ಸೂಲಿಬೆಲೆ: ಪತಿಯನ್ನು ಕೊಲೆ ಮಾಡಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣ ಸೂಲಿಬೆಲೆ ಪೊಲೀಸರು ಭೇದಿಸಿದ್ದು ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ
ಸೂಲಿಬೆಲೆ: ಪತಿಯನ್ನು ಕೊಲೆ ಮಾಡಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣ ಸೂಲಿಬೆಲೆ ಪೊಲೀಸರು ಭೇದಿಸಿದ್ದು ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತನ ಪತ್ನಿ ಪುಷ್ಪ ಪ್ರಿಯಕರ ದೇವರಾಜ್, ಮುನೀಂದ್ರ, ಶಿವಾನಂದ ಅಲಿಯಾಸ್ ಸಿದ್ದಪ್ಪ ಬಂಧಿತರು. ಜ.೨2ರಂದು ತಮರಸನಹಳ್ಳಿ ಬಳಿ ದ್ವಿಚಕ್ರ ವಾಹನ ಅಪಘಾತದಲ್ಲಿ ಪುಷ್ಪಳ ಪತಿ ಅಶೋಕ್(೩೫) ಮೃತಪಟ್ಟಿದ್ದರು ಎಂದು ಬಿಂಬಿಸಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಜ.೨೨ರಂದು ಮಧ್ಯರಾತ್ರಿ ದೇವರಾಜ್, ಮುನೀಂದ್ರ, ಶಿವಾನಂದ, ಸೇರಿ ಅಶೋಕ್‌ನನ್ನು ಸಿದ್ದೇನಹಳ್ಳಿ ಗ್ರಾಮದ ಕೆರೆಯಲ್ಲಿ ಮದ್ಯದ ಪಾರ್ಟಿಗೆ ಕರೆದೊಯ್ದಿದ್ದರು. ಮದ್ಯ ಸೇವಿಸಿದ ನಂತರ ಆತನನ್ನು ಹತ್ಯೆ ಮಾಡಿ ತಮರಸನಹಳ್ಳಿಗೆ ಹೋಗುವ ಮಾರ್ಗದ ತಿರುವಿನಲ್ಲಿ ವಿದ್ಯುತ್ ಕಂಬದ ಬಳಿ ಅಪಘಾತ ರೀತಿಯಲ್ಲಿ ಶವವಿಟ್ಟು ಪರಾರಿಯಾಗಿದ್ದರು. ಅಪಘಾತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇದೊಂದು ಹತ್ಯೆ ಇರಬಹುದೆಂದು ತನಿಖೆ ಆರಂಭಿಸಿದರು.
ಶವ ಪತ್ತೆಯಾದ ದಿನವೇ ಗ್ರಾಮಸ್ಥರು ಇದು ಅಪಘಾತವಲ್ಲ ಹತ್ಯೆ ಎಂದು ಆರೋಪಿಸಿದ್ದರು. ಗ್ರಾಮಸ್ಥರ ಅರೋಪಗಳನ್ನ ಆಧರಿಸಿ ತನಿಖೆ ನಡೆಸಿದ ಪೊಲೀಸರು ದೇವರಾಜ್, ಮುನೀಂದ್ರ, ಶಿವಾನಂದ ಈ ಮೂವರನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದಾಗ ಪತ್ನಿಯ ಕೈವಾಡ ಗೊತ್ತಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಪತಿ ಅಶೋಕನನ್ನು ಕೊಲೆ ಮಾಡಲು ಪತ್ನಿ ಪುಷ್ಪ ಹಾಗೂ ಅವಳ ಪ್ರಿಯಕರ ದೇವರಾಜ್ ೨ ಲಕ್ಷಕ್ಕೆ ಮುನೀಂದ್ರ ಹಾಗೂ ಶಿವಾನಂದಗೆ ಸುಪಾರಿ ನೀಡಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಪತಿ ಶವ ಪತ್ತೆಯಾದ ದಿನ ಪುಷ್ಪ ಕಣ್ಣೀರು ಹಾಕಿದ್ದ ರೀತಿ ಅಕೆಯ ಹಾವಭಾವ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದನ್ನು ಗ್ರಾಮಸ್ಥರು ಗುರುತಿಸಿದ್ದರು.
ಪೈಂಟ್ ಕೆಲಸ ಒಪ್ಪಂದ ಕೊಡಿಸುವುದಾಗಿ ಮೃತ ಅಶೋಕನನ್ನ ಕರೆದಿದ್ದ ದೇವರಾಜ್ ಕಂಠಪೂರ್ತಿ ಕುಡಿಸಿದ್ದ. ನಶೆ ಏರುತ್ತಿದ್ದಂತೆ ದೇವರಾಜ್ ಸೇರಿದಂತೆ ಸುಪಾರಿ ನೀಡಿದ್ದ ಇನ್ನಿಬ್ಬರು ಸೇರಿ ರಾಡ್‌ನಿಂದ ಹೊಡದು ಉಸಿರಾಡದಂತೆ ಬಾಯಿ ಮೂಗು ಮುಚ್ಚಿ ಶವವನ್ನು ಅವರ ಬೈಕ್‌ನಲ್ಲಿ ಸಾಗಿಸಿ ಅಪಘಾತದಂತೆ ಬಿಂಬಿಸಿದ್ದರೆಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಬಾಕ್ಸ್..............
ಜ ೨೨ರಂದು ರಾತ್ರಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಗುದ್ದಿ ರಸ್ತೆ ಬದಿ ಬಿದ್ದಿದ್ದ ರೀತಿಯಲ್ಲಿ ಅಶೋಕ್ ಶವ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಅಪಘಾತದಿಂದ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಲಾಗಿತ್ತು. ಪತ್ನಿ ಪುಷ್ಪ ಸಹ ತನ್ನ ಪತಿ ಮದ್ಯಪಾನ ಮಾಡಿದ್ದ ಎಂದು ಹೇಳಿಕೆ ಕೊಟ್ಟಿದ್ದಳು. ಮರುದಿನ ಸ್ಥಳ ಮಹಜರು ನಡೆಸಿದಾಗ ಹತ್ಯೆಯಾದ ಜಾಗಕ್ಕೂ ಬೈಕ್ ಸಿಕ್ಕ ಜಾಗಕ್ಕೂ ಹೋಲಿಕೆಯಾಗದ ಕಾರಣ ಅನುಮಾನ ಬಂದಿತ್ತು ಎಂದು ಪೊಲೀಸ್ ಮಾಹಿತಿಗಳು ತಿಳಿಸಿವೆ.
ಮೃತನ ಪತ್ನಿ ಪುಷ್ಪ, ಪ್ರಿಯಕರ ಸಿದ್ದೇನಹಳ್ಳಿಯ ದೇವರಾಜ್, ದೊಡ್ಡಹುಲ್ಲೂರು ಮುನೀಂದ್ರ, ದೊಡ್ಡಹುಲ್ಲೂರಿನಲ್ಲಿ ನೆಲೆಸಿದ್ದ ಕಲುಬರುಗಿಯ ಶಿವಾನಂದ ಅಲಿಯಾಸ್ ಸಿದ್ದಪ್ಪ ಅವರಿಗೆ ೨ ಲಕ್ಷ ಸುಪಾರಿ ನೀಡಿದ್ದರು ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.