ದಾಬಸ್‍ಪೇಟೆ: ನೆಲಮಂಗಲ ತಾಲೂಕು ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.ನಂಜುಂಡಯ್ಯ ಹಾಗೂ ಉಪಾಧ್ಯಕ್ಷರಾಗಿ ವೀಣಾ ಅವಿರೋಧ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಜಿ.ನಂಜುಂಡಯ್ಯ ಮಾತನಾಡಿ, ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಶಿಕ್ಷಕರ ತಂಡ ವಿದ್ಯಾ ಇಲಾಖಾ ನೌಕರರ ಸಂಘದಲ್ಲಿ ನಿರ್ದೇಶಕನಾಗಿ ಮಾಡಿ ಜತೆಗೆ ಅಧ್ಯಕ್ಷರಾಗುವ ಅವಕಾಶ ನೀಡಿದ್ದಾರೆ. ಸಂಘದ ಎಲ್ಲಾ ಸದಸ್ಯರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ನೂತನ ಅಧ್ಯಕ್ಷ ಜಿ.ನಂಜುಂಡಯ್ಯ, ಉಪಾಧ್ಯಕ್ಷೆ ವೀಣಾ ಅವರನ್ನು ನಿಕಟಪೂರ್ವ ಅಧ್ಯಕ್ಷ ಎನ್.ಗಿರೀಶ್, ನಿರ್ದೇಶಕರಾದ ನಂಜಮ್ಮ, ಜಿ.ಕೃಷ್ಣ ಮೂರ್ತಿ, ಕೆ.ಬಿ.ಚಂದ್ರಶೇಖರಯ್ಯ, ಎ.ಎಚ್ ಬಸವರಾಜಯ್ಯ, ಎಂ.ಆರ್.ಮಲ್ಲಿಕಾರ್ಜುನಯ್ಯ, ಜಿ.ಸೋಮಶೇಖರಯ್ಯ, ಎಚ್.ಯೋಗಾನಂದ, ಬಿ.ಎಸ್.ಆಂಜನಮೂರ್ತಿ, ನಾಗರಾಜು, ಎಂ.ಶಿವಕುಮಾರ್ ಅಭಿನಂದಿಸಿದರು. ಈ ವೇಳೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ವಾಸುದೇವಮೂರ್ತಿ, ಮಾಜಿ ತಾಲೂಕು ಅಧ್ಯಕ್ಷ ಪುಟ್ಟರುದ್ರಾರಾಧ್ಯ, ಉಪಾಧ್ಯಕ್ಷ ಎಸ್.ಎನ್.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಕಸಾಪ ಅಧ್ಯಕ್ಷ ಸದಾನಂದ ಆರಾಧ್ಯ, ಜಿಲ್ಲಾ ಸಹಕಾರ್ಯದರ್ಶಿ ರೇಣುಕಾಸ್ವಾಮಿ, ನಿರ್ದೇಶಕರಾದ ವನರಾಜು, ವಿಜಯಕುಮಾರಿ, ಗ್ರಾಮೀಣ ಶಿಕ್ಷಕರ ಸಂಘದ ಮಲ್ಲಿಕಾರ್ಜುನ್, ಶಿಕ್ಷಕರಾದ ಜಿ.ವಿಕುಮಾರ್. ಮಜುಳಾ ನಂಜುಡಯ್ಯ, ಗೋಪಾಲ್ ಗೌಡ, ನಿವೃತ್ತ ಶಿಕ್ಷಕ ಶಿವಕುಮಾರ್, ಕಾರ್ಯದರ್ಶಿ ಆರ್.ಕೊಟ್ರೇಶ್ ಮತ್ತಿತರರಿದ್ದರು.ಪೋಟೋ 6 :ನೆಲಮಂಗಲ ತಾಲೂಕು ವಿದ್ಯಾ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷೆ ವೀಣಾ ಅವರನ್ನು ನಿಕಟಪೂರ್ವ ಅಧ್ಯಕ್ಷ ಎನ್.ಗಿರೀಶ್, ನಿರ್ದೇಶಕರಾದ ನಂಜಮ್ಮ, ಜಿ.ಕೃಷ್ಣ ಮೂರ್ತಿ, ಕೆ.ಬಿ.ಚಂದ್ರಶೇಖರಯ್ಯ, ಎ.ಎಚ್ ಬಸವರಾಜಯ್ಯ, ಎಂ.ಆರ್.ಮಲ್ಲಿಕಾರ್ಜುನಯ್ಯ, ಜಿ.ಸೋಮಶೇಖರಯ್ಯ ಮತ್ತಿತರರು ಅಭಿನಂದಿಸಿದರು.