ಮರಿಯಮ್ಮನಹಳ್ಳಿ: ಮಠಗಳು ಕೇವಲ ಒಂದು ಗ್ರಾಮಕ್ಕೆ, ಒಂದು ಜಾತಿಗೆ ಸೀಮಿತವಲ್ಲ. ಮಠಗಳು ನಡೆದಾಡುವ ದೇವಾಲಯಗಳು. ಅವು ಸರ್ವವ್ಯಾಪಿಯಾದವುಗಳು ಎಂದು ಜಿ.ನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನಪ್ರಭು ಶ್ರೀ ಹೇಳಿದರು.
ಮಠಗಳು ಆಯಾ ಮಠದ ಸ್ವಾಮೀಜಿಗಳಿಂದ ಬೆಳೆಯುವುದಿಲ್ಲ. ಭಕ್ತರೆಲ್ಲರೂ ಕೂಡಿಕೊಂಡು ಬೆಳೆಸಬೇಕು. ದೇವಾಲಯಗಳು ಒಂದು ಗ್ರಾಮಕ್ಕೆ ಸೀಮಿತವಾದರೆ ಮಠಗಳು ತನ್ನ ಪರಿಧಿಯ ಎಲ್ಲ ಊರುಗಳಿಗೆ ಸಂಬಂಧಿಸಿದ್ದು, ಸಾಮಾಜಿಕ, ಧಾರ್ಮಿಕವಾಗಿ ಸೇವೆ ಸಲ್ಲಿಸುವ ಸಂಚಾರಿ ದೇವಾಲಯಗಳು ಎಂದರು.
ಒಪ್ಪತ್ತೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಫೆ.18ರಿಂದ ಆರಂಭಗೊಳ್ಳುವ ಶಿವಾನುಭವ ಭೋದಾಮೃತ ಕಾರ್ಯಕ್ರಮಕ್ಕೆ ಹಿರಿಯರು ತಮ್ಮೊಂದಿಗೆ ಮಕ್ಕಳನ್ನು ಕರೆತನ್ನಿ, ಯುವಕರು ಕಡ್ಡಾಯವಾಗಿ ಪಾಲ್ಗೊಂಡು ಪ್ರವಚನ ಆಲಿಸಬೇಕು ಎಂದರು.ಫೆ.22ರಂದು ಲಿಂ.ಜಗದ್ಗರು ಸಂಗನಬಸವೇಶ್ವರ ಪೂಜಾ ಮಂದಿರ ಮತ್ತು ಲಿಂ.ಮರಿಮಹಾಂತೇಶ್ವರ ಅತಿಥಿ ಗೃಹದ ಉದ್ಘಾಟನೆಯೊಂದಿಗೆ ದಾನಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಫೆ.18ರಿಂದ ಫೆ.24ರವರೆಗೆ ಪ್ರತಿದಿನ ಪ್ರವಚನ ನಡೆಯಲಿದೆ. ಈ ಪ್ರವಚನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಬೇಕು ಎಂದು ಅವರು ಹೇಳಿದರು.
ಎಲ್ಲ ಗ್ರಾಮಗಳ ಭಕ್ತರು ಕೂಡಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿ, ನಿಮ್ಮಿಂದ ಸಾಧ್ಯವಾದ ಸೇವೆಯನ್ನು ಸಲ್ಲಿಸಲು ಸ್ವಾಮೀಜಿಗಳು ತಿಳಿಸಿದರು.
ಮಾತನಾಡಿದರು.