ನರಸಿಂಗರಾವ್ ಬಿಜೆಪಿ ನಕ್ಷತ್ರ: ಕಟೀಲ್

KannadaprabhaNewsNetwork |  
Published : Jul 01, 2025, 12:49 AM IST
29ುಲು2 | Kannada Prabha

ಸಾರಾಂಶ

ಯಾವುದೇ ಅಧಿಕಾರ ಬಯಸದೇ ಪಕ್ಷಕ್ಕಾಗಿ ಶ್ರಮಿಸಿದ ನರಸಿಂಗರಾವ್‌ ಕುಲಕರ್ಣಿ ಬಿಜೆಪಿ ನಕ್ಷತ್ರರಾಗಿದ್ದಾರೆ. ಬಿಜೆಪಿ ಅಥವಾ ಬಿಜೆಪಿ ಸರ್ಕಾರವಿದ್ದಾಗ ಅಧಿಕಾರ ಬಯಸಲಿಲ್ಲ.

ಗಂಗಾವತಿ:

ಯಾವುದೇ ಅಧಿಕಾರ ಬಯಸದೇ ಪಕ್ಷಕ್ಕಾಗಿ ಶ್ರಮಿಸಿದ ನರಸಿಂಗರಾವ್‌ ಕುಲಕರ್ಣಿ ಬಿಜೆಪಿ ನಕ್ಷತ್ರರಾಗಿದ್ದಾರೆ ಎಂದು ಮಾಜಿ ಸಂಸದ ನಳಿನ್‌ಕುಮಾರ ಕಟೀಲ್ ಹೇಳಿದರು.

ನಗರದ ಚೆನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಬಿಜೆಪಿ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ದಿ. ನರಸಿಂಗರಾವ ಕುಲಕರ್ಣಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರಸಿಂಗರಾವ್ ಕುಲಕರ್ಣಿ ಬಿಜೆಪಿ ಅಥವಾ ಬಿಜೆಪಿ ಸರ್ಕಾರವಿದ್ದಾಗ ಅಧಿಕಾರ ಬಯಸಲಿಲ್ಲ ಎಂದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ನರಸಿಂಗರಾವ್ ಕುಲಕರ್ಣಿ ಪ್ರಾಮಾಣಿಕ, ನಿಷ್ಠೆಯಿಂದ ಬಿಜೆಪಿಗಾಗಿ ಶ್ರಮಿಸಿದವರು ಎಂದು ಸ್ಮರಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನರಸಿಂಗರಾವ್ ಕುಲಕರ್ಣಿ ಬಿಜೆಪಿ ಸಂಘಟಿಸಿದ ಕಾರ್ಯಕರ್ತರಾಗಿದ್ದರು, ಅವರು ಎಂದಿಗೂ ಹುದ್ದೆಗೆ ಬಯಸದೇ ಪಕ್ಷದ ಸಿದ್ಧಾಂತ ಪಾಲಿಸುವ ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ತ್ರಿವಿಕ್ರಂ ಜೋಶಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಿವರಾಮಗೌಡ, ಶರಣು ತಳ್ಳೀಕೇರಿ, ವಿ.ಎಂ. ಭೂಸನೂರಮಠ, ಚಂದ್ರಶೇಖರ ಹಲಗೇರಿ, ಬಸವರಾಜ ಕ್ವಾಟರ್, ಜಿ. ವೀರಪ್ಪ, ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಎಚ್.ಎಂ. ಸಿದ್ದರಾಮಸ್ವಾಮಿ, ಹಾಸ್ಯ ಸಾಹಿತಿ ಬಿ. ಪ್ರಾಣೇಶ, ನಗರಸಭಾ ಸದಸ್ಯ ವಾಸುದೇವ ನವಲಿ, ವೀರಭದ್ರಪ್ಪ ನಾಯಕ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ