ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಡೀ ಜಗತ್ತಿನಲ್ಲಿ ಮಾನವ ಕುಲವೊಂದೇ ಎಲ್ಲಾ ಧರ್ಮಗಳ ಸಾರವು ಒಂದೇ ಎಲ್ಲರ ಆಧ್ಯಾತ್ಮಿಕ ಚಿಂತನೆಯು ಒಂದೇ ಎನ್ನುವ ದಿವ್ಯ ಸಂದೇಶವನ್ನು ಈ ನಾಡಿಗೆ ನೀಡಿ ಎಲ್ಲರ ಹೃದಯದಲ್ಲಿ ಮನೆ ಮಾತಾಗಿರುವ ಸಂತ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ಸಂಘಟನೆಯೊಂದು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಅರಮೇರಿ ಕಳ೦ಚೇರಿ ಮಠದ ಸ್ವಾಮೀಜಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಪ್ರೀತಿಸುವಂತಹ ವ್ಯಕ್ತಿ ಆಗಬೇಕು: ಮನುಷ್ಯನಲ್ಲಿರುವ ದ್ವೇಷ ಕ್ಲೇಶಗಳನ್ನು ಕಳೆದು ಇಡೀ ಸಮಾಜವನ್ನು ಪ್ರೀತಿಸುವಂತಹ ವ್ಯಕ್ತಿ ಆಗಬೇಕು. ಶೋಷಿತ ವರ್ಗದವರಿಗೆ ಬದುಕನ್ನು ಕಟ್ಟಿಕೊಳ್ಳುವ, ಧಾರ್ಮಿಕವಾಗಿ ಸಾಮಾಜಿಕವಾಗಿ ಮೇಲೆ ಬರುವ ಚಿಂತನೆಗಳನ್ನು ಸಮಾಜದಲ್ಲಿ ಮೂಡಿಸಿದ ಶ್ರೇಷ್ಠ ಸಂತ ಬಸವಣ್ಣನವರ ನಂತರ ಅದನ್ನು ಜಾಗೃತಿಗೊಳಿಸಿದ ಶ್ರೇಷ್ಠ ಸಂತ ನಾರಾಯಣ ಗುರುಗಳು. ಅವರ ಜನ್ಮ ದಿನಾಚರಣೆ ಸಂಭ್ರಮದಲ್ಲಿ ನಾವು ಭಾಗಿಯಾಗುತ್ತಿರುವುದು ಸಂತಸದ ವಿಷಯ. ಈ ದೇಶದಲ್ಲಿ ಇರುವ ಪ್ರತಿ ಪ್ರಜೆಗೆ ಆಧ್ಯಾತ್ಮಿಕ ಅರಿವು ಮೂಡಿಸುವ ಅಗತ್ಯವಿಲ್ಲ. ಭರತ ಖಂಡದಲ್ಲಿ ಹುಟ್ಟಿದ ಪ್ರತಿ ವ್ಯಕ್ತಿ ಧರ್ಮದಲ್ಲಿ ಜನಿಸಿ ಧರ್ಮದಲ್ಲೇ ಬೆಳೆದು ಧರ್ಮದಲ್ಲಿ ಬದುಕನ್ನು ಕೊನೆಗೊಳಿಸುತ್ತಾನೆ. ಭಾರತದ ಎಲ್ಲಾ ಭಾಗಗಳಲ್ಲಿ ತನ್ನ ಸಂದೇಶವನ್ನು ಸಾರಿ ಧರ್ಮದ ತಳಹದಿಯಲ್ಲಿ ಇಡೀ ಧರ್ಮವನ್ನು ಸಂಘಟಿಸಲಾಗುತ್ತಿದೆ. ಗುರುವನ್ನು ಮುಂದಿಟ್ಟುಕೊಂಡು ಸಂಘಟನೆ ಬೆಳೆಯುತ್ತದೆ ಎಂದರು.ಬಾಹ್ಯ ಒತ್ತಡದಿಂದ ಒಬ್ಬ ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಗುರುವನ್ನು ಮೀರಿದ ವಸ್ತು ಇನ್ನೊಂದಿಲ್ಲ. ಭಾರತದ ಶ್ರೇಷ್ಠ ಪರಂಪರೆ ನಾರಾಯಣ ಗುರುಗಳ ಜನ್ಮ ದಿನಾಚರಣೆ ಮೂಲಕ ನಾಡಿನ ಪರಂಪರೆ ಮುಂದುವರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ನಾಪೋಕ್ಲು ಟೌನ್ ಜುಮ್ಮಾ ಮಸೀದಿಯ ಧರ್ಮ ಗುರು ಶೌಕತ್ ಆಲಿ ಸಕಾಫಿ, ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ. ಇಸ್ಮಾಯಿಲ್, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಜಮಾಯತ್ ಅಧ್ಯಕ್ಷರಾದ ಎಮ್ ಎಚ್ ಅಬ್ದುಲ್ ರೆಹಮಾನ್, ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಚಂದ್ರನ್ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ ಲವ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ವಕ್ತಾರ ಮನ್ಸೂರು ಆಲಿ ಎಂ, ಎ , ಕಾಫಿ ಬೆಳೆಗಾರರು ವಕೀಲರು ಕೂಡಿಮನಿಯಿಂದ ಶರಣು ಕುಟ್ಟಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಕಾಫಿಬೆಳೆಗಾರ , ವಿ ಎಸ್ ಎಸ್ ಯನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಶಾಖೆ ಉಪಾಧ್ಯಕ್ಷ ಹರಿದಾಸ್, ಆಚರಣಾ ಸಮಿತಿ ಉಪಾಧ್ಯಕ್ಷ ತಂಗ, ಸುರೇಶ್, ಕಾರ್ಯದರ್ಶಿ ಪಿ ಸಿ.ಕಿಶೋರ್ , ಸಹ ಕಾರ್ಯದರ್ಶಿ ಅಜಿತ್ ಎಂ.ಆರ್, ಆಚರಣಾ ಸಮಿತಿ ಉಪಾಧ್ಯಕ್ಷ ಸತೀಶ್ ಟಿ..ಕೆ. ಎಂ ಕೆ, ಹರೀಶ್ ಟಿ.ಸಿ., ಮಣಿ ಟಿ.ಸಿ. ಹರೀಶ್ ಕುಮಾರ್ ಪಿ ಆಚರಣ ಸಮಿತಿ ಉಪಾಧ್ಯಕ್ಷ ಸತೀಶ್ ಸೇರಿದಂತೆ ಸಮಿತಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.ಹರ್ಷ ಬಾಲಕೃಷ್ಣ ಪ್ರಾರ್ಥಿಸಿದರು. ರವಿ ಓಂಕಾರ್ ಸ್ವಾಗತಿಸಿದರು. ರೇಡಿಯೋ ಉದ್ಘಾಷಕಿ ಬಾಳೆಯಡ ದಿವ್ಯಮಂದಪ್ಪ ಹಾಗೂ ರವಿ ಓಂಕಾರ್ ನಿರೂಪಿಸಿದರು. ಬಳಿಕ 7 ಬೀಟ್ಸ್ ಆರ್ಕೆಸ್ಟ್ರಾ ಕ್ಯಾಲಿಕೆಟ್ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಿ ಪ್ರೇಕ್ಷಕರನ್ನು ರಂಜಿಸಿತು .ಇದಕ್ಕೂ ಮೊದಲು ಇಲ್ಲಿಯ ಸಂತೆ ಮೈದಾನದಿಂದ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಇರಿಸಿ ಕೇರಳದ ವಿಶೇಷ ಚೆಂಡೆ ಮೇಳಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭ ಪುರುಷರ ಅಂತಿಮ ಹಗ್ಗ ಜಗ್ಗಾಟ ಸ್ಪರ್ಧಾ ಕಾರ್ಯಕ್ರಮವನ್ನು ಗಣ್ಯರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಪುರುಷರ ಹಗ್ಗ ಜಗ್ಗಾಟದಲ್ಲಿ ಇಗ್ಗುತ್ತಪ್ಪ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪ್ರಥಮ ವಿಜೇತರಿಗೆ 30000 ರು. . ನಗದು ಹಾಗೂ ಟ್ರೋಫಿ, ಹಿಂದೂ ಮಲಯಾಳಿ ಸಂಘ ಕಾರ್ಗಿಲ್ ಕೊಡಗು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಈ ತಂಡಕ್ಕೆ ದ್ವಿತೀಯ ಬಹುಮಾನ 15000 ರು..ನಗದು ಹಾಗೂ ಟ್ರೋಫಿ ವಿತರಿಸಲಾಯಿತು.ಚೇರಂಬಾಣೆ ಪ್ರಶಸ್ತಿಗೆ ಭಾಜನ:ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಪ್ರಶಸ್ತಿಗೆ ಭಾಜನವಾಯಿತು. ಈ ತಂಡಕ್ಕೆ 30000 ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ತಂಡ 15000 ರು. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಸಿದ್ದಾಪುರದ ಗ್ಯಾಲಕ್ಸಿ ನಲ್ವತೆಕ್ಕರೆ ತಂಡ ಮುಡಿಗೇರಿಸಿಕೊಂಡರೆ ಹಾಕತ್ತೂರಿನ ಅಟ್ಯಾಕ್ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು.ವಿಜೇತ ತಂಡಕ್ಕೆ 33, 333 ರು. ನಗದು ಮತ್ತು ಆಕರ್ಷಕ ಟ್ರೋಫಿ ರನ್ನರ್ ಅಪ್ ತಂಡಕ್ಕೆ 15, 555 ರು. ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.
ತೃತೀಯ ಸ್ಥಾನವನ್ನು ಜಂಟಿ ವಿಜೇತರಾಗಿ ಕೊಂಡಂಗೇರಿ ತಂಡ ಹಾಗೂ ಅಯ್ಯಂಗೇರಿ ಫ್ರೆಂಡ್ಸ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.ಮ್ಯಾನ್ ಆಫ್ ದ ಸೀರೀಸ್: ಚಿಂಚು ನಲ್ವತೆಕ್ಕರೆಬೆಸ್ಟ್ ಬ್ಯಾಟ್ಸ್ ಮ್ಯಾನ್: ಸಾಹುಲ್ ನಲ್ವತೆಕ್ಕರೆ,ಬೆಸ್ಟ್ ಬೌಲರ್ : ರಫೀಕ್ ಹಾಕತ್ತೂರು