ಶಿಕ್ಷಣ, ಬೆಳಕು, ನೀರು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್

KannadaprabhaNewsNetwork |  
Published : Jun 10, 2025, 08:00 AM IST
22 | Kannada Prabha

ಸಾರಾಂಶ

ಮೈಸೂರು: ಶಿಕ್ಷಣ, ಬೆಳಕು, ನೀರು ನೀಡಿದ ಮಹಾನ್‌ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ನಗರಪಾಲಿಕೆ ವಲಯ 2ರ ಕಚೇರಿಯ ಆಯುಕ್ತ ಎಚ್‌. ನಾಗರಾಜು ಹೇಳಿದರು.

ಮೈಸೂರು: ಶಿಕ್ಷಣ, ಬೆಳಕು, ನೀರು ನೀಡಿದ ಮಹಾನ್‌ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ನಗರಪಾಲಿಕೆ ವಲಯ 2ರ ಕಚೇರಿಯ ಆಯುಕ್ತ ಎಚ್‌. ನಾಗರಾಜು ಹೇಳಿದರು.

ಮಹಾನಗರ ಪಾಲಿಕೆ ವಲಯ-2 ರ ಆವರಣದಲ್ಲಿ ನಡೆದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿದ್ಯುತ್‌ ಘಟಕವನ್ನು ಸ್ಥಾಪಿಸಿದ ಹಾಗೂ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸಿದ ಕೀರ್ತಿ ರಾಜಶ್ರೀ ಅವರಿಗೆ ಸಲ್ಲಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವರ್ಕ್‌ ಇನ್ಸ್‌ ಪೆಕ್ಟರ್ ಶಿವಸ್ವಾಮಿ ಮಾತನಾಡಿದರು. ಪಾಲಿಕೆ ಎಂಜಿನಿಯರ್‌ ಗಳಾದ ದಯಾನಂದ್, ಮಾರ್ಟಿನ್, ಪಾಲಿಕೆ ಸಿಬ್ಬಂದಿ ಪ್ರಸಾದ್, ಶಿವಮೂರ್ತಿ, ದೀಪಕ್, ಮುಖಂಡರಾದ ಸಿ. ಈಶ್ವರ್, ಮೋಹನ್, ಜಿತೇಂದ್ರ, ಬೆಟ್ಟಸ್ವಾಮಿ, ರಾಜು, ಲೋಕೇಶ್, ಉಪನ್ಯಾಸಕರಾದ ಡಾ.ಡಿ.ಸಿ. ಉಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ಸಲ್ಲಿ ಯತೀಂದ್ರ ಕಿಚ್ಚು : '5 ವರ್ಷವೂ ನಮ್ಮ ತಂದೆ ಸಿಎಂ, ಇದು ಈಗ ಸೆಟಲ್ಡ್‌ ವಿಚಾರ'