ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ: ತೋಂಟದ ಶ್ರೀಗಳು

KannadaprabhaNewsNetwork |  
Published : Jun 23, 2025, 12:33 AM IST
ಕಾರ್ಯಕ್ರಮದಲ್ಲಿ ರಮೇಶ್ ನವಲೆ ಮಾತನಾಡಿದರು. | Kannada Prabha

ಸಾರಾಂಶ

ಸಂಗೀತವು ಮಾನವ ಸಮಾಜದ ಸಂಸ್ಕೃತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.

ಗದಗ: ಸಂಗೀತವು ಮಾನವ ಸಮಾಜದ ಸಂಸ್ಕೃತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ಶಿವಾನುಭವದಲ್ಲಿ ಮಾತನಾಡಿದ ಅವರು, ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಕವಿ ಪುಟ್ಟರಾಜರು ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ಪುಟ್ಟರಾಜರು ತ್ರಿಭಾಷಾ ಕವಿಗಳಾಗಿದ್ದರು. ಅಂಧ ಅನಾಥ ಮಕ್ಕಳಿಗೆ ಸಂಗೀತ ವಿದ್ಯೆ ನೀಡುವ ಮೂಲಕ ಅವರ ಬಾಳಿಗೆ ದಾರಿದೀಪವಾದರು ಎಂದರು.

ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಂಗೀತ ಬೇಕೇ ಬೇಕು. ಸಂಗೀತವಿಲ್ಲದೆ ಪ್ರಾರಂಭವಾಗುವುದೆ ಇಲ್ಲ. ಶರಣರ ವಚನಗಳನ್ನು ಮೊದಮೊದಲು ಹಾಡಲು ಬರುವುದಿಲ್ಲ ಎನ್ನುತ್ತಿದ್ದರು. ಈಗ ಶರಣರ ವಚನಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತವೆ. ಬಸವಣ್ಣನವರು ನಾದ ಪ್ರಿಯ ಶಿವನೆಂಬರು ನಾದಪ್ರಿಯನಲ್ಲ. ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ ಎಂದರು. ಮೀರಾಬಾಯಿ ಸಂಗೀತವನ್ನು ಭಕ್ತಿಯಿಂದ ಹಾಡಿದಾಗ ಶಿವನನ್ನು ಕಂಡಳು. ಭೌತ ಪ್ರಪಂಚವನ್ನ ನೋಡುವುದು ವಿಜ್ಞಾನ. ಅಂತರಂಗವನ್ನು ಅರಿಯುವುದು ಆಧ್ಯಾತ್ಮ. ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ. ಸಂಗೀತವನ್ನು ಕಡ್ಡಾಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಬೋಧಿಸಬೇಕು ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನವಲೆ ಮಾತನಾಡಿ, ಸಿ.ಎನ್. ಶಾಸ್ತ್ರಿಯವರು 1932ರಲ್ಲಿ ರೇಡಿಯೋದಲ್ಲಿ ಮೊದಲು ವಚನಗಳನ್ನು ಹಾಡಿದರು. ನಂತರ ಮಲ್ಲಿಕಾರ್ಜುನ ಮನ್ಸೂರ್‌ರವರು ಅಕ್ಕಾ ಕೇಳವ್ವ ನಾನೊಂದು ಕನಸು ಕಂಡೆ ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ಸಂಗೀತಕ್ಕೆ ಒಲಿಯದ ಮನವಿಲ್ಲ. ಬ್ರಹ್ಮಾಂಡ ಸೃಷ್ಟಿಯಲ್ಲಿ ಓಂಕಾರ ನಾದ ಹೊಮ್ಮಿತು. ಸೃಷ್ಟಿಯಲ್ಲಿನ ಕಲ್ಲು, ಮಣ್ಣು, ಗಿಡ, ಎಲೆ, ಬಳ್ಳಿ, ಗಾಳಿ, ನೀರು, ಹಾರುವ ಹಕ್ಕಿ, ಎಲ್ಲದರಲ್ಲಿಯೂ ಸಂಗೀತವಿದೆ ಎಂದರು.ಬಸವರಾಜ ಸಿಂಧಗಿಮಠ, ವೈಷ್ಣವಿ ಗೂಳಿ, ಭೀಮಸಿಂಗ ರಾಠೋಡ, ಶ್ರೀಕಾಂತ್ ಚಿಮ್ಮಲ ಮತ್ತು ಭೀಮಪ್ಪ ಹಳ್ಳೇಗೋಳ ಭಾಗವಹಿಸಿ ವಚನಗಳಿಗೆ ನಾದರೂಪ ಕೊಟ್ಟರು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ತೆಹರಿನ್ ಎಸ್.ಖವಾಸ, ವಚನ ಚಿಂತನವನ್ನು ಪ್ರಣವಿ ಬಿ. ಅಣ್ಣಿಗೇರಿ ನೆರವೇರಿಸಿದರು. ದಾಸೋಹ ಸೇವೆಯನ್ನು ವಿಜಯಕುಮಾರ ಶೆಟ್ಟರ, ರಾಜೇಶ್ವರಿ ಶೆಟ್ಟರ್ ಮತ್ತು ಡಾ. ಶಿಲ್ಪಾ ಪ್ರಕಾಶ್ ಕುಷ್ಟಗಿ ಅವರು ವಹಿಸಿದ್ದರು.ಸಾಹಿತಿ ಅಂದಾನಪ್ಪ ವಿಭೂತಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ