ಕನ್ನಡಪ್ರಭ ವಾರ್ತೆ ಮಾಲೂರು
‘ನನ್ನನ್ನು ಹುಚ್ಚ ಎಂದು ಏಕವಚನ ದಲ್ಲಿ ಸಂಬೋಧಿಸಿರುವ ಶಾಸಕ ನಂಜೇಗೌಡರ ಮಾತು ಒಬ್ಬ ಶಾಸಕನಿಗೆ ಇರಬೇಕಾದ ಕನಿಷ್ಠ ಸೌಜನ್ಯ ಇಲ್ಲದ ವರ್ತನೆ’ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಹೇಳಿದರು. ಅವರು ಮಾಲೂರಿನಲ್ಲಿ ಸ್ಥಳೀಯ ಬಿಜೆಪಿ ಘಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ನಾನು ಸೋತ ನಂತರ ಏಳು ವರ್ಷ ಒಮ್ಮೆಯು ನಂಜೇಗೌಡ ರ ಹೆಸರನ್ನು ಎತ್ತಲಿಲ್ಲ. ನಮ್ಮ ಕಾರ್ಯಕರ್ತರಿಗೂ ನಿಮ್ಮ ಸುದ್ಧಿಗೆ ಹೋಗದಂತೆ ತಿಳಿಸಿದೆ. ಆದರೆ ನನ್ನ ಬಗೆ ಏಕವಚನದಲ್ಲಿ ಸಂಬೋಧಿಸುವ ನಿಮ್ಮ ವರ್ತನೆ ನಿಮ್ಮ ಗರ್ವ, ಅಹಂ ತೋರಿಸುತ್ತಿದೆ ಎಂದರು.ಸ್ಥಳೀಯ ಎಂಬ ಕಾರಣಕ್ಕೆ ಗೆಲುವು
ಸ್ಥಳೀಯ ಎಂಬ ಹಣೆ ಪಟ್ಟಿಯಲ್ಲಿ ಗೆದ್ದ ನೀವು ತಾಲೂಕಿನಲ್ಲಿ ಜನ ಸೇವೆ ಮಾಡುವ ಬದಲು ಲೂಟಿ ಮಾಡಿದ ಕೀರ್ತಿ ನಿಮ್ಮದು. ತಾಲೂಕಿನ ಪ್ರತಿ ಸರ್ಕಾರಿ ಕಚೇರಿ ನಿಮ್ಮ ಭ್ರಷ್ಟಚಾರದ ಆಡಳಿತ ಎದ್ದು ಕಾಣುತ್ತಿದೆ. ನಿಮ್ಮ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್ ಅವರೇ ಹಣ ಕೊಟ್ಟು ಇಲ್ಲಿನ ಸರ್ಕಾರಿ ಇಲಾಖೆ ಲಂಚ ಕೊಟ್ಟು ಕೆಲಸ ಮಾಡಿಕೊಂಡಿದ್ದು, ಇಲ್ಲಿನ ಭ್ರಷ್ಠತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಲೇವಡಿ ಮಾಡಿದರು.ಮರು ಮತಎಣಿಗೆ ವಹಿಸಿದ್ದೇ ತಪ್ಪೇ
ಕಳೆದ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರೀಯೆಯಲ್ಲಿ ಲೋಷದೋಷ ಕಂಡ ಬಂದ ಹಿನ್ನೆಲೆಯಲ್ಲಿ ಮರು ಮತಎಣಿಗೆ ಅಗ್ರಹಿಸಿ ತಾವು ಕೋರ್ಟ್ ಗೆ ಹೋಗಿ ನ್ಯಾಯಯುತ ಆದೇಶ ಪಡೆದು ಬಂದಿದೇ ತಪ್ಪು ಎಂಬ ರೀತಿ ಎಕ ವಚನದಲ್ಲಿ ಬೈಯುವುದು ಒಬ್ಬ ಗೌರವಯುತ ಶಾಸಕನ ಸ್ಥಾನಕ್ಕೆ ಚುತಿ ಬರುವಹಾಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ,ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣಾ ರೆಡ್ಡಿ ,ಬೆಳ್ಳಾವಿ ಸೋಮಣ್ಣ,ಚಿನ್ನಸ್ವಾಮಿ ಗೌಡ, ದೂಡ್ಡಿ ರಾಜಪ್ಪ ,ವೇಣುಗೋಪಾಲ್ ಗೌಡ,ವೆಂಕಟೇಶ್ ಮತ್ತಿತರರು ಇದ್ದರು.