ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಟ್ಟಣದ ತಾಪಂ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ತಾಪಂ ಸಹಯೋಗದಲ್ಲಿ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ನ್ಯಾಯಾಲಯದ ಮೂಲಕ ನ್ಯಾಯ ಪಡೆಯಬಹುದು. ಸಮಸ್ಯೆಗಳಿದ್ದರೆ ನ್ಯಾಯಾಲಯದಲ್ಲಿ ದೂರು ನೀಡಿದರೆ ಪರಿಶೀಲಿಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಕಾರ್ಮಿಕರಲ್ಲದ ಅನರ್ಹರು ಗುರುತಿನ ಚೀಟಿ ಹಿಂದಿರುಗಿಸಬೇಕು ಹಾಗೂ ಕಾರ್ಮಿಕರಲ್ಲದವರಿಗೆ ಸವಲತ್ತು ಸಿಗದಂತೆ ಅರ್ಹರು ನೋಡಿಕೊಳ್ಳಬೇಕು. ಸಂಘಟನಾಕಾರರು ಈ ಬಗ್ಗೆ ಕಾರ್ಮಿಕರಿಗೆ ತಿಳಿ ಹೇಳಬೇಕು. ಕಾರ್ಮಿಕರು ಕೆಲಸ ಮಾಡಿ ನಿವೃತ್ತಿಯಾದರೂ ಕೂಡ ಪಿಂಚಣಿ ದೊರೆಯುತ್ತದೆ. ಆದ್ದರಿಂದ ನಿಮ್ಮಲ್ಲಿ ಸಾಮರಸ್ಯ ಮತ್ತು ಒಗ್ಗಟ್ಟಿರಬೇಕು ಹಾಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.ಕಾರ್ಮಿಕ ನಿರೀಕ್ಷಕ ಮಂಜುನಾಥ್ ಮಾತನಾಡಿ, ಇಲಾಖೆಯು ಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕಾರ್ಮಿಕರು ನೀಡುವ ಸವಲತ್ತುಗಳನ್ನು ಪಡೆದು ಸದುಪಯೋಗಪಡಿಸಿಕೊಳ್ಳಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಉಪ ತಹಸೀಲ್ದಾರ್ ವಿನೋದ್, ತಾಪಂ ಲೆಕ್ಕಾಧಿಕಾರಿ ರಂಗನಾಥ್, ವಿವಿಧ ಕಾರ್ಮಿಕ ಸಂಘದ ಅಧ್ಯಕ್ಷರಾದ ಶಾಂತರಾಜ್, ಶೇಖರ್, ಗೋವಿಂದೇಗೌಡ, ರುದ್ರಪ್ಪ, ತಿರುನೀಲಕಂಠ, ಕುಮಾರ್ ಸ್ವಾಮಿ, ಮನುಕುಮಾರ್, ಶಿಕ್ಷಕರಾದ ಪುಟ್ಟರಾಜು, ಕಾರ್ಮಿಕರು ಇದ್ದರು.