600 ಸಂಸ್ಥಾನ ಆಳಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ

KannadaprabhaNewsNetwork |  
Published : Jun 10, 2025, 06:17 AM IST
ನಾಲ್ವಡಿ ಕೃಷ್ಣರಾಜ ಒಡೆಯರ ಅವರ 141ನೇ ಜಯಂತ್ಯೋತ್ಸವ | Kannada Prabha

ಸಾರಾಂಶ

ಹಿಂದುಳಿದವರ ಏಳಿಗೆಗಾಗಿ ಮೀಸಲಾತಿ ಜಾರಿಗೆ ತಂದು, ಸುಮಾರು 600 ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸಿದ ವಿಶ್ವ ಕಂಡ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ ಎಂದು ನ್ಯಾಯವಾದಿ ವಿ.ಬಿ.ಮಸೂತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಿಂದುಳಿದವರ ಏಳಿಗೆಗಾಗಿ ಮೀಸಲಾತಿ ಜಾರಿಗೆ ತಂದು, ಸುಮಾರು 600 ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸಿದ ವಿಶ್ವ ಕಂಡ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ ಎಂದು ನ್ಯಾಯವಾದಿ ವಿ.ಬಿ.ಮಸೂತಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ನಾಲ್ವಡಿ ಕೃಷ್ಣರಾಜ ಒಡೆಯರ ಅವರ 141ನೇ ಜಯಂತ್ಯುತ್ಸವದ ವಿಶೇಷ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿಯೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.ಕಸಾಪ ನಗರ ಘಟಕದ ಮಾಜಿ ಅಧ್ಯಕ್ಷೆ ಶ್ರೀದೇವಿ ಉತ್ಲಾಸರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭವಾಗಿ ಕನ್ನಡ ನಾಡು ನುಡಿಯ ಕುರಿತು ಅಭಿಮಾನ ಮೂಡುವಂತೆ ತಮ್ಮ ಕಾರ್ಯವನ್ನು ನೆರವೇರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ನಮಗೆಲ್ಲ ಮಾದರಿಯಾಗಿದ್ದಾರೆ. ಅವರಲ್ಲಿನ ಕನ್ನಡ ಸಾಹಿತ್ಯದ ಕುರಿತ ಸೇವಾ ಮನೋಭಾವ ನಾವೆಲ್ಲ ಮೆಚ್ಚುವಂತದ್ದು ಎಂದು ಸ್ಮರಿಸಿದರು.ಉಪನ್ಯಾಸ ನೀಡಿದ ಇಂಡಿ ತಾಲೂಕು ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಜಲವಿದ್ಯುತ್ ಸ್ಥಾವರವನ್ನು ಶಿವನಸಮುದ್ರದಲ್ಲಿ ಸ್ಥಾಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಮಾಡುವ ಮೂಲಕ ಹಾಗೂ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿ ಅತ್ಯಂತ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಅದ್ಭುತ ವ್ಯಕ್ತಿತ್ವ ನಾಲ್ವಡಿ ಕೃಷ್ಣರಾಜ ಒಡೆಯರ ಹೊಂದಿದ್ದರು. ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿ, ಶಾಸ್ತ್ರೀಯ, ಸಂಗೀತ, ನೃತ್ಯ ಮತ್ತು ಇನ್ನಿತರ ಕಲಾ ಪ್ರಕಾರಗಳಿಗೆ ಬೆಂಬಲ ನೀಡುವ ಮೂಲಕ ಅನೇಕ ನೀರಾವರಿ ಯೋಜನೆಗಳನ್ನು, ರಸ್ತೆ, ಸೇತುವೆ ಮತ್ತು ಸಾರ್ವಜನಿಕ ಕಟ್ಟಡಗಳ ನಿರ್ಮಾಣದೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ನಿರ್ಣಾಯಕ ಪಾತ್ರ ವಹಿಸಿದ್ದರು ಬಣ್ಣಿಸಿದರು.ಅತಿಥಿಗಳಾಗಿ ಕಮಲಾಕರ ಬೋಳೆಗಾವಿ, ಜ್ಯೋತಿರಾಮ ಪವಾರ, ನಬಿಲಾಲ ಶಾನವಾಲೆ, ವಿಜಯಾ ಬಿರಾದಾರ, ಚೈತನ್ಯ ಮುದ್ದೇಬಿಹಾಳ ಹಾಗೂ ವೀರೇಶ ವಾಲಿ ಉಪಸ್ಥಿತರಿದ್ದು ಮಾತನಾಡಿದರು.ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀರೇಶ ವಾಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಶಿಕಲಾ ನಾಯ್ಕೋಡಿ ಹಾಗೂ ಸುನಂದಾ ಕೋರಿ ಪ್ರಾರ್ಥಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶಿಕ್ಷಕ ಯಮನಪ್ಪ ಪವಾರ ಸ್ವಾಗತಿಸಿ ಗೌರವಿಸಿದರು. ಡಾ.ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಪರಿಚಯವನ್ನು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ನೆರವೇರಿಸಿದರು. ಡಾ.ಶೈಲಾ ಬಳಗಾನೂರ ವಂದಿಸಿದರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ಬಿ.ಎಂ.ಅಜೂರ, ವೈ.ಎಚ್.ಲಂಬು, ಕೆ.ಎಸ್.ಹಣಮಾಣಿ, ಸಿದ್ದಣ್ಣ ಸಾತಲಗಾಂವ, ಲತಾ ಗುಂಡಿ, ಗಂಗಮ್ಮ ರಡ್ಡಿ, ಮಹಾದೇವಿ ತೆಲಗಿ, ಎಸ್.ಎಸ್.ಮಾನೆ, ಜಿ.ಎಸ್.ಬಳ್ಳೂರ, ಪಿ.ಎಸ್.ಉತ್ಲಾಸರ, ವಿಜಯಕುಮಾರ ಮೇತ್ರಿ, ಬಸವರಾಜ ನಾಯ್ಕ, ಬಂದೇನವಾಜ ಹಕೀಂ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''