ಮಹಾನ್ ನಾಯಕರ ಹೆಸರು ಪ್ರಮುಖ ರಸ್ತೆಗಳಿಗೆ ಇಡಿ: ಬಸವಶಾಂತಲಿಂಗ ಸ್ವಾಮೀಜಿ

KannadaprabhaNewsNetwork |  
Published : Apr 02, 2025, 01:02 AM IST
ಹಾವೇರಿಯ ಮುರುಘ ರಾಜೇಂದ್ರ ನಗರದ ನಾಮಫಲಕವನ್ನು ಬಸವಶಾಂತಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ನಗರಕ್ಕೆ ಯುಗಾದಿಯ ಶುಭ ದಿನ ನಾಮಕರಣಗಳ ಅನಾವರಣ ಹಾಗೂ ಮಹಾದ್ವಾರ ಬಾಗಿಲಿನ ಅಡಿಗಲ್ಲು ಸಮಾರಂಭ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಹಾವೇರಿ: ಮಹಾನ್ ನಾಯಕರ, ಶರಣರ ತತ್ವ ಸಿದ್ಧಾಂತಗಳ ಉಳಿಸಲು ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಬೆಳೆಸಲು ಪ್ರಮುಖ ರಸ್ತೆಗಳಿಗೆ ಅವರ ನಾಮಕರಣ ಮಾಡುವ ಪ್ರಯತ್ನವಾಗಲಿ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ಸ್ಥಳೀಯ ಶ್ರೀ ಮುರುಘರಾಜೇಂದ್ರ ನಗರದ ನಾಮಫಲಕ ಅನಾವರಣ ಹಾಗೂ ಮಹಾದ್ವಾರ ಬಾಗಿಲು ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಯುಗಾದಿ ಹಬ್ಬದ ಶುಭ ಕೋರಿ ಆಶೀರ್ವಚನ ನೀಡಿದರು.

ಹಾವೇರಿಯಲ್ಲಿ ಮುರುಘರಾಜೇಂದ್ರ ಮಠದ ದಿವ್ಯಶಕ್ತಿ ಎಲ್ಲರ ಮನದಲ್ಲಿಯೂ ಇದೆ. ಜನರ ಸಮಸ್ಯೆ ಸವಾಲುಗಳನಿವಾರಣೆಗೆ ಮುರುಘ ರಾಜೇಂದ್ರ ಶ್ರೀಗಳ ಆಶೀರ್ವಾದ ಸದಾ ಇರಲಿದೆ. ನಗರಕ್ಕೆ ಯುಗಾದಿಯ ಶುಭ ದಿನ ನಾಮಕರಣಗಳ ಅನಾವರಣ ಹಾಗೂ ಮಹಾದ್ವಾರ ಬಾಗಿಲಿನ ಅಡಿಗಲ್ಲು ಸಮಾರಂಭ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದರು.

ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಹಾವೇರಿಗೆ ಶರಣ ಕೊಡುಗೆ ಬಹಳಷ್ಟಿದೆ. ಮುರುಘ ರಾಜೇಂದ್ರ ನಗರದ ರಸ್ತೆಗಳಿಗೆ ನಾಮಕರಣ ಮಹಾದ್ವಾರ ಬಾಗಿಲಿನ ಅಡಿಗಲ್ಲು ಸಮಾರಂಭ ಮಾಡುತ್ತಿದ್ದು, ಈ ಕಾರ್ಯ ಬೇಗನೆ ಪೂರ್ಣವಾಗಲು ಸಹಕಾರ ನೀಡಲಾಗುವುದು ಎಂದರು.ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಮಾತನಾಡಿ, ನಗರದ ವಿವಿಧ ಬಡಾವಣೆಗಳನ್ನು ಗುರುತಿಸಲು ನಾಮಫಲಕಗಳು ಸಹಕಾರಿಯಾಗಲಿದ್ದು, ಎಲ್ಲ ವಾರ್ಡ್‌ಗಳಲ್ಲಿ ನಾಮಫಲಕ ಹಾಕಲಾಗುವುದು. ಇದೊಂದು ಉತ್ತಮ ಕಾರ್ಯ ಎಂದರು.

ಇದೇ ಸಂದರ್ಭದಲ್ಲಿ ಬಸವಶಾಂತಲಿಂಗ ಸ್ವಾಮೀಜಿ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್.ಎನ್. ಗಾಜೀಗೌಡ್ರ, ನಗರಸಭೆ ಸದಸ್ಯರಾದ ಕವಿತಾ ಯಲವಿಗಿಮಠ, ಮಾಜಿ ಸದಸ್ಯ ಶಣ್ಮುಖಪ್ಪ ಚೂರಿ, ಯುವ ಮುಖಂಡರಾದ ಪರಶುರಾಮ ಹರ್ಲಾಪುರ, ರಾಮು ಮಾಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜಮೀರ ಅಹ್ಮದ್ ಜಿಗಿರಿ, ಅಡಿವೆಪ್ಪ ಯಲವಿಗಿಮಠ, ಮುರಗೇಶ ಮಠದ, ಕರಬಸಪ್ಪ ಬಳ್ಳಳ್ಳಿ, ಮಲ್ಲನಗೌಡ್ರ, ಈರಣ್ಣ ಬಳ್ಳಳ್ಳಿ, ಶಶಿಧರ ಹರ್ಲಾಪುರ, ಪರಸಪ್ಪ ನೆಲೋಗಲ್ಲ, ರುದ್ರಪ್ಪ ಹಾವೇರಿ, ಈರಣ್ಣ ಪಾವಲಿ, ನಾಗಪ್ಪ ಗೌಳಿ, ಮುತ್ತಣ್ಣ ಮಠದ, ಯಂಕಣ ಕುಲಕರ್ಣಿ, ಶಿವಯೋಗಿ ನೆಲ್ಲೂಗಲ್, ಪ್ರವೀಣಕುಮಾರ ಪಾಟೀಲ, ಕೆಇಬಿ ಈರಣ್ಣ, ಹಜರತಲಿ ತಹಶೀಲ್ದಾರ, ದಾದಾಪೀರ್ ಮುಲ್ಕಿ, ಶಬ್ಬಿರ ಮುಲ್ಕಿ, ಮೈತಾಬ ಕಳ್ಳಿಹಾಳ, ತರುಣ ಚೂರಿ, ಈರಮ್ಮ ಅರಳಿ, ರಾಜು ಚೂರಿ, ನಾಗಪ್ಪ ಮ್ಯಾದರ, ಜೀತೇಂದ್ರ ಮ್ಯಾದರ, ಸಾವಿತ್ರವ್ವ ನೆಲೋಗಲ್ಲ, ಮಧು, ಗಣೇಶ, ಅನುಪಮ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ