ಕಾಂಗ್ರೆಸ್ ತೆಕ್ಕೆಗೆ ನಾಗರಾಜ, ಶ್ರೀನಿವಾಸ, ಶ್ವೇತಾ

KannadaprabhaNewsNetwork |  
Published : Apr 21, 2024, 02:15 AM IST
20ಕೆಡಿವಿಜಿ12, 13-ದಾವಣಗೆರೆಯಲ್ಲಿ ಶನಿವಾರ ಪಂಚಮಸಾಲಿ ಯುವ ಮುಖಂಡ ಎಚ್.ಎಸ್.ನಾಗರಾಜ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬಿಜೆಪಿಯನ್ನು ತೊರೆದು, ಕಾಂಗ್ರೆಸ್ ಸೇರ್ಪಡೆಯಾದರು. ..............20ಕೆಡಿವಿಜಿ14-ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಪಾಲಿಕೆ ಸದಸ್ಯರಾದ ಜೆ.ಎನ್.ಶ್ರೀನಿವಾಸ, ಶ್ವೇತಾ ಶ್ರೀನಿವಾಸ ದಂಪತಿ ತಮ್ಮ ಬೆಂಬಲಿಗರೊಂದಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮಖದಲ್ಲಿ ಕಾಂಗ್ರೆಸ್ಸಿಗೆ ಮರು ಸೇರ್ಪಡೆಯಾದರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಜೆಪಿಯ ಯುವ ನಾಯಕರು, ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ವಿವಿಧ ಸಮುದಾಯಗಳ ಮುಖಂಡರನ್ನು ಭರ್ಜರಿ ಆಪರೇಷನ್ ಹಸ್ತದಡಿ ಕಾಂಗ್ರೆಸ್ ತೆಕ್ಕೆಗೆ ಸೆಳೆಯುತ್ತಿದ್ದಾರೆ.

- ಚುನಾವಣೆ ವೇಳೆ ಸಚಿವ ಮಲ್ಲಿಕಾರ್ಜುನ ಸಾರಥ್ಯದಲ್ಲಿ ಆಪರೇಷನ್ ಹಸ್ತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಜೆಪಿಯ ಯುವ ನಾಯಕರು, ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ವಿವಿಧ ಸಮುದಾಯಗಳ ಮುಖಂಡರನ್ನು ಭರ್ಜರಿ ಆಪರೇಷನ್ ಹಸ್ತದಡಿ ಕಾಂಗ್ರೆಸ್ ತೆಕ್ಕೆಗೆ ಸೆಳೆಯುತ್ತಿದ್ದಾರೆ.

ಪಂಚಮಸಾಲಿ ಸಮಾಜದ ಯುವ ಮುಖಂಡ ಎಚ್.ಎಸ್.ನಾಗರಾಜ ತಮ್ಮ ಅಪಾರ ಬೆಂಬಲಿಗರು, ಹಿತೈಷಿಗಳೊಂದಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮ್ಮುಖ ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಎಚ್‌.ಎಸ್‌. ನಾಗರಾಜ ನಡೆಯನ್ನೇ ಅನುಸರಿಸಿದ ಜೆಡಿಎಸ್ ಮುಖಂಡ ಎಂ.ಜಯಕುಮಾರ ಸಹ ಕಾಂಗ್ರೆಸ್ ಸೇರ್ಪಡೆಗೊಂಡರು.

ಎಸ್‌.ಎಸ್‌. ನಾಗರಾಜ ಸೇರ್ಪಡೆಗೂ ಮುನ್ನ ಬೆಳಗ್ಗೆಯಷ್ಟೇ ಬಿಜೆಪಿ ಪಾಲಿಕೆ ಸದಸ್ಯ ದಂಪತಿ ಕುರುಬ ಸಮಾಜದ ಯುವ ಮುಖಂಡ, ಜೆ.ಎನ್.ಶ್ರೀನಿವಾಸ, ಶ್ವೇತಾ ಶ್ರೀನಿವಾಸ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಮರುಸೇರ್ಪಡೆಯಾದರು. ಪಕ್ಷ ಸೇರ್ಪಡೆಗೊಂಡ ಶ್ರೀನಿವಾಸ ಇತರರಿಗೆ ಶಾಲು ಹಾಕಿ, ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಪಕ್ಷದ ಮುಖಂಡರಾದ ಡಿ.ಬಸವರಾಜ, ಕೆ.ಚಮನ್ ಸಾಬ್‌, ಶಿವಗಂಗಾ ವಿ.ಬಸವರಾಜ, ಬಿ.ಎಚ್. ವೀರಭದ್ರಪ್ಪ, ಹುಲ್ಲಮನಿ ಗಣೇಶ, ಕಬಡ್ಡಿ ಮಲ್ಲು, ಎಚ್.ಹರೀಶ, ಎಲ್.ಎಂ.ಎಚ್. ಸಾಗರ್, ದಾದಾಪೀರ್ ತಾಜ್ ಪ್ಯಾಲೇಸ್‌, ಬೇತೂರು ರಸ್ತೆ ಯೋಗೇಶ, ವಕೀಲರಾದ ಪ್ರಕಾಶ ಪಾಟೀಲ, ಆಂಜನೇಯ ಗುರೂಜಿ, ಹದಡಿ ಹಾಲಪ್ಪ, ಮಜಿದ್, ಲಿಂಗರಾಜ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಜೆಸಿಬಿ ಹನುಮಂತಪ್ಪ ಇತರರು ಇದ್ದರು.

- - - -20ಕೆಡಿವಿಜಿ12, 13:

ದಾವಣಗೆರೆಯಲ್ಲಿ ಶನಿವಾರ ಪಂಚಮಸಾಲಿ ಯುವ ಮುಖಂಡ ಎಚ್.ಎಸ್. ನಾಗರಾಜ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಯಾದರು. -20ಕೆಡಿವಿಜಿ14:

ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಪಾಲಿಕೆ ಸದಸ್ಯರಾದ ಜೆ.ಎನ್.ಶ್ರೀನಿವಾಸ, ಶ್ವೇತಾ ಶ್ರೀನಿವಾಸ ದಂಪತಿ ತಮ್ಮ ಬೆಂಬಲಿಗರೊಂದಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮ್ಮಖ ಕಾಂಗ್ರೆಸ್ಸಿಗೆ ಮರು ಸೇರ್ಪಡೆಯಾದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ