ನವೆಂಬರ್‌ 13ಕ್ಕೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Published : Oct 30, 2026, 09:33 AM IST
Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ನ.13ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಇಲ್ಲಿ ನಿರ್ಮಿಸಿರುವ ವಿಶ್ವದ ಪ್ರಥಮ ಓರೆಯಾದ ಎಲ್‌ಇಡಿ ಪ್ಲಾನೆಟೋರಿಯಂ ಅನ್ನು ಉದ್ಘಾಟಿಸುವರು. ಅ.24ರಂದು ನಿಗದಿಯಾಗಿದ್ದ ಅವರ ಈ ಭೇಟಿಯು ಮುಂದೂಡಲ್ಪಟ್ಟಿತ್ತು

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು ನ.13ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಇಲ್ಲಿ ನಿರ್ಮಿಸಿರುವ ವಿಶ್ವದ ಪ್ರಥಮ ಓರೆಯಾದ ಎಲ್‌ಇಡಿ ಪ್ಲಾನೆಟೋರಿಯಂ ಅನ್ನು ಉದ್ಘಾಟಿಸುವರು.

ಅ.24ರಂದು ನಿಗದಿಯಾಗಿದ್ದ ಅವರ ಈ ಭೇಟಿಯು ಮುಂದೂಡಲ್ಪಟ್ಟಿತ್ತು. ಮೈಸೂರು ವಿವಿಯ ಈ ಸ್ಥಳದಲ್ಲಿ ನಿರ್ಮಿಸುತ್ತಿರುವ ಈ ಪ್ಲಾನೆಟೋರಿಯಂ ಕಾಮಗಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಹಿಂದೆ ಚಾಲನೆ ನೀಡಿದ್ದರು.

ಮೋದಿ ಅವರು ಉದ್ಘಾಟಿಸುವ ಸಾಧ್ಯತೆ

ನ.13ರಂದು ಚಾಮುಂಡಿಬೆಟ್ಟದ ತಪ್ಪಲಿನ ಕೆ.ಸಿ.ನಗರದಲ್ಲಿ ವೀರಯೋಧ ಎ.ಪಿ.ಪ್ರಶಾಂತ್‌ ಉದ್ಯಾನವನ ಬಳಿ ಸ್ವಚ್ಛ ಭಾರತ ಮಿಷನ್‌ ಲೋಗೋ ಆಕಾರದಲ್ಲಿ ಅಭಿವೃದ್ಧಿಪಡಿಸಿರುವ ಮಿಯಾವಾಕಿ ಕಿರು ಅರಣ್ಯವನ್ನೂ ಕೂಡ ಮೋದಿ ಅವರು ಉದ್ಘಾಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಅವರು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು.

4 ತಿಂಗಳಲ್ಲಿ ಮೋದಿ ಅವರು ಮೈಸೂರಿಗೆ ಭೇಟಿ ನೀಡುತ್ತಿರುವುದು ಇದು ಎರಡನೆಯದ್ದಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಅವರು ಮೈಸೂರಿಗೆ ಭೇಟಿ ನೀಡುತ್ತಿರುವುದು ಇದು ಎರಡನೆಯದ್ದಾಗಿದೆ. ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕವನ್ನು (ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ) ಉದ್ಘಾಟಿಸಲು ಅವರು ಆ.1ರಂದು ನಗರಕ್ಕೆ ಭೇಟಿ ನೀಡಿದ್ದರು.

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಕಬ್ಬು ಬೆಳೆಗಾರರ ಸಮಸ್ಯೆ ಪರಹರಿಸುವಂತೆ ನೀತಿ ಆಯೋಗದ ಸದಸ್ಯರಿಗೆ ಮನವಿ
ಕತ್ತಲೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ !