ಕನ್ನಡಪ್ರಭ ವಾರ್ತೆ ಮೈಸೂರು
ವಿವಿಧ ಬಗೆಯ ನೈಸರ್ಗಿಕ ಅಕ್ಕಿಗಳನ್ನು ಮೇಳದಲ್ಲಿ ಇರಿಸಲಾಗಿತ್ತು. ವಿಶಿಷ್ಟ ಗುಣಲಕ್ಷಣಗಳು, ಸುವಾಸನೆ ಮತ್ತು ರುಚಿಯುಳ್ಳ ಅಕ್ಕಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ವಿವಿಧ ಬಗೆಯ ಅಕ್ಕಿಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳದಲ್ಲಿನ ಎಲ್ಲಾ ಬಗೆಯ ಅಕ್ಕಿಗಳು ಮತ್ತು ಅವುಗಳ ವೈಶಿಷ್ಟ್ಯವನ್ನು ಜಿಲ್ಲಾಧಿಕಾರಿ ಕೇಳಿ ತಿಳಿದುಕೊಂಡರು.ಈ ಅಕ್ಕಿಗಳ ಮೇಳದಿಂದ ರೈತರ ಮತ್ತು ಸಾರ್ವಜನಿಕರ ಆರೋಗ್ಯ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ. ನೈಸರ್ಗಿಕ ಮತ್ತು ಆರೋಗ್ಯಕ್ಕೆ ಪೂರಕವಾದ ಅಕ್ಕಿಗಳು ಇಲ್ಲಿವೆ ಎಂದರು.
ಸಿ.ಎಫ್.ಟಿ.ಆರ್.ಐ ನಿರ್ದೇಶಕ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ಅಕ್ಕಿ ಸಂರಕ್ಷಕಿ ಗೀತಾ ಮತ್ತು ಶ್ರೀನಿವಾಸಮೂರ್ತಿ, ರೋಟರಿ ಬೆಂಗಳೂರು ಉತ್ತರದ ಅಧ್ಯಕ್ಷ ಎಂ.ಕೆ. ಶ್ರೀಧರ್, ಕಾರ್ಯದರ್ಶಿ ರಾಜು, ಬೀಜ ಸಂರಕ್ಷಕ ಬೋರೇಗೌಡ, ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮೊದಲಾದವರು ಇದ್ದರು.