ಸಂಗೀತಕ್ಕೆ ಅಪಾರವಾದ ಶಕ್ತಿ ಇದ್ದು, ಅನೇಕ ರೋಗಗಳು ಕೂಡಾ ಇದರಿಂದ ವಾಸಿಯಾದ ಉದಾಹರಣೆಗಳಿವೆ, ಸಂಗೀತಾಸಕ್ತ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಪೋಷಿಸುವ ಮನೋಗುಣ ನಮ್ಮದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಲಕ್ಷ್ಮೇಶ್ವರ: ಸಂಗೀತಕ್ಕೆ ಅಪಾರವಾದ ಶಕ್ತಿ ಇದ್ದು, ಅನೇಕ ರೋಗಗಳು ಕೂಡಾ ಇದರಿಂದ ವಾಸಿಯಾದ ಉದಾಹರಣೆಗಳಿವೆ, ಸಂಗೀತಾಸಕ್ತ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಪೋಷಿಸುವ ಮನೋಗುಣ ನಮ್ಮದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಭಾನುವಾರ ಸಂಜೆ ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ನಡೆದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಕ್ಷ್ಮೇಶ್ವರ ಸಂಗೀತ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೆ ಆದ ವಿಶೇಷ ಹೆಸರು ಮಾಡಿದೆ. ಇಂತಹ ಕ್ಷೇತ್ರದಲ್ಲಿ ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ವಾಸು ಬೋಮಲೆ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ್ ಹಾಗೂ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಸಂಗೀತ ದೇವರ ಕೊಡುಗೆಯಾಗಿದ್ದು, ಸಂಗೀತಕ್ಕೆ ಎಲ್ಲವನ್ನೂ ಗೆಲ್ಲಬಲ್ಲ ಶಕ್ತಿಯಿದೆ. ಮಕ್ಕಳಿಗೆ ಸಂಗೀತ ಕಲೆ ರೂಢಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ-ಪರಂಪರೆ ಉಳಿಸಿ-ಬೆಳೆಸುವ ಸಂಪ್ರದಾಯ ನೆಲೆನಿಲ್ಲಬೇಕಾಗಿದೆ. ಸಂಗೀತ ಸೇವೆ ಮಾಡುವ ಕಲಾವಿದರು, ಸಂಘಟನೆ, ವೇದಿಕೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡದೇವರಮಠ, ಮಂಜುನಾಥ ಹೊಗೆಸೊಪ್ಪಿನ, ಕಾರ್ಯಕ್ರಮದ ರೂವಾರಿ ವಾಸು ಬೋಮಲೆ ಮಾತನಾಡಿದರು.
ಈ ವೇಳೆ ಉಮೇಶ ಕರಿಗಾರ, ಶಿವಪ್ರಕಾಶ ಮಹಾಂತಶೆಟ್ಟರ, ಗಿರೀಶ ತಟ್ಟಿ, ಶಿವಯೋಗಿ ಅಂಕಲಕೋಟಿ, ಮಹೇಶ ಲಿಂಬಯ್ಯಸ್ವಾಮಿಮಠ, ಚಂಬಣ್ಣ ಬಾಳಿಕಾಯಿ, ಸಮೇದ್ ಗೋಗಿ, ನಾರಾಯಣಸಾ ಪವಾರ, ರಮೇಶ ನವಲೆ, ರೇಖಾ ವಡ್ಡಟ್ಟಿ, ಗುರುಶಾಂತಯ್ಯ ಸಿಂದೊಳ್ಳಿಮಠ ಇದ್ದರು.ಹಿರಿಯ ಸಂಗೀತ ಕಲಾವಿದರಾದ ಶೀಲಾ ಪಾಟೀಲ, ಅಮರ ಜವಳಿ ಹಾಗೂ ಸ್ಥಳೀಯ ಕಲಾವಿದರಿಂದ ಸಂಗೀತ ಸುಧೆ ಪ್ರೇಕ್ಷಕರನ್ನು ಆಕರ್ಷಿಸಿತು. ಕಿರುತೆರೆಯ ಕಲಾವಿದರಾದ ಮಿಮಿಕ್ರಿ ಗೋಪಿ, ಹೆಣ್ಣಿನ ಪಾತ್ರದಲ್ಲಿ ರಾಜ್ಯಾದ್ಯಂತ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ರಾಘವೇಂದ್ರ (ರಾಗಿಣಿ), ಹಾವೇರಿ ಜಿಲ್ಲೆ ದೇವಗಿರಿಯ ಜ್ಯೂ ಪುನೀತ್ ರಾಜಕುಮಾರ ಮುಂತಾದವರಿಂದ ಹಾಸ್ಯ, ಮಿಮಿಕ್ರಿ ಆಗಮಿಸಿದ್ದ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಗಂಗಾಧರ ಮೆಣಸಿನಕಾಯಿ ಸ್ವಾಗತಿಸಿದರು, ಸ್ನೇಹಾ ಹೊಟ್ಟಿ ನಿರೂಪಿಸಿದರು, ಕಿರಣ ನವಲೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.