ಮಠ, ಮಂದಿರ, ರೈತರ ಜಮೀನು ವಕ್ಫ್‌ ಪಾಲು

KannadaprabhaNewsNetwork |  
Published : Nov 04, 2024, 12:26 AM IST
ಚಿತ್ರ 3ಬಿಡಿಆರ್3ಹುಮನಾಬಾದ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಮಾತನಾಡಿದರು. | Kannada Prabha

ಸಾರಾಂಶ

Mutt, Mandir, Farmers land is Waqf share

-ಇಂದು ಬಿಜೆಪಿ ಪ್ರತಿಭಟನೆ, ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ

----

ಕನ್ನಡಪ್ರಭ ವಾರ್ತೆ, ಹುಮನಾಬಾದ್‌

ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ಹಿಂದೂ ಧರ್ಮದ ಮಠ, ಮಂದಿರ ಹಾಗೂ ರೈತರ ಭೂಮಿಯನ್ನು ರಾಜ್ಯ ಸರ್ಕಾರ ವಕ್ಫ್‌ ಮಂಡಳಿ ಹೆಸರಿಗೆ ಪರಿವರ್ತಿಸುವ ದುಷ್ಕೃತ್ಯ ರಾಜ್ಯಾದ್ಯಂತ ಹರಡುತ್ತಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನ. 4ರಂದು ಪ್ರತಿಭಟನೆಗೆ ಸಿದ್ಧವಾಗಿದೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ವಿಷಯ ಅಂಗೀಕರಿಸುವ ಮುನ್ನ ರಾಜ್ಯದ ಸಂಪತ್ತು ರೈತರ ಜಮೀನು, ಸರ್ಕಾರಿ ಆಸ್ತಿಪಾಸ್ತಿಗಳ ಪಹಣಿ ಕಾಲಂ ನಂ.11ರಲ್ಲಿ ವಕ್ಛ್‌ ಹಕ್ಕು ನಮೂದಿಸಿದರೆ ನಂತರ ಕಾನೂನಾತ್ಮಕ ಹೋರಾಟ ನಡೆಸಬಹುದು ಎಂಬ ದುರಾಲೋಚನೆಯ ಕಾರಣಕ್ಕೆ ಈ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ನ.4ರಂದು ಸೋಮವಾರ ಡಾ. ಅಂಬೇಡ್ಕರ್‌ ವೃತ್ತದಿಂದ ತಾಲೂಕು ಆಡಳಿತ ಸೌಧ ವರೆಗೆ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದು, ವಿವಿಧ ರೈತಪರ ಸಂಘಟನೆಯೊಂದಿಗೆ ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆ, ಮಠ ಮಂದಿರ ಆಡಳಿತ ಮಂಡಳಿ ಕೂಡ ಈ ಪ್ರತಿಭಟನೆಗೆ ಕೈಜೋಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಮಾತನಾಡಿ. ವಕ್ಫ ಹೆಸರಿನಲ್ಲಿ ದೇಶಾದ್ಯಂತ ಜಾಗ ಲೂಟಿ ಮಾಡಲು ಪ್ರಯತ್ನ ನಡೆದಿದ್ದು, ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಕೂಡಲೇ ವಕ್ಫ್‌ ನೋಟಿಸ್‌ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿ, ವಕ್ಫ್‌ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭೂಮಿ ಲೂಟಿ ನಿಯಂತ್ರಣಕ್ಕೆ ಮುಂದಾಗಿದೆ. ಅದಕ್ಕಾಗಿ ವಕ್ಛ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ರಾಜ್ಯದಲ್ಲಿ ಜಮೀರ್‌ ಅಹ್ಮದ್‌ ಅವರಂಥಹ ಸಚಿವರು ಒತ್ತಡ ಸೃಷ್ಠಿಸಿ ಪಹಣಿ ಬದಲಿಸಲು ಮುಂದಾಗಿದ್ದಾರೆ ಎಂದೂ ದೂರಿದರು.

ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಮಾಜಿ ಮಂಡಲ ಅಧ್ಯಕ್ಷ ವಿಶ್ವನಾಥ ಪಾಟೀಲ್‌ ಮಾಡಗೋಳ, ಅಂಬೇಡ್ಕರ್‌ ನಿಗಮ ಮಾಜಿ ಸದಸ್ಯ ಬಸವರಾಜ ಆರ್ಯ, ಮಂಡಲ ಅಧ್ಯಕ್ಷ ಅನೀಲ್‌ ಪಸರ್ಗಿ, ಕಾರ್ಯದರ್ಶಿ ರವಿಕುಮಾರ ಹೊಸಳ್ಳಿ ಇದ್ದರು.

----

ಫೈಲ್‌ 3ಬಿಡಿ4

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ