ನಂದಿಗಿರಿಧಾಮ, ಈಶಾಗೆ ಹರಿದು ಬಂದ ಜನಸಾಗರ

KannadaprabhaNewsNetwork |  
Published : May 25, 2025, 11:47 PM IST
ಸಿಕೆಬಿ- 2 ನಂದಿಗಿರಿಧಾಮದ ಮಾರ್ಗ ಮದ್ಯ ವಾಹನಗಳ ಸಾಲುಸಿಕೆಬಿ-3 ಆವಲಗುರ್ಕಿಯ 112 ಅಡಿಯ ಆದಿಯೋಗಿ ಪ್ರತಿಮೆ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರು. | Kannada Prabha

ಸಾರಾಂಶ

ಭಾನುವಾರ ಮತ್ತು ಮಕ್ಕಳ ಶಾಲೆಗಳಿಗೆ ಬೇಸಿಗೆ ರಜೆ ಮುಗಿಯುತ್ತಿರುವ ಹಿನ್ನೆಲೆ ನಂದಿಗಿರಿಧಾಮ ಮತ್ತು ಈಶಾಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇದರಿಂದ ತಾಲೂಕಿನ ನಂದಿಬೆಟ್ಟ ಮತ್ತು ಈಶಾಗೆ ತೆರಳುವ ರಸ್ತೆಗಳು ಮತ್ತು ಪಾರ್ಕಿಂಗ್ ಲಾಟ್ ಫುಲ್ ಆಗಿ ಟ್ರಾಫಿಕ್‌ ಜಾಮ್ ಉಂಟಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭಾನುವಾರ ಮತ್ತು ಮಕ್ಕಳ ಶಾಲೆಗಳಿಗೆ ಬೇಸಿಗೆ ರಜೆ ಮುಗಿಯುತ್ತಿರುವ ಹಿನ್ನೆಲೆ ನಂದಿಗಿರಿಧಾಮ ಮತ್ತು ಈಶಾಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇದರಿಂದ ತಾಲೂಕಿನ ನಂದಿಬೆಟ್ಟ ಮತ್ತು ಈಶಾಗೆ ತೆರಳುವ ರಸ್ತೆಗಳು ಮತ್ತು ಪಾರ್ಕಿಂಗ್ ಲಾಟ್ ಫುಲ್ ಆಗಿ ಟ್ರಾಫಿಕ್‌ ಜಾಮ್ ಉಂಟಾಯಿತು.

ನಂದಿಬೆಟ್ಟದ ರಸ್ತೆಯಲ್ಲಿ ಎಲ್ಲಿ ನೋಡಿದರೂ ವಾಹನಗಳಿಂದ ತುಂಬಿ ತುಳುಕಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಐದಾರು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಂಚಾರದಟ್ಟಣೆ ನಿಯಂತ್ರಿಸಲು ನಂದಿಗಿರಿಧಾಮ ಪೊಲೀಸರರು ಹೈರಾಣರಾಗಿದ್ದರು. ನಂದಿಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದ್ದು, ಪಾರ್ಕಿಂಗ್ ಲಾಟ್ ಸಹ ತುಂಬಿ ತುಳುಕುತ್ತಿದ್ದು, ವಾಹನ ಸವಾರರ ಮತ್ತು ಪ್ರವಾಸಿಗರ ನಿಯಂತ್ರಿಸಲು ನಂದಿ ಗಿರಿಧಾಮದ ಸಿಬ್ಬಂದಿ ಹರಸಾಹಸಪಟ್ಟರು.

ಬೆಂಗಳೂರಿನ ಗೃಹಿಣಿ ದಿವ್ಯಾರಘುರಾಮನ್ ಮಾತನಾಡಿ, ಕಚೇರಿಗಳಿಗೆ ರಜೆ ಇದ್ದು, ಬೇಸಿಗೆ ಮಕ್ಕಳಿಗೂ ರಜೆ ಇರುವ ಕಾರಣ ಪ್ರಕೃತಿಯ ಆಹ್ಲಾದವನ್ನು ಅನುಭವಿಸೋಣವೆಂದು ಬೆಳಗ್ಗೆ ನಾಲ್ಕುವರೆಗೆ ನಂದಿ ಗಿರಿಧಾಮಕ್ಕೆ ಕಾರಿನಲ್ಲಿ ಬಂದೆವು. ಆದರೆ ಬೆಟ್ಟದ ಅರ್ಧದಾರಿಯಲ್ಲಿಯೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡೆವು. ಸೂರ್ಯೋದಯವಾಗಿದೆ ಇಬ್ಬನಿ ಬೀಳುವುದನ್ನು ಮಕ್ಕಳಿಗೆ ತೋರಿಸಬೇಕೆಂದು ಕೊಂಡಿದ್ದೆವು ಅದು ಆಗಲಿಲ್ಲ. ಹೋಗಲಿ ನಡೆದುಕೊಂಡೆ ಹೋಗೋಣಾ ಎಂದು ಎರಡು ಕಿಲೋ ಮೀಟರ್ ನಡೆದು ಬಂದೆವು ಎಂದು ಹೇಳಿದರು.

ಬೆಂಗಳೂರಿನ ಉಪನ್ಯಾಸಕಿ ದಿಯಾ ಡ್ಯಾನಿಯಲ್ ಮಾತನಾಡಿ, ಬೆಳಗ್ಗೆ ಐದು ಗಂಟೆಗೆ ನಂದಿ ಹಿಲ್ಸ್ ಗೆ ಬಂದೆವು. ಆದರೆ ಇಲ್ಲಿ ಟ್ರಾಫಿಕ್ ಕಂಡು ವಾಪಸ್‌ ಈಶಾಗೆ ಬಂದಿದ್ದೇವೆ. ಇಲ್ಲಿಯೂ ಸಹ ಹೆಚ್ಚಿನ ಜನ ಪ್ರವಾಸಿಗರನ್ನು ನೋಡಿ ಸಂತೋಷವಾಗಿದೆ. ಈಗ ಸಂಜೆ ಮೂಡಿಬಂದ ಲೇಸರ್ ಶೋ ನೋಡಿ ಪುನೀತರಾದೆವು. ಇಂತಹ ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡಿ 112 ಅಡಿಯ ಆದಿಯೋಗಿ ಶಿವನವಿಗ್ರಹ, 54 ಅಡಿಗಳ ಎತ್ತರದ ಮಹಾಶೂಲ ಮತ್ತು 21 ಅಡಿ ಎತ್ತರದ ಮಹಾ ನಂದಿಯ ವಿಗ್ರಹ ನೋಡಿರುವುದನ್ನು ಮರೆಯಲಾಗದು ಎಂದು ತಿಳಿಸಿದರು.

ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ವಿಶ್ವ ವಿಖ್ಯಾತ ನಂದಿಗಿರಿಧಾಮ ಮತ್ತು ಈಶಾದ 112 ಅಡಿಗಳ ಆದಿಯೋಗಿ ಸನ್ನಿಧಿಯಲ್ಲಿ ಮುಂಜಾನೆಯಿಂದಲೆ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ವೀಕೆಂಡ್ ಆಗಿರೋದರಿಂದ ಜನಸಾಗರವೆ ನೆರೆದಿತ್ತು. ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ದಾಂಗುಡಿ ಜೋರಾಗಿತ್ತು.ಆಗಮಿಸಿದ ಪ್ರವಾಸಿಗರು ನಂದಿಬೆಟ್ಟ ಸೌಂದರ್ಯ ಸವಿದರು. ಪ್ರಕೃತಿಯ ಮಡಿಲಲ್ಲಿ ಪ್ರೇಮ ಪಕ್ಷಿಗಳ ಕಲರವ ಹೆಚ್ಚಾಗಿತ್ತು.

ವೀಕೆಂಡ್ ಆಗಿದ್ದರಿಂದ ಆವಲಗುರ್ಕಿಬಳಿಯ ಈಶಾದ 112 ಅಡಿ ಆದಿಯೋಗಿ ಪ್ರತಿಮೆ ವೀಕ್ಷಸಲು ಭಾನುವಾರ ಪ್ರವಾಸಿಗರ ದಂಡೇ ನೆರೆದಿತ್ತು. ಆದರೆ, ಸಾಕಷ್ಟು ಮಂದಿ ಬಂದಿದ್ದರಿಂದ ಸಾಕಷ್ಟು ಮಂದಿ ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾಯಿತು.

ಬೆಳಗ್ಗೆಯಿಂದಲೇ ಸಾವಿರಾರು ಮಂದಿ ನಂದಿಗಿರಿಧಾಮ ಮತ್ತು ಈಶಾಗೆ ಆಗಮಿಸಿದ್ದರು. ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಲಗ್ಗೆಯಿಟ್ಟಿದ್ದರು. ಆದರೆ, ನಂದಿ ಬೆಟ್ಟದಲ್ಲಿ ಕಾರು ಪಾರ್ಕಿಂಗ್ ಹೌಸ್ ಫುಲ್ ಆದ ಕಾರಣ ಕೆಲವರು ಬೆಟ್ಟದ ಬುಡದವರೆಗೂ ಬಂದು ವಾಪಸ್ ಹೋಗುವಂತಾಯಿತು. ಈಶಾಗೆ ಬಂದವರಿಗೆ ರಾಷ್ಟ್ರೀಯ ಹೆದ್ದಾರಿ 44 ರ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ