲ್ಲಿ ಪ್ರಾರಂಭವಾಗಿದೆ.
ಜಗತ್ತಿನಾದ್ಯಂತ ಸುಮಾರು ೨೦೦ ಕ್ಕೂ ಹೆಚ್ಚು ದೇಶಗಳು ಆಯುರ್ವೇದವನ್ನು ತಮ್ಮ ಮುಖ್ಯ ಚಿಕಿತ್ಸಾ ಕ್ರಮವಾಗಿ ಅಧಿಕೃತವಾಗಿ ಅಂಗೀಕರಿಸಿರುವ ಈ ಸಂದರ್ಭದಲ್ಲಿ ಉತ್ಕೃಷ್ಟ ಮಟ್ಟದ ವೈಜ್ಞಾನಿಕವಾಗಿ ಧೃಡಪಟ್ಟಿರುವ ಹಾಗೂ ೮ ದಶಕಗಳ ಧೀರ್ಘ ಅನುಭವದ ಹಿನ್ನೆಲೆಯಿರುವ ಮುನಿಯಾಲು ಸಂಸ್ಥೆಯ ವಿವಿಧ ಕಾಯಿಲೆಗಳ ಔಷಧಿಗಳು ಕರ್ನಾಟಕದ ಜನತೆಗೆ ಸುಲಭದಲ್ಲಿ ದೊರೆಯುವಂತೆ ಮಾಡಲು ಮುನಿಯಾಲ್ ಹೆಲ್ತ್ ಔಷದಿ ಅಂಗಡಿ ಸಮುಚ್ಚಯ ಯೋಜನೆ ಪ್ರಾರಂಭಿಸಿದೆ. ಗ್ರಾಹಕರಿಗೆ ಸಂಸ್ಥೆಯ ವೈದ್ಯರ ತಂಡ ನಿಗದಿತ ಅವಧಿಯಲ್ಲಿ ಆನ್ಲೈನ್ ಸಂದರ್ಶನಕ್ಕೆ ಲಭ್ಯರಿರುತ್ತಾರೆ.
ಈ ಸಂಸ್ಥೆ ಮಣಿಪಾಲದಲ್ಲಿ ಆಯುರ್ವೇದ ಕಾಲೇಜು, ಸ್ನಾತಕೋತ್ತರ, ಪಿ.ಹೆಚ್.ಡಿ ಕೋರ್ಸ್, ಯೋಗ ನ್ಯಾಚುರೋಪತಿ ಕಾಲೇಜು ಹಾಗೂ ಸಂಶೋಧನೆ ಕೇಂದ್ರ ಮತ್ತು ಗ್ರಂಥ ಪ್ರಕಟಣೆ ಕೇಂದ್ರವನ್ನು ನಡೆಸುತ್ತಿದೆ.