ಶರನ್ನವರಾತ್ರಿಯ ಆಯುಧ ಪೂಜೆ ದಿನವೇ ಮೈಸೂರು ಯದುವಂಶಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗೆ ಎರಡನೇ ಮಗುವಾಗಿದೆ.
ಮೈಸೂರು : ಶರನ್ನವರಾತ್ರಿಯ ಆಯುಧ ಪೂಜೆ ದಿನವೇ ಮೈಸೂರು ಯದುವಂಶಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗೆ ಎರಡನೇ ಮಗುವಾಗಿದೆ.
ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಆಸ್ಪತ್ರೆಯಲ್ಲಿ 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಪುತ್ರನಿದ್ದಾನೆ. ಈ ಸಂತಸದ ವಿಚಾರವನ್ನು ಯದುವೀರ್ ಅವರೇ ಸಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಅರಮನೆಯಲ್ಲಿ ಶರನ್ನವರಾತ್ರಿ ಪೂಜಾ ಕೈಂಕರ್ಯಗಳು ಅ. 3ರಿಂದಲೇ ಆರಂಭವಾಗಿದೆ. ಶರನ್ನವರಾತ್ರಿಯ ಮೊದಲ ದಿನ ಯದುವೀರ್ ಒಡೆಯರ್ ಅವರ ಖಾಸಗಿ ದರ್ಬಾರ್‌ಗೂ ಮುನ್ನ ನಡೆದ ಪೂಜೆಯಲ್ಲಿ ತ್ರಿಷಿಕಾ ಅವರು ಪಾಲ್ಗೊಂಡಿದ್ದರು.
ಈ ನಡುವೆ ಶುಕ್ರವಾರ ಆಯುಧ ಪೂಜೆಯ ದಿನದಂದೇ ತ್ರಿಷಿಕಾ ಒಡೆಯರ್ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.