ನಾಲ್ನಾಡ್ ಕೈಲ್ ಪೋಳ್ದ್ ಆಟೋಟ ಸ್ಪರ್ಧೆ

KannadaprabhaNewsNetwork |  
Published : Aug 31, 2026, 03:00 AM IST
ಬಲ್ಲಮಾವಟಿಯ ನೇತಾಜಿ ವಿದ್ಯಾ ಸಂಸ್ಥೆ ಮೈಧಾನದಲ್ಲಿ ಏರ್ಪಡಿಸಲಾದ ನಾಲ್ನಾಡ್ ಕೈಲ್ ಪೋಳ್ದ್ ಕ್ರೀಡಾಕೂಟ ಕಾರ್ಯಕ್ರಮವನ್ನುಗ್ರಾಮದ ಕಾಫಿ ಬೆಳೆಗಾರ ಚಂಗೇಟಿರ ಅಪ್ಪಯ್ಯನವರು ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಲ್ಲಮಾವಟಿ ಅಪೊಲೋ ಯುವಕ ಸಂಘ ಮತ್ತು ಬಲ್ಲಮಾವಟಿ ಕಾವೇರಿ ಮಹಿಳಾ ಸಮಾಜ ಆಶ್ರಯದಲ್ಲಿ ನಾಲ್ನಾಡ್ ಕೈಲ್ ಪೋಳ್ದ್ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು.

ಕನ್ನಡಪ್ರಭವಾರ್ತೆ ನಾಪೋಕ್ಲು

ಬಲ್ಲಮಾವಟಿ ಅಪೊಲೋ ಯುವಕ ಸಂಘ ಮತ್ತು ಬಲ್ಲಮಾವಟಿ ಕಾವೇರಿ ಮಹಿಳಾ ಸಮಾಜ ಆಶ್ರಯದಲ್ಲಿ ನಾಲ್ನಾಡ್ ಕೈಲ್ ಪೋಳ್ದ್ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು. ಬಲ್ಲಮಾವಟಿ ನೇತಾಜಿ ವಿದ್ಯಾ ಸಂಸ್ಥೆ ಮೈಧಾನದಲ್ಲಿ ಏರ್ಪಡಿಸಲಾದ ಕ್ರೀಡಾಕೂಟದಲ್ಲಿ ಸಾರ್ವಜನಿಕ ಮಹನೀಯರು ಮಹಿಳೆಯರು ಹಾಗೂ ಪ್ರೌಢ, ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಪುಠಾಣಿ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಆಯೋಜಿಸಲಾಯಿತು.

ಅಪೋಲೋ ಯುವಕ ಸಂಘದ ಖಜಾಂಚಿ ಮೂವೆರ ವಿನು ಬಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾಮದ ಕಾಫಿ ಬೆಳೆಗಾರ ಚಂಗೇಟಿರ ಅಪ್ಪಯ್ಯ ತೆಂಗಿನಕಾಯಿಗೆ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಮರ್ಚಂಟ್‌ ನೇವಿ ಅಧಿಕಾರಿ ನುಚ್ಚುಮಣಿಯಂಡ ಜಾಲಿ ಬೆಳ್ಳಿಯಪ್ಪ ಹಾಗೂ ಅಪೋಲೋ ಸಂಘದ ಸ್ಥಳ ದಾನಿಗಳಾದ ಅಪ್ಪಚೆಟ್ಟೊಳಂಡ ರಾಜ ಭೀಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ವೀಕ್ಷಕರ ಹರ್ಷೋದ್ಘಾರಗಳ ನಡುವೆ ಸಾರ್ವಜನಿಕರಿಗೆ ತೆoಗಿನಕಾಯಿ ಗುಂಡು ಹೊಡೆಯುವುದು, ಬಾರದ ಕಲ್ಲು ಎಸೆತ,100ಮೀ ಓಟ, ಗೂಟ ಸುತ್ತಿ ಓಡುವುದು,ಮಹಿಳೆಯರಿಗೆ 100ಮೀ ಓಟ, ಪಾಸಿಂಗ್ ದಿ ಬಾಲ್, ಡ್ರಮ್ ಗೆ ಚೆಂಡು ಹಾಕುವುದು, ವಯಸ್ಕರಿಗೆ ( 50ವರ್ಷ ಮೇಲ್ಪಟ್ಟು ) 100ಮೀ ಕಾಲ್ನಡಿಗೆ, ಕಣ್ಣು ಕಟ್ಟಿ ಮಡಕೆ ಒಡೆಯುವುದು, ಪ್ರೌಢಶಾಲಾ ಬಾಲಕರು ಹಾಗೂ ಬಾಲಕಿಯರು (8,9,10),100ಮೀ ಓಟ, ಕಾಲಿಗೆ ಬೆಲೂನ್ ಕಟ್ಟಿ ಒಡೆಯುವುದು ( ಬಾಲಕರಿಗೆ ), ನಿಂಬೆ ಚಮಚ ಓಟ (ಬಾಲಕಿಯರಿಗೆ )ಪ್ರಾಥಮಿಕ ಶಾಲಾ ಬಾಲಕರು ಹಾಗೂ ಬಾಲಕಿಯರು(5,6,7 ),100ಮೀ ಓಟ,. ಗೋಣಿ ಚೀಲ ಓಟ,ಕಿರಿಯ ಬಾಲಕ ಬಾಲಕಿಯರು (3,4),.75ಮೀ ಓಟ, ಗೂಟಕ್ಕೆ ರಿಂಗು ಹಾಕುವುದು, ಕಿರಿಯ ಬಾಲಕ ಬಾಲಕಿಯರು (1, 2 ), 50ಮೀ ಓಟ, ಕಪ್ಪೆ ಹಾರುವುದು, ಅಂಗನವಾಡಿ ಮಕ್ಕಳಿಗೆ 50ಮೀ ಓಟ, ಕಾಳು ಹೆಕ್ಕುವುದು, ಹಗ್ಗಜಗ್ಗಾಟ, (ಊರಿನ ಮಹನೀಯರು ಹಾಗೂ ಮಹಿಳೆಯರಿಗೆ ಬೈಕ್ ಮಂದಗತಿಯ ಚಾಲನೆ, ಸ್ಕೂಟರ್ ಮಂದಗತಿಯ ಚಾಲನೆ, ಸೈಕಲ್ ಮಂದಗತಿಯ ಚಾಲನೆ ಸ್ಪರ್ಧೆಗಳು ಜರುಗಿದವು. ಆನಂತರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು. ನುಚ್ಚುಮಣಿಯಂಡ ರಶಿತ ಮುತ್ತಣ್ಣ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ
ಅಪಸ್ಮಾರ ಶಾಪವಲ್ಲ, ಗುಣಪಡಿಸಲಾಗುವ ಖಾಯಿಲೆ: ಡಾ.ನಿಹಾಲ್ ಅಹಮದ್