ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲಾ ಕೋರ್ಟ್ ಆವರಣಲ್ಲಿ ಸಭೆ ಸೇರಿದ ವಕೀಲರು ಘಟನೆ ವಿರುದ್ಧ ಮಾನವ ಸರಪಳಿ ರಚಿಸಿ ಖಂಡಿಸಿದರು. ಹಾಡಹಗಲೇ ನಡೆದ ಘಟನೆಯಿಂದ ವಕೀಲರು ಭಯದಲ್ಲಿ ನ್ಯಾಯಾಲಯಗಳಲ್ಲಿ ಹಾಜರಾಗುವಂತಾಗಿದೆ. ಹಲ್ಲೆಗೈದವರ ವಿರುದ್ಧ ಹಾಗೂ ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಗೃಹ ಸಚಿವರು, ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ವಕೀಲರಿಗೆ ಸೂಕ್ತ ಭದ್ರತೆ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಡಿಸಿ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಕಾರ್ಯದರ್ಶಿ ಎಸ್.ಬಸವರಾಜ, ಉಪಾಧ್ಯಕ್ಷ ಜಿ.ಕೆ.ಬಸವರಾಜ ಗೋಪನಾಳ್, ಎಸ್.ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ಬಿ.ಅಜ್ಜಯ್ಯ ಆವರಗೆರೆ ಇತರರು ಭಾಗವಹಿಸಿದ್ದರು.- - -
-21ಕೆಡಿವಿಜಿ42, 43:ಹೊಸೂರಿನಲ್ಲಿ ಹಾಡುಹಗಲೇ ನಡೆದ ವಕೀಲ ಕಣ್ಣನ್ ಕೊಲೆ ಖಂಡಿಸಿ ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.