ಮೈಸೂರಿನಲ್ಲಿ ₹120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ ನಿರ್ಮಾಣ - ಕೆಐಡಿಬಿ ಸಾಲ ಸಾಮರ್ಥ್ಯ ಹೆಚ್ಚಳ

Published : Jan 03, 2025, 10:07 AM IST
Best way to see Mysuru? Go 'Trin Trin'!

ಸಾರಾಂಶ

ಸಾರಿಗೆ ಇಲಾಖೆಯಿಂದ ಮೈಸೂರಿನ ಬನ್ನಿ ಮಂಟಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಾಣ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು : ಸಾರಿಗೆ ಇಲಾಖೆಯಿಂದ ಮೈಸೂರಿನ ಬನ್ನಿ ಮಂಟಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಾಣ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಾರೆ. ನಿತ್ಯ 5 ಸಾವಿರಕ್ಕೂ ಹೆಚ್ಚು ಬಸ್ಸು ಸಂಚರಿಸುತ್ತಿವೆ. ಈಗಿರುವ ಬಸ್ಸು ನಿಲ್ದಾಣದ ಸಾಮರ್ಥ್ಯ ಸಾಕಾಗುತ್ತಿಲ್ಲ. ಹೀಗಾಗಿ ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಸಂಪುಟದ ಇತರೆ ತೀರ್ಮಾನಗಳು:

-ಕೆಐಎಡಿಬಿ ಭೂಸ್ವಾಧೀನ ವೆಚ್ಚಗಳಿಗೆ ಅನುವಾಗುವಂತೆ ಸಾಲ ಪಡೆಯುವ ಮಿತಿಯನ್ನು 500 ಕೋಟಿ ರು.ಗಳಿಂದ 5,000 ಕೋಟಿ ರು.ಗೆ ಹೆಚ್ಚಳ.

-ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶೇ.90 ರಷ್ಟು ರಿಯಾಯಿತಿ ದರದಲ್ಲಿ 591.63 ಚ.ಮೀ. ನಿವೇಶನ ಮಂಜೂರು.

-ಚಿಂತಾಮಣಿಯ ತಾಲೂಕಿನ ವಡಗನಹಳ್ಳಿಯಲ್ಲಿ 149.75 ಕೋಟಿ ರು. ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.

-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಭಾಘದ ಸರ್ಕಾರಿ ವಸತಿ ನಿಲಯಗಳಿಗೆ 56.92 ಕೋಟಿ ರು. ವೆಚ್ಚದಲ್ಲಿ ಬೆಡ್‌ಶೀಟ್‌, ಸೊಳ್ಳೆ ಪರದೆ ಸೇರಿ ಇತರೆ ಅಗತ್ಯ ವಸ್ತುಗಳ ಖರೀದಿ.

-ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಬಿಳಿ ಜೋಳ ಖರೀದಿಗೆ 10.88 ಕೋಟಿ ರು. ವೆಚ್ಚದಲ್ಲಿ 15 ಲಕ್ಷ ಸೆಣಬಿನ ಗೋಣಿ ಚೀಲ ಖರೀದಿ.

PREV

Recommended Stories

ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು
ಕಾರ್ಖಾನೆಗಳು ಬಂದ್ ಹೋರಾಟಕ್ಕೆ ಜಿಟಿಡಿ ಬೆಂಬಲ