ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿಗರ ಮನರಂಜಿಸಲು 45 ದಿನಗಳ ಬೇಸಿಗೆ ವಸ್ತುಪ್ರದರ್ಶನಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.ಕರ್ನಾಟಕ ವಸ್ತುಪ್ರದರ್ಶನಪ್ರಾಧಿಕಾರದ ವತಿಯಿಂದ ದೊಡ್ಡಕೆರೆ ಮೈದಾನದ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ನಡೆದ ಮೈಸೂರು ದಸರಾ ವಸ್ತುಪ್ರದರ್ಶನ 2024-25ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಬಾರಿ ಬೇಸಿಗೆಯಲ್ಲಿ 45 ದಿನಗಳ ವಸ್ತುಪ್ರದರ್ಶನ ಆಯೋಜಿಸಿ ಒಂದೇ ಸೂರಿನಡಿಯಲ್ಲಿ ಶಾಫಿಂಗ್, ಆಹಾರ ಮಳಿಗೆಗಳು, ಅಮ್ಯೂಸ್ಮೆಂಟ್, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು ಉದ್ಯಮಿಗಳಿಗೆ ವ್ಯಾಪಾರಸ್ಥರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತದೆ ಎಂದರು.ವರ್ಷಪೂರ್ತಿ ವಸ್ತುಪ್ರದರ್ಶನ ನಡೆಯಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಈಗಾಗಲೇ ನೂರು ದಿನಗಳ ದಸರಾ ವಸ್ತುಪ್ರದರ್ಶನ, ಐವತ್ತು ದಿನಗಳ ಗೃಹಶೋಭೆ ಹಾಗೂ ಖಾಸಗಿ ವಸ್ತುಪ್ರದರ್ಶನಗಳು ಜರಗಿದ್ದು, 20 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸೆಲೆಬ್ರೆಟಿ ಬ್ರಾಂಡ್ ಇವೆಂಟ್ಸ್ ವರೆಗೂ ವಸ್ತುಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆಯಾಗಿದೆ, ಮುಂದಿನ ದಿನದಲ್ಲಿ ಬೆಳಗಾವಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ವಸ್ತುಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದರು.ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಿಇಓ ಕೆ. ರುದ್ರೆಶ್ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ರಘುರಾಜೇ ಅರಸ್ ಅವರನ್ನು ಉಪಸಮಿತಿಯಿಂದ ಪದಾಧಿಕಾರಿಗಳಾದ ರಾಕೇಶ್ ಕುಮಾರ್, ರಂಗಸ್ವಾಮಿ ನೇತೃತ್ವದಲ್ಲಿ ಸನ್ಮಾನಿಸಿತು. ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಎನ್.ಎಸ್.ಯು.ಐ ರಾಷ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಭೈರಪ್ಪ, ಪುಷ್ಪಲತಾ ಜಗನ್ನಾಥ್, ಶ್ರೀಕಂಠಯ್ಯ, ಆರೀಫ್ ಹುಸೇನ್, ದಕ್ಷಿಣ ಮೂರ್ತಿ, ಟಿ.ಬಿ. ಚಿಕ್ಕಣ್ಣ, ಶಾಂತಕುಮಾರಿ, ನಗರಪಾಲಿಕೆ ಮಾಜಿ ಸದಸ್ಯರಾದ ಸೈಯದ್ ಹಜರತ್ ಉಲ್ಲಾ, ಕೆ.ವಿ. ಮಲ್ಲೇಶ್, ಫೈರೋಜ್ ಖಾನ್, ಬ್ಲಾಕ್ ಅಧ್ಯಕ್ಷರಾದ ಜಿ. ಸೋಮಶೇಖರ್, ಇಕ್ಬಾಲ್, ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎಸ್. ರಘು, ಒಸಮಾ ಖಾನ್, ಶೌಕತ್ ಅಲಿಖಾನ್, ಪ್ರಸನ್ನಕುಮಾರ್, ಶಾರದಾ ಸಂಪತ್, ರಾಜೇಶ್ವರಿ, ಕೈಸರ್ ಅಹಮದ್, ರಂಗಸ್ವಾಮಿ, ಲತಾ ರಂಗನಾಥ್, ಚಂದ್ರಕಲಾ, ವ್ಯವಸ್ಥಾಪಕ ನಂದಕುಮಾರ್, ವೆಂಕಟೇಶ್, ನಿರೂಪಕ ಅಜಯ್ ಶಾಸ್ತ್ರಿ, ಗುರುರಾಜ್ ಇದ್ದರು.