ಜ.25ರಂದು ಶ್ರೀಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

KannadaprabhaNewsNetwork |  
Published : Jan 22, 2026, 01:45 AM IST
ಶ್ರೀ ಕಂಬದ ನರಸಿಂಹಸ್ವಾಮಿ | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಸಾತನೂರು ಬೆಟ್ಟದಲ್ಲಿ ಶ್ರೀಕಂಬದನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ ಜ.25ರಂದು ನಡೆಯಲಿದೆ. ದೇವರಿಗೆ ನಿತ್ಯ ಬೆಳಗ್ಗೆ 8 ಗಂಟೆಯಿಂದ 12ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಬೆಟ್ಟದಲ್ಲಿ ಶ್ರೀಕಂಬದನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ ಜ.25ರಂದು ನಡೆಯಲಿದೆ. ಜ.21ರಿಂದಲೇ ದೇವರಿಗೆ ನಿತ್ಯ ಬೆಳಗ್ಗೆ 8 ಗಂಟೆಯಿಂದ 12ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಜ.21ರಂದು ಶ್ರೀಕಂಬದ ನರಸಿಂಹ ಸ್ವಾಮಿಗೆ ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ. ಸಂಜೆ 5 ರಿಂದ 8 ಗಂಟೆಯವರೆಗೆ ಸ್ವಸ್ತಿ ವಾಚನ ವಿಶ್ವೇಶ್ವೇನಾರಾಧನೆ ಭಗವತ್ ವಾಸುದೇವ ಪುಣ್ಯಾಹ ರಕ್ಷಾ ಬಂಧನ, ಮೃತಿಕಾ ಸಂಗ್ರಹಣಾ ಅಂಕುರಾರ್ಪಣ, ಗರುಡ ಪ್ರತಿಷ್ಠೆ, ಅಂಕುರಾರ್ಪಣ ಹೋಮ, ಮಹಾಮಂಗಳಾರತಿ ನಡೆಯಿತು.

ಜ.22ರಂದು ನಿತ್ಯ ಪಂಚಾಮೃತ ಅಭಿಷೇಕ, ವಿಶ್ವೇಶ್ವೇನಾರಾಧನೆ, ಭಗವತ್ ವಾಸುದೇವ ಪುಣ್ಯಾಹ ಧ್ವಜಾರೋಹಣ ಶೇಷವಾಹನೋತ್ಸವ. ಸಂಜೆ 5 ರಿಂದ 8 ಗಂಟೆಯವರೆಗೆ ಭೇರಿತಾಡನ, ಯಾಗಶಾಲಾ ಪ್ರವೇಶ, ದೇವತಾಹ್ವಾನ, ಧ್ವ್ವಾರತೋರಣ, ದ್ವಜ ಕುಂಬಾರಧನೆ, ಕಲಶಾರಾಧನೆ, ನಿತ್ಯ ಹೋಮ, ನಿತ್ಯ ಬಲಿಹರಣ, ಪ್ರ‍್ರಾಕಾರೋತ್ಸವ ಏರ್ಪಡಿಸಲಾಗಿದೆ.

ಜ.23ರಂದು ಗರುಡೋತ್ಸವ. ಸಂಜೆ 5 ರಿಂದ 8 ಗಂಟೆವರೆಗೆ ನಿತ್ಯ ಹೋಮ, ನಿತ್ಯ ಬಲಿಹರಣ ಪ್ರಹ್ಲಾದ ಪರಿಹಾಲನೆ, ಪ್ರಾಕಾರೋತ್ಸವ, ಮಹಾಮಂಗಳಾರತಿ ಜರುಗಲಿದೆ. ಜ. 24ರಂದು ಬೆಳಗ್ಗೆ 8 ರಿಂದ 12 ಗಂಟೆಯವರೆಗೆ ಶ್ರೀ ಸ್ವಾಮಿಯವರಿಗೆ ಕಲ್ಯಾಣೋತ್ಸವ. ಸಂಜೆ 5 ರಿಂದ 8 ಗಂಟೆವರೆಗೆ ನಿತ್ಯ ಹೋಮ, ನಿತ್ಯಬಲಿಹರಣ, ಗಜೇಂದ್ರ ಮೋಕ್ಷ, ಗಜವಾಹನೋತ್ಸವ ಆಯೋಜಿಸಲಾಗಿದೆ.

ಜ. 25ರಂದು ರಥ ಪ್ರತಿಷ್ಠೆ, ರಥಾಂಗ ಹೋಮ, ರಥಬಲಿ, ರಾಜ ಮರ್ಯಾದೆಯಲ್ಲಿ ಬೆಳಗ್ಗೆ 11.50 ರಿಂದ 12.15 ರವರೆಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಸ್ವಾಮಿ ‘ಬ್ರಹ್ಮರಥೋತ್ಸವ’ ಜರುಗಲಿದೆ. ಸಂಜೆ 5 ರಿಂದ 8 ಗಂಟೆಯವರೆಗೆ ನಿತ್ಯ ಹೋಮ, ನಿತ್ಯ ಬಲಿಹರಣ ಶಾಂತೋತ್ಸವ ಜರುಗಲಿದೆ.

ಜ,26ರಂದು ಅಶ್ವ ವಾಹನೋತ್ಸವ, ಸಂಧಾನ ಸೇವಾ ಅವಕೃತ ಸ್ನಾನ, ನಿತ್ಯಹೋಮ, ನಿತ್ಯ ಬಲಿಹರಣ, ಪ್ರಾಕಾರೋತ್ಸವ ನಡೆಯಲಿದೆ.

ಜ.27ರಂದುಹನುಮಂತೋತ್ಸವ ಮಹಾಪೂರ್ಣಾಹುತಿ, ಧ್ವಜಾರೋಹಣ ಕುಂಭಉದ್ಘಾಸನ, ಕುಂಭಪೋಕ್ಷಣ ಮಹಾಮಂಗಳಾರತಿ. ಸಂಜೆ 5 ರಿಂದ 8 ಗಂಟೆಯವರೆಗೆ ಶ್ರೀ ಸ್ವಾಮಿಯವರಿಗೆ ಮಹಾ ಕುಂಭಾಭಿಷೇಕ, ದ್ವಾದಶಾರಾಧನೆ, ಮೂಕಬಲಿ, ಶಯನೋತ್ಸವ ಮಹಾಮಂಗಳಾರತಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಎಸ್.ವಿಶ್ವನಾಥ್ ಭಾಗವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!