ವಿಜೃಂಭಣೆಯಿಂದ ನಡೆದ ವಡ್ಡಗೆರೆ ವೀರನಾಗಮ್ಮ ರಥೋತ್ಸವ

KannadaprabhaNewsNetwork |  
Published : Apr 02, 2025, 01:02 AM IST
ವಿಜೃಂಭಣೆಯಿಂದ ನಡೆದ ವಡ್ಡಗೆರೆ ವೀರನಾಗಮ್ಮ ತಾಯಿಯ ರಥೋತ್ಸವ | Kannada Prabha

ಸಾರಾಂಶ

ತಾಲೂಕಿನ ವಡ್ಡಗೆರೆ ಗ್ರಾಮದ ೮೫೦ವರ್ಷಗಳ ಇತಿಹಾಸವುಳ್ಳ ಶ್ರೀವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ವಡ್ಡಗೆರೆ ಗ್ರಾಮದ ೮೫೦ವರ್ಷಗಳ ಇತಿಹಾಸವುಳ್ಳ ಶ್ರೀವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆಯಲ್ಲಿ ನೆಲೆಸಿರುವ ಶ್ರೀವೀರನಾಗಮ್ಮ ತಾಯಿ ಜಾತ್ರೆ ಮಹೋತ್ಸವದಲ್ಲಿ ರಥೋತ್ಸವ ಏಳೆಯುವ ಮೂಲಕ ಭಕ್ತರ ಸಂಮುಖದಲ್ಲಿ ವಿಜೃಂಭಣೆಯಿಂದ ನಡೆದಿದೆ. ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯಿಂದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು.ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರ್ ಮಾತನಾಡಿ, ವಡ್ಡಗೆರೆ ವೀರನಾಗಮ್ಮ ತಾಯಿ ದೇವಾಲಯಕ್ಕೆ ಪುರಾತನ ಇತಿಹಾಸವಿದೆ. ಪ್ರತಿವರ್ಷ ಯುಗಾದಿ ಮಾರನೇ ದಿನ ಅದ್ಧೂರಿ ಜಾತ್ರೆ ನಡೆಯುತ್ತದೆ. ಆಡಳಿತ ಮಂಡಳಿಯು ನಿರ್ಮಿಸಿದ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ರಥೋತ್ಸವ ಸಂದರ್ಭದಲ್ಲಿ ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹೀಗೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿ ತಾಯಿಯ ದರ್ಶನ ಪಡೆದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ ಎಂದರು.ಇದೆ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಡಳಿತ ಮಂಡಳಿ ಅಧ್ಯಕ್ಷ ವಿ.ಎನ್ ವೀರಕ್ಯಾತಯ್ಯ, ಕಾರ್ಯದರ್ಶಿ ನಾಗೇಶ್.ವಿ, ನಿರ್ದೇಶಕ ಶಿವಕುಮಾರ್, ರಾಮಯ್ಯ, ವಿ.ಎನ್ ವೀರನಾಗಪ್ಪ ಸೇರಿದಂತೆ ಲಕ್ಷಾಂತರ ಭಕ್ತರು ಹಾಜರಿದ್ದರು.ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಈಗೇ ಅನೇಕ ಭಕ್ತರ ಹರಿಕೆಗಳನ್ನು ಈಡೇರಿಸುತ್ತ ಬಂದಿರುವ ವರಪುರ ವಡ್ಡಗೆರೆ ವೀರನಾಗಮ್ಮ ತಾಯಿಯ ಮಹಿಮೆ ಅಪಾರ. ಇಂದು ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು, ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಆಡಳಿತ ಮಂಡಳಿಯು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದೆ.ಡಾ.ಶ್ರೀಹನುಮಂತನಾಥ ಸ್ವಾಮೀಜಿಪೀಠಾಧ್ಯಕ್ಷರು, ಶ್ರೀಮಠ ಎಲೆರಾಂಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!