ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆ ಕಚೇರಿ ಆವರಣದಲ್ಲಿ ನಡೆದ ಪರಿಸರ ಪ್ರೇಮಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲಕ್ಕಿ ಡಿಪ್ ಎತ್ತುವ ಮೂಲಕ 5 ಮಂದಿ ಅದೃಷ್ಟಶಾಲಿ ವಿಜೇತರಾಗಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ತಿಳಿಸಿದ್ದಾರೆ.
ಪಟ್ಟಣದ ಸಾತ್ವಿಕ, ಕಿರಣ್, ಅಂಜನ್ ಜೀವನ್, ತನುಶ್ರೀ, ಗೀತಾ ಪರಿಸರ ಪ್ರೇಮಿಗಳಾಗಿ ಆಯ್ಕೆಯಾಗಿದ್ದಾರೆ. ವಿಜೇತ ಐದು ಮಂದಿಗೆ ಅತೀ ಶ್ರೀಘ್ರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಪುರಸಭೆ ಆಡಳಿತಾಧಿಕಾರಿ ದಿನೇಶ್ ಕುಮಾರ್ ಮೀನಾ ತಲಾ ಸಾವಿರ ನಗದು ಬಹುಮಾನ ಹಾಗೂ ವಿಶೇಷ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.ಪರಿಸರ ಆಂದೋಲನದಲ್ಲಿ ಭಾಗವಹಿಸಿ ಗಿಡ ನೆಟ್ಟ ನೀರೆರೆದ ಎಲ್ಲಾ ೧೦೦ ಮಂದಿ ಸ್ಪರ್ಧಿಗಳಿಗೂ ಸಹ ಪುರಸಭೆಯು ಪ್ರೋತ್ಸಾಹಕ ಪ್ರಮಾಣ ಪತ್ರಗಳನ್ನೂ ವಿತರಿಸಲಾಗುವುದು ಎಂದರು.
ಪರಿಸರ ಆಂದೋಲನ ಕಾರ್ಯಕ್ರಮ ಯಶಸ್ವಿಗೆ ಪಟ್ಟಣದ ನೂರಾರು ಮಂದಿ ನಾಗರಿಕರು ಹಾಗೂ ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.--
ಗುಂಡ್ಲುಪೇಟೆ ಪುರಸಭೆಯಲ್ಲಿ ಪರಿಸರ ಪ್ರೇಮಿಗಳ ಆಯ್ಕೆಯಾದವರ ಭಾವಚಿತ್ರವನ್ನು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಬಿಡುಗಡೆಗೊಳಿಸಿದರು.