ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಾರ್ಥಕ ಬದುಕಿನಲ್ಲೀಗ ಅಮೃತ ಮಹೋತ್ಸವ
ಉದ್ಯಮಿಯಾಗಿ ನಿಮ್ಮ ಅನುಭವ ಹೇಳಿ?
ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಹೇಗೆ ಸೇರಿದಿರಿ?
ಯಕ್ಷಗಾನದಲ್ಲಿ ಹೇಗೆ ಆಸಕ್ತಿ ಮೂಡಿತು?
ನೀವೂ ಯಕ್ಷಗಾನ ಕಲಿತಿದ್ದಿರಲ್ಲ?
ನಾಟಕ - ಜನಪದದ ಸೆಳೆತ ಹೇಗಾಯಿತು?
ನಮಗೆ ಸಾಹಿತ್ಯಾಸಕ್ತಿ ಹೇಗೆ ಬೆಳೆಯಿತು?
ಕಲೆ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಸಾಹಿತಿಗಳ ಒಡನಾಟ ಸಹಜವಾಗಿಯೇ ಆಯಿತು. ಇದು ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು. ಸಾಮಾಜಿಕ ಜಾಲತಾಣದಲ್ಲಿ ಕಳೆದುಹೋಗುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಶ್ರೀಮಂತ ಪರಂಪರೆಯನ್ನು ಮನದಟ್ಟು ಮಾಡುವ, ನೈತಿಕ, ಸಾಮಾಜಿಕ ಮೌಲ್ಯ ಬಿತ್ತುವುದಕ್ಕಾಗಿ ಒಂದಷ್ಟು ಕೃತಿಗಳನ್ನು ರಚಿಸಿದೆ.ದಾರಿದೀಪ, ಬಾಳಬೆಳಕು, ಹೊಂಬೆಳಕು, ಮುಂಬೆಳಕು, ಪಾಥೇಯ, ಹೊಂಗಿರಣ, ಪಥದೀಪಿಕಾ, ಪರಂಪರಾಗತ, ಬರಹತರಹ, ಧರ್ಮಂಚರ, ಕಲಾಸಂಚಯ, ನಿತ್ಯಸತ್ಯ ಇತ್ಯಾದಿ ಕೃತಿಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನ ಮಾಡುತಿದ್ದೇನೆ. ‘ಕಲಾಸಂಚಯ’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಬಹುಮಾನ ಸಿಕ್ಕಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಡು’ ಗೌರವ ಕೂಡ ಸಿಕ್ಕಿದೆ. ಈ ಮಾನಸನ್ಮಾನಗಳಿಂದ ನಾನು ಕೃತಾರ್ಥನಾಗಿದ್ದೇನೆ.
ನಿಮಗೆ ಒಲಿದ ಪ್ರಶಸ್ತಿಗಳು ಯಾವುವು?ಬೇಕಾದಷ್ಟು ಪ್ರಶಸ್ತಿಗಳು, ಸನ್ಮಾನಗಳಾಗಿವೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ 2022ರಲ್ಲಿ ಮತ್ತು 2018ರಲ್ಲಿ ಪುಣೆಯ ಇಂಡಿಯನ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿವೆ.
ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕೈರಳಿ ಶ್ರೀ ಪ್ರಶಸ್ತಿ, ಕರ್ನಾಟಕ ರತ್ನ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ಸಮಾಜ ಸೇವಾರತ್ನ ಗೌರವ, ಬೆಂಗಳೂರಿನಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ‘ಸಿದ್ಧಗಂಗಾ ಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ’ಗಳು ಒಲಿದಿವೆ.ಫ್ಯಾಮಿಲಿ ಟ್ರಸ್ಟ್ ನ ಆರಂಭ ಹೇಗೆ?
ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹುಟ್ಟು ಹಾಕಿದ್ದೇವೆ. ಇದರ ಮೂಲಕ ನನ್ನ ಪೂಜ್ಯ ಮಾತಾಪಿತರ ಸ್ಮರಣಾರ್ಥ ‘ಯಕ್ಷಗಾನ ವಿದ್ವಾಂಸ ಪ್ರಶಸ್ತಿ’ಯನ್ನು ನೀಡುತ್ತಿದ್ದೇವೆ. ‘ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದೇವೆ. ಟ್ರಸ್ಟ್ ಮೂಲಕ ಈಗಾಗಲೇ ಅನೇಕ ಕಲೆ ಸಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮುಂದೆ ಇನ್ನಷ್ಟು ಕಾರ್ಯಕ್ರಮಗಳು ನಡೆಸಲಿದ್ದೇವೆ. ನನ್ನ ಪತ್ನಿ ಗಿರಿಜಾ ಶಿವರಾಮ ಶೆಟ್ಟಿ ಮತ್ತು ನಾಲ್ವರು ಮಕ್ಕಳು ಸೇರಿ ಈ ಟ್ರಸ್ಟ್ ಮುನ್ನಡೆಸುತಿದ್ದೇವೆ.ಗುರುತೇ ಇಲ್ಲದ ಯಕ್ಷ ಪ್ರತಿಭೆಗಳನ್ನು ಗುರುತಿಸಿದ್ದೇನೆ!ಪ್ರಸ್ತುತ ಕರ್ನಾಟಕ ಸರ್ಕಾರ ನನ್ನನ್ನು ‘ಕರ್ನಾಟಕ ಯಕ್ಷಗಾನ ಅಕಾಡೆಮಿ’ಯ ಅಧ್ಯಕ್ಷರನ್ನಾಗಿ ಮಾಡಿದೆ. ಅಕಾಡೆಮಿಯ ಸವಲತ್ತು, ಗೌರವಗಳು ಅರ್ಹ ಕಲಾವಿದರಿಗೆ ಸಿಗಬೇಕು, ಅಕಾಡೆಮಿಯ ಕಾರ್ಯ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತಿದ್ದೇನೆ.
ಅಕಾಡೆಮಿ ವ್ಯಾಪ್ತಿಯ ಕರಾವಳಿ, ಮಲೆನಾಡಿನ 5 ಜಿಲ್ಲೆಗಳಲ್ಲದೇ, ಹಾಸನ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ 2 ವರ್ಷಗಳಿಂದ 100ಕ್ಕೂ ಹೆಚ್ಚು ವಿಚಾರಗೋಷ್ಠಿ, ಕಮ್ಮಟ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಅಶಕ್ತ ಕಲಾವಿದರಿಗೆ ಸಹಾಯಹಸ್ತ ಸೇರಿ 1 ಕೋಟಿ ರು.ಗೂ ಹೆಚ್ಚುಅನುದಾನ ನೀಡಿದ್ದೇವೆ.ಯಕ್ಷಗಾನ ರಂಗದಲ್ಲಿ ಗುರುತಿಸಲ್ಪಡದ ಪ್ರತಿಭೆಗಳನ್ನು ಗುರುತಿಸಿ, ಅವರಿಂದ ಅರ್ಜಿ ಪಡೆಯದೇ ಪ್ರಶಸ್ತಿಗಳನ್ನು ನೀಡಿದ್ದೇವೆ. ಅಕಾಡೆಮಿ ಇರುವುದೇ ಗೊತ್ತಿಲ್ಲದ ಯಕ್ಷ ಪ್ರತಿಭೆಗಳನ್ನು ಗುರುತಿಸಲು ಹಾಗೂ ಯಕ್ಷಗಾನಕ್ಕಾಗಿ ಕೆಲಸ ಮಾಡುವ ಸಂಘಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಮಾಡಿಸಿದ್ದೇವೆ. ಈ ಎಲ್ಲಾ ಕೆಲಸಗಳು ನನಗೆ ಬಹಳ ಆತ್ಮತೃಪ್ತಿ ನೀಡಿವೆ.