ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಮರ ಮೌನ ಪ್ರತಿಭಟನೆ

KannadaprabhaNewsNetwork |  
Published : Jul 06, 2025, 01:48 AM IST
5ಕೆಎಂಎನ್ ಡಿ20 | Kannada Prabha

ಸಾರಾಂಶ

ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಷರಿಯತ್ ನ ವಿರುದ್ಧವಾಗಿದೆ. ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಳಿದು ಪ್ರತಿಭಟನೆ ಮಾಡುತ್ತಿದೆ. ಇದರ ಭಾಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರತಿಭಟನೆ ಮಾಡಿದ ಮುಸ್ಲಿಮರು ಭಿತ್ತಿ ಪತ್ರ ಹಿಡಿದು ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಮಸೀದಿ ಎದುರು ಪ್ಲೇ ಕಾರ್ಡ್ ಪ್ರದರ್ಶನ ಮಾಡಿ ಮುಸ್ಲಿಮರು ಮೌನ ಪ್ರತಿಭಟನೆ ನಡೆಸಿದರು.ಸಂಪ್ರದಾಯಿಕ ನಮಾಜ್ ಮುಗಿಸಿದ ಬಳಿಕ ಮಸೀದಿ ಮುಂದಿನ ಮುಖ್ಯ ರಸ್ತೆಗಿಳಿದ ಮುಸ್ಲಿಮರು ಮುಖ್ಯ ರಸ್ತೆಯ ಒಂದು ಬದಿಯಲ್ಲಿ ನಿಂತು ಸಾರ್ವಜನಿಕ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಮಾನವ ಸರಪಳಿ ಮಾಡುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಳಿದು ಪ್ರತಿಭಟನೆ ಮಾಡುತ್ತಿದೆ. ಇದರ ಭಾಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಸೀದಿ ಪ್ರತಿಭಟನೆ ಮಾಡಿದ ಮುಸ್ಲಿಮರು ಭಿತ್ತಿ ಪತ್ರ ಹಿಡಿದು ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.ಅಖಿಲ ಭಾರತ ಮುಸ್ಲಿಂ ಕಾನೂನು ಬೋರ್ಡ್‌ನ ತಾಲೂಕು ಅಧ್ಯಕ್ಷ ಸೌದಿ ಫಯಾಜ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಷರಿಯತ್ ನ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಗೌಸ್ ಖಾನ್, ಜಮೀರ್ ಖಾನ್, ನವೀದ್ ಅಹ್ಮದ್, ಜಾವೀದ್, ಸಾಬಿತ್ ಖಾನ್, ಜಮೀಲ್ ಅಹ್ಮದ್, ಸೈಯದ್ ರೋಷನ್,ಮತೀನ್, ಸೈಯದ್ ಖಾದರ್, ಗುಡ್ಡೋ, ನಜೀಬುಲ್ಲಾ, ಇರ್ಫಾನ್ ಸೇಫ್, ರಿಯಾಜ್, ಸಲ್ಲು, ನಾಸಿರ್, ಸೈಯದ್, ಸೈಯದ್ ಖಲೀಲ್ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಯುವಕರು ಭಾಗವಹಿಸಿದ್ದರು.

ನೂತನ ಬಿಇಒ ಧರ್ಮಶೆಟ್ಟಿಗೆ ಅಭಿನಂದನೆ

ಪಾಂಡವಪುರ:

ತಾಲೂಕಿಗೆ ಆಗಮಿಸಿದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಅವರನ್ನು ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರು ಅಭಿನಂದಿಸಿ ಸ್ವಾಗತಿಸಿದರು.

ಈ ಹಿಂದಿನ ಬಿಇಒ ರವಿಕುಮಾರ್ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ನೂತನ ಬಿಇಒ ಆಗಿ ಅಧಿಕಾರ ಸ್ವೀಕರಿಸಿದ ಧರ್ಮಶೆಟ್ಟಿ ಅವರಿಗೆ ಮೈಸೂರು ಪೇಟ ಧರಿಸಿ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ವೇಳೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ.ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಪ್ರಕಾಶ್, ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ, ಶಿಕ್ಷಕರಾದ ಶಿವಲಿಂಗಯ್ಯ, ಎಂ.ಎಚ್.ನಂದೀಶ್, ಕೆ.ಕೆಂಪೇಗೌಡ, ಶಿವರಾಜು, ಮಲ್ಲೇಶ್, ಆರ್.ಸಿ.ನಾಗೇಗೌಡ, ಡಿ.ಶಿವಣ್ಣ, ಕೆಂಚೇಗೌಡ, ಸುಮಂಗಲ, ಮಂಜುಳಾ, ಶಿವರಾಮು, ಮಂಜುನಾಥ್, ಚಂದ್ರು, ರಾಜು, ನಾಗಮಣಿ, ರವಿಕುಮಾರ್, ಪುಟ್ಟರಾಜು, ಪ್ರದೀಪ್, ಪದ್ಮ, ಧನಂಜಯ, ಶ್ರೀನಿವಾಸ್ ಇತರರು ಇದ್ದರು.ನಾಳೆ ಅಭಿನಂದನಾ ಸಮಾರಂಭ

ಮಂಡ್ಯ:

ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಂ ಹಾಗೂ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರಿಗೆ ಅಭಿನಂದನಾ ಸಮಾರಂಭವನ್ನು ಜು.೭ರಂದು ಬೆಳಗ್ಗೆ ೧೧ ಗಂಟೆಗೆ ಕೆ.ವಿ.ಶಂಕರಗೌಡ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ದಿವ್ಯಸಾನ್ನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನೆರವೇರಿಸಲಿದ್ದು, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಶಾಸಕ ಪಿ.ರವಿಕುಮಾರ್ ಅಭಿನಂದಿಸುವರು. ಅಭಿನಂದಿತರ ಕುರಿತು ಹಿರಿಯ ಪತ್ರಕರ್ತ ಕೆ.ಎನ್.ರವಿ ಮಾತನಾಡುವರು ಎಂದರು. ಗೋಷ್ಠಿಯಲ್ಲಿ ಶಿವನಂಜಯ್ಯ, ಆನಂದ ಇದ್ದರು.

PREV