ಕನ್ನಡಪ್ರಭ ವಾರ್ತೆ, ಕಡೂರು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಾರೀ ಬೀಳು ಎಂಬ ಗ್ರಾಮದ ದರ್ಶನ್ (22) ಕೊಲೆಯಾದ ಯುವಕ. ಈತ ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ.
ಕಡೂರು ತಾಲೂಕಿನ ಹುಲಿಗೊಂದಿ ಗ್ರಾಮದ ಮಲ್ಲೇಶಪ್ಪ ಅವರ ಮಗಳನ್ನು ಮಾರಿಬೀಳು ಗ್ರಾಮದ ಕೃಷ್ಣಮೂರ್ತಿ ಎಂಬುವರಿಗೆ ಮದುವೆ ಮಾಡಿದ್ದು ಅವರ ಮಗನೇ ಕೊಲೆಯಾಗಿರುವ ಈ ದರ್ಶನ್. ಸ್ನೇಹಿತರೊಂದಿಗೆ ದರ್ಶನ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ .1 ತಿಂಗಳ ಹಿಂದೆ ದರ್ಶನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಡೂರು ತಾಲೂಕಿನ ಹುಲಿಗೊಂದಿ ಗ್ರಾಮದ ತನ್ನ ತಾತ ಮಲ್ಲೇಶಪ್ಪನ ಮನೆಗೆ ಬಂದಿದ್ದು ನಂತರ ಇಬ್ಬರು ಸ್ನೇಹಿತರು ವಾಪಸ್ ತೆರಳಿದ್ದರು ಎನ್ನಲಾಗಿದೆ. ದರ್ಶನ್ ಕಳೆದ ಫೆ 15ರ ಗುರುವಾರ ಸಂಜೆ 6 ಗಂಟೆಗೆ ಮತಿಘಟ್ಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ, ರಾತ್ರಿ 10 ಗಂಟೆಗೆ ವಾಪಸ್ ತಾತನ ಮನೆಗೆ ಬಂದು ಊಟ ಮಾಡಿ ಮಲಗಿದ್ದನು.
ಸ್ಥಳಕ್ಕೆ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ವೃತ್ತನಿರೀಕ್ಷಕ ದುಗ್ಗಪ್ಪ, ಸಬ್ ಇನ್ಸ್ ಪೆಕ್ಟರ್ ಧನಂಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದಿನ ಕ್ರಮ ಕೈಗೊಂಡು ಆರೋಪಿಗಳ ಪತ್ತೆಗೆ ಕಡೂರು ಪೊಲೀಸರು ಬಲೆ ಬೀಸಿದ್ದಾರೆ.