ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ

KannadaprabhaNewsNetwork |  
Published : May 30, 2025, 12:30 AM IST
ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾ.ಪಂ.ಗೆ ನೂತನವಾಗಿ ಆಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ನಾರಾಯಣಮ್ಮ ಅವರನ್ನು ಬಿಎಂಅರ್‌ಡಿ ಸದಸ್ಯ ಡಾ.ಸುಬ್ಬರಾಜು, ತಾ.ಪಂ.ಮಾಜಿ ಸದಸ್ಯ ಡಿ.ಟಿ.ವೆಂಕಟೇಶ್ ಅಭಿನಂದಿಸಿದರು, ಗ್ರಾ.ಪಂ.ಸದಸ್ಯರುಗಳು ಮುಖಂಡರುಗಳುಹಾಜರಿದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಾರಾಯಣಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಸೂಲಿಬೆಲೆ: ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಾರಾಯಣಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸಿದ್ದೇನಹಳ್ಳಿ ಗ್ರಾಮದ ನಮಿತ ರಾಜೀನಾಮೆ ನೀಡಿದ್ದ ಕಾರಣ ಪರಿಶಿಷ್ಟರಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ಘೋಷಿಸಿದರು.ನೂತನ ಅಧ್ಯಕ್ಷೆ ನಾರಾಯಣಮ್ಮ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು, ಯುವ ಮುಖಂಡ ಬಿ.ಜಿ. ನಾರಾಯಣಗೌಡರು, ಬಿ.ವಿ ಸತೀಶ್‌ಗೌಡರ ಪ್ರೋತ್ಸಾಹ, ಪಂಚಾಯಿತಿ ಸದಸ್ಯರ ಸಹಕಾರೊಂದಿಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಬೀದಿ ದೀಪ ಇತ್ಯಾದಿ ಪ್ರಾಥಮಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಸರ್ಕಾರಿ ಅನುದಾನಗಳನ್ನು ಆದ್ಯತೆ ಮೇರಿಗೆ ಗ್ರಾಮಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು. ಹೊಸಕೋಟೆ ಬಿಎಂಆರ್‌ಡಿ ಸದಸ್ಯ ಡಾ.ಎಚ್.ಎಂ ಸುಬ್ಬರಾಜ್‌, ಗ್ರಾಪಂ ಉಪಾಧ್ಯಕ್ಷ ಅತ್ತಿಬೆಲೆ ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಅಕ್ಬರ್ ಆಲಿಖಾನ್, ಮಂಜುಳಾ, ಅರಸನಹಳ್ಳಿ ಶಿವಣ್ಣ, ನಮಿತಾ, ಸದಸ್ಯರಾದ ಬಸವರಾಜು, ವೆಂಕಟೇಶ್ ಜಿ.ಎಂ, ಖುದಾಸೀಯ ಜಮಾ, ಒಳಗೆರೆಪುರ ಲೀಲಾವತಿ, ಸಾದಪ್ಪನಹಳ್ಳಿ ಜಗದೀಶ್,ಯನಗುಂಟೆ ಗುಲ್ನಾಜ್, ಮಾಜಿ ಉಪಾಧ್ಯಕ್ಷೆ ಅರಸನಹಳ್ಳಿ ಕಲಾವತಿ ಪಿಳ್ಳಪ್ಪ, ಮುಖಂಡರಾದ ಸಮೀವುಲ್ಲಾ, ಉಸ್ಮಾನ್ ಖಾನ್, ಅಜೀಜ್‌ಸಾಬ್, ಚೋಟ್ ಖಾನ್, ಜೆಟಿ ಲೋಕೇಶ್, ಹನುಮರಾಜ್, ಗಾರೆ ಕೃಷ್ಣಪ್ಪ, ಬೆಟ್ಟಹಳ್ಳಿನಾಗೇಶ್, ಹೊಸಕೋಟೆ ಸಿದ್ದಾರ್ಥ ನಗರನರಸಿಂಹಯ್ಯ, ಕಂಬಳೀಪುರ ಮಾಜಿ ಅಧ್ಯಕ್ಷ ರಮೇಶ್, ದೊಡ್ಡ ಅರಳಿಗೆರೆ ಗ್ರಾಪಂ ಅಧ್ಯಕ್ಷೆ ನರಸಮ್ಮ, ತಾಪಂ ಮಾಜಿ ಸದಸ್ಯ ಡಿ.ಟಿ ವೆಂಕಟೇಶ್, ಸಾದಪ್ಪನಹಳ್ಳಿ ರಾಮಣ್ಣ, ಯನಗುಂಟೆ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಸುಜಾತ ಇದ್ದರು.

(ಫೋಟೋ ಕ್ಯಾಪ್ಷನ್‌)

ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಪಂ ನೂತನ ಆಧ್ಯಕ್ಷೆ ನಾರಾಯಣಮ್ಮ ಅವರನ್ನು ಬಿಎಂಅರ್‌ಡಿ ಸದಸ್ಯ ಡಾ.ಸುಬ್ಬರಾಜು, ತಾಪಂ ಮಾಜಿ ಸದಸ್ಯ ಡಿ.ಟಿ.ವೆಂಕಟೇಶ್ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ