- ಕಂದಾಯ ಇಲಾಖೆ ಕ್ರಾಂತಿಕಾರಿ ಅಭಿಯಾನ: ಸಚಿವ ಕೃಷ್ಣ ಭೈರೇಗೌಡ ।
- - -
ಕನ್ನಡಪ್ರಭ ವಾರ್ತೆ ದಾವಗೆರೆದಶಕಗಳ ಭೂ ವಿವಾದಗಳಿಗೆ ಇತಿಶ್ರೀ ಹಾಡಲು ಕಂದಾಯ ಇಲಾಖೆ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ ಆರಂಭಿಸಿದ್ದು, ರೈತರು, ಸಾರ್ವಜನಿಕರ ಕಂದಾಯ ಕಚೇರಿಗಳ ಅಲೆದಾಟ ತಪ್ಪಿಸಲು ಮನೆ ಬಾಗಿಲಿಗೇ ಸೇವೆ ತಲುಪಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನ ಸುಮಾರು 90,000 ಜಮೀನು ಪೈಕಿ ಮಾರ್ಚ್ ಅಂತ್ಯದೊಳಗೆ ಕನಿಷ್ಠ ಶೇ.50ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿ ಪಡೆದು, ಪೋಡಿ ಖಾತೆ ದುರಸ್ತ ಮಾಡಿಕೊಡುತ್ತಾರೆ ಎಂದು ಹೇಳಿದರು.
49 ಲಕ್ಷ ಜಮೀನು ಮೃತರ ಹೆಸರಿನಲ್ಲಿ:
2 ತಿಂಗಳಲ್ಲಿ ಮುಗಿಸಲು ಗುರಿ:
63 ಕೋಟಿ ಪುಟ ಸ್ಕ್ಯಾನಿಂಗ್:
ಇನ್ನೂ 1,000 ರೋವರ್ಸ್ ಖರೀದಿ:
- - -
(ಬಾಕ್ಸ್)* ಗ್ರಾಮ ಲೆಕ್ಕಿಗನಿಂದ ಮಂತ್ರಿವರೆಗೆ ಇ-ಆಫೀಸ್‌ನಲ್ಲೇ ಕೆಲಸ!
- ರಾಜ್ಯದಲ್ಲಿ 750 ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ಸಾಗಿದೆ: ಕೃಷ್ಣ ಭೈರೇಗೌಡದಾವಣಗೆರೆ: ರಾಜ್ಯದಲ್ಲಿ ಗ್ರಾಮ ಲೆಕ್ಕಿಗರಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರೂ ಶೇ.100ರಷ್ಟು ಇ-ಆಫೀಸ್ ಮೂಲಕವೇ ಮಾರ್ಚ್ ತಿಂಗಳಿನಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯವಸ್ಥೆ ಮೂಲಕ ಯಾವ ಕಡತ ಯಾರ ಬಳಿ ಎಷ್ಟು ದಿನಗಳಿಂದ ಬಾಕಿ ಇದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಿದೆ. ಇ-ಆಫೀಸ್ ವ್ಯವಸ್ಥೆಯಿಂದ ಇ-ಆಫೀಸ್‍ನಲ್ಲಿ ಫೈಲ್ ಕಳೆದು ಹಾಕಲು ಸಾಧ್ಯವೇ ಇಲ್ಲ ಎಂದರು.ಹಿಂದೆಲ್ಲಾ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಹೋಗಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಕಡತಗಳು ಈಗ ಒಂದು ಕ್ಷಣದಲ್ಲಿ ವರ್ಗಾವಣೆ ಆಗುತ್ತವೆ. ಈ ವ್ಯವಸ್ಥೆಯು ಕೆಲಸದಲ್ಲಿ ವೇಗ ತರುತ್ತದೆ. ಕಡತಗಳನ್ನು ಮುಚ್ಚಿಡಲು ಬರುವುದಿಲ್ಲ ಮತ್ತು ಪಾರದರ್ಶಕತೆಯಿಂದ ಕೆಲಸಗಳು ಆಗುತ್ತವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಭೂಮಿ ಮಾಲೀಕತ್ವವು ಆರ್ಥಿಕ ಶಕ್ತಿ ನೀಡುವ ಬದಲು, ಇಂದು ಅನೇಕರಿಗೆ ಗೊಂದಲ ಮತ್ತು ವ್ಯಾಜ್ಯದ ಮೂಲವಾಗಿದೆ. ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಕಾರಣ ಹುಡುಕಿ ಅವುಗಳನ್ನು ಸರಿಪಡಿಸುವ ಮೂಲಕ "ಭೂ ಗ್ಯಾರಂಟಿ " ನೀಡುವತ್ತ ಸರ್ಕಾರ ಸಂಕಲ್ಪ ಮಾಡಿದೆ. ಈ ಬಗ್ಗೆ ತಮ್ಮ ಸರ್ಕಾರ ಹೆಚ್ಚು ಗಮನಹರಿಸಿದೆ ಎಂದು ತಿಳಿಸಿದರು.
ಕಳೆದ ವರ್ಷ 1,000 ಗ್ರಾಮ ಲೆಕ್ಕಿಗರನ್ನು ನೇಮಿಸಿಕೊಳ್ಳಲಾಗಿದ್ದು, ಪ್ರಸ್ತುತ 750 ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 5,000 ಗ್ರಾಮ ಲೆಕ್ಕಿಗರಿಗೆ ಲ್ಯಾಪ್‍ಟಾಪ್ ನೀಡಿದ್ದು, ಮಾರ್ಚ್ ವೇಳೆಗೆ ಉಳಿದ 2 ಸಾವಿರ ಜನರಿಗೂ ವಿತರಿಸಲಾಗುವುದು. ಇದು ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲು ಸಹಕಾರಿ ಎಂದು ಅವರು ಹೇಳಿದರು.ಈ ಹಿಂದೆ 8,345 ಗ್ರಾಮ ಲೆಕ್ಕಿಗರಲ್ಲಿ ಕೇವಲ 2 ಸಾವಿರ ಜನರಿಗೆ ಮಾತ್ರ ಕಚೇರಿಗಳಿದ್ದವು. ತಾವು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ, ಗ್ರಾಪಂಗಳಲ್ಲೇ 7,850 ಗ್ರಾಮ ಲೆಕ್ಕಿಗರಿಗೆ ಕಚೇರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜನರಿಗೆ ಗ್ರಾಮ ಲೆಕ್ಕಿಗರು ಸುಲಭವಾಗಿ ಲಭ್ಯವಾಗುತ್ತಾರೆ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ ನ್ಯಾಯಾಲಯಗಳಲ್ಲಿ ಹೆಚ್ಚು ಸುಧಾರಣೆ ತಂದು ತಹಸೀಲ್ದಾರರ ನ್ಯಾಯಾಲಯದಲ್ಲಿ ಬಾಕಿ ಇದ್ದ 10774 ಪ್ರಕರಣಗಳಲ್ಲಿ ಈಗ 480 ಪ್ರಕರಣ ಮಾತ್ರ ಬಾಕಿ ಉಳಿದಿವೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 73624 ಪ್ರಕರಣಗಳಲ್ಲಿ 10800 ಮಾತ್ರ ಬಾಕಿ ಇವೆ. ಅವುಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
- - --6ಕೆಡಿವಿಜಿ3, 4, 5.ಜೆಪಿಜಿ:
ದಾವಣಗೆರೆ ಡಿಸಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.