ಜಿಲ್ಲೆಯಲ್ಲಿ 1.08 ಲಕ್ಷ ಮತದಾರರ ಹೆಸರು ಡಿಲೀಟ್‌

KannadaprabhaNewsNetwork |  
Published : Oct 29, 2026, 02:15 AM IST
ಮತ. | Kannada Prabha

ಸಾರಾಂಶ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿ ಪ್ರಕಟಗೊಂಡಿದೆ. ಎಸ್‌ಐಆರ್‌ಗೂ ಮುನ್ನ ಜಿಲ್ಲೆಯಲ್ಲಿ 9,02,947 ಮತದಾರರಿದ್ದರು. ಪರಿಷ್ಕೃತ ಕರಡು ಪಟ್ಟಿಯಲ್ಲಿ 7,94,567ಕ್ಕೆ ಇಳಿಕೆಯಾಗಿದ್ದು, 1,08,380 ಮತದಾರರ ಹೆಸರು (ಶೇ. 12ರಷ್ಟು) ಡೀಲಿಟ್ ಆಗಿವೆ.

9.02 ಲಕ್ಷದಿಂದ 7.94 ಲಕ್ಷಕ್ಕೆ ಮತದಾರರ ಸಂಖ್ಯೆ ಇಳಿಕೆ, ಗದಗ ಮತಕ್ಷೇತ್ರದಲ್ಲೇ ಅತೀ ಹೆಚ್ಚು ಮತದಾರರ ಹೆಸರು ಡಿಲೀಟ್‌

ಕನ್ನಡಪ್ರಭ ವಾರ್ತೆ ಗದಗ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿ ಪ್ರಕಟಗೊಂಡಿದೆ. ಎಸ್‌ಐಆರ್‌ಗೂ ಮುನ್ನ ಜಿಲ್ಲೆಯಲ್ಲಿ 9,02,947 ಮತದಾರರಿದ್ದರು. ಪರಿಷ್ಕೃತ ಕರಡು ಪಟ್ಟಿಯಲ್ಲಿ 7,94,567ಕ್ಕೆ ಇಳಿಕೆಯಾಗಿದ್ದು, 1,08,380 ಮತದಾರರ ಹೆಸರು (ಶೇ. 12ರಷ್ಟು) ಡೀಲಿಟ್ ಆಗಿವೆ.

ಎಸ್‌ ಐಆರ್‌ಗೂ ಮುನ್ನ ಜಿಲ್ಲೆಯಲ್ಲಿ 447659 ಪುರುಷರು, 455227 ಮಹಿಳೆಯರು ಹಾಗೂ 61 ಇತರೆ ಸೇರಿ 902947 ಮತದಾರರು ಇದ್ದರು. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ 7568ರಷ್ಟು ಹೆಚ್ಚಿತ್ತು. ಆದರೆ, ಪರಿಷ್ಕೃತ ಕರಡು ಪಟ್ಟಿಯಲ್ಲಿ 398385 ಪುರುಷರು, 396139 ಮಹಿಳೆಯರು ಹಾಗೂ 43 ಇತರೆ ಮತದಾರರು ಇದ್ದಾರೆ. 49274 ಪುರುಷರು ಹಾಗೂ 59088 ಮಹಿಳೆಯರ ಹೆಸರುಗಳನ್ನು ಕೈಬಿಡಲಾಗಿದ್ದು, 18 ಇತರೆ ಮತದಾರರ ಹೆಸರುಗಳೂ ಕಡಿತಗೊಂಡಿವೆ. ಪುರುಷರಿಗಿಂತ ಮಹಿಳೆಯರ ಹೆಸರುಗಳು 9814ರಷ್ಟು ಹೆಚ್ಚಾಗಿ ಕಡಿತಗೊಂಡಿವೆ.

12335 ಮತದಾರರು ಹೆಚ್ಚಳ:

ಎಸ್‌ ಐಆರ್‌ ಪ್ರಕ್ರಿಯೆಯ ಸಂದರ್ಭದಲ್ಲಿ 2026 ರ ಆ 24 ರಂದು ಸಿದ್ಧಪಡಿಸಿದ ಪಟ್ಟಿಯಲ್ಲಿ 782,232 ಮತದಾರರಿದ್ದು 392460 ಪುರುಷರು, 389723 ಮಹಿಳೆಯರು ಹಾಗೂ 49 ಇತರೆ ಮತದಾರರಿದ್ದರು. ನಂತರದ ಪ್ರಕ್ರಿಯೆಯಲ್ಲಿ 5925 ಪುರುಷರು ಹಾಗೂ 6416 ಮಹಿಳೆಯರು ಸೇರಿ ಒಟ್ಟು 12341 ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ. 6 ಇತರೆ ಮತದಾರರ ಹೆಸರು ಕಡಿತಗೊಳಿಸಲಾಗಿದ್ದು ಒಟ್ಟು 12,335 ಮತದಾರರ ಹೆಚ್ಚಳವಾಗಿದೆ.

ವಿಧಾನಸಭಾ ಕ್ಷೇತ್ರವಾರು ಪಟ್ಟಿ:

ಶಿರಹಟ್ಟಿ ಕ್ಷೇತ್ರದಲ್ಲಿ ಮುನ್ನ 114847 ಪುರುಷರು, 115407 ಮಹಿಳೆಯರು, 14 ಇತರೆ ಸೇರಿ 230268 ಮತದಾರರಿದ್ದರು. ಎಸ್ಐಆರ್ ನಂತರ 11712 ಪುರುಷರು, 14881 ಮಹಿಳೆಯರು ಹಾಗೂ 5 ಇತರೆ ಸೇರಿ 26598 ಡಿಲೀಟ್ ಆಗಿದ್ದು, ಅಂತಿಮ ಕರಡು ಪಟ್ಟಿಯಲ್ಲಿ 103135 ಪುರುಷರು, 100526 ಮಹಿಳೆಯರು, 9 ಇತರೆ ಸೇರಿ 203670 ಮತದಾರರಿದ್ದಾರೆ.

ಗದಗ ಕ್ಷೇತ್ರದಲ್ಲಿ 114629 ಪುರುಷರು, 119181 ಮಹಿಳೆಯರು, 19 ಇತರೆ ಸೇರಿ 233829 ಮತದಾರರಿದ್ದರು. ಎಸ್ಐಆರ್ ನಲ್ಲಿ 15205 ಪುರುಷರು, 16829 ಮಹಿಳೆಯರು ಹಾಗೂ 4 ಇತರೆ ಸೇರಿ 32038 ಡಿಲೀಟ್ ಆಗಿದ್ದು, ಅಂತಿಮ ಪಟ್ಟಿಯಲ್ಲಿ 99424 ಪುರುಷರು, 102352 ಮಹಿಳೆಯರು, 15 ಇತರೆ ಸೇರಿ 201791 ಮತದಾರರಿದ್ದಾರೆ.

ರೋಣ ಕ್ಷೇತ್ರದಲ್ಲಿ 120237 ಪುರುಷರು, 122923 ಮಹಿಳೆಯರು, 20 ಇತರೆ ಸೇರಿ 243180 ಮತದಾರರಿದ್ದರು. ಎಸ್ಐಆರ್ ನಲ್ಲಿ 14113 ಪುರುಷರು, 17620 ಮಹಿಳೆಯರು ಹಾಗೂ 7 ಇತರೆ ಸೇರಿ 31740 ಡಿಲೀಟ್ ಆಗಿದ್ದು, ಅಂತಿಮ ಕರಡು ಪಟ್ಟಿಯಲ್ಲಿ 106124 ಪುರುಷರು, 105303 ಮಹಿಳೆಯರು, 13 ಇತರೆ ಸೇರಿ 211440 ಮತದಾರರಿದ್ದಾರೆ.

ನರಗುಂದ ಕ್ಷೇತ್ರದಲ್ಲಿ 97946 ಪುರುಷರು, 97716 ಮಹಿಳೆಯರು, 8 ಇತರೆ ಸೇರಿ 195670 ಮತದಾರರಿದ್ದರು. ಎಸ್ಐಆರ್ ನಲ್ಲಿ 8244 ಪುರುಷರು, 9758 ಮಹಿಳೆಯರು ಹಾಗೂ 2 ಇತರೆ ಸೇರಿ 18004 ಡಿಲೀಟ್ ಆಗಿದ್ದು, ಅಂತಿಮ ಕರಡು ಪಟ್ಟಿಯಲ್ಲಿ 89702 ಪುರುಷರು, 87958 ಮಹಿಳೆಯರು, 8 ಇತರೆ ಸೇರಿ 177666 ಮತದಾರರಿದ್ದಾರೆ. ಗದಗ ಕ್ಷೇತ್ರದಲ್ಲೇ ಅತೀ ಡಿಲೀಟ್‌

ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಮತದಾರರ ಹೆಸರು ಡಿಲೀಟ್‌ ಆಗಿರುವುದು ಗದಗ ಕ್ಷೇತ್ರದಲ್ಲಿ 32038 ಮತದಾರರ ಹೆಸರು ಡಿಲೀಟ್‌ ಆಗಿದ್ದರೆ, ರೋಣ ಮತಕ್ಷೇತ್ರದಲ್ಲಿ 31740, ಶಿರಹಟ್ಟಿ ಮತಕ್ಷೇತ್ರದಲ್ಲಿ 26598 ಹಾಗೂ ನರಗುಂದ ಮತಕ್ಷೇತ್ರದಲ್ಲಿ 18004 ಸೇರಿ ಜಿಲ್ಲೆಯಲ್ಲಿ ಒಟ್ಟು 108380 ಮತದಾರರ ಹೆಸರು ಡಿಲೀಟ್‌ ಆಗಿವೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕರಡು ಮತದಾರರ ಪಟ್ಟಿ

ಕ್ಷೇತ್ರ ಪುರುಷರು ಮಹಿಳೆಯರು ಇತರೆ ಒಟ್ಟು

ಶಿರಹಟ್ಟಿ 103135 100526 9 203670

ಗದಗ 99424 102352 15 201791

ರೋಣ 106124 105303 13 211440

ನರಗುಂದ 89702 87958 06 177666

ಒಟ್ಟು 398385 396139 43 794567

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್