ಶಿವಕುಮಾರ ಕುಷ್ಟಗಿ
ರಾಜ್ಯ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2023-24 ಮತ್ತು 2024-25 ಎರಡೂ ವರ್ಷದಲ್ಲೂ 17ನೇ ಸ್ಥಾನವನ್ನು ಕಾಯ್ದುಕೊಂಡಿದೆ ಎನ್ನುವುದು ಕೊಂಚ ಸಮಾಧಾನದ ವಿಷಯವಾಗಿದ್ದರೂ ಜಿಲ್ಲಾ ವ್ಯಾಪ್ತಿಯಲ್ಲಿ ಎ ಮತ್ತು ಎ+ ಶಾಲೆಗಳ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ಅಧಿಕಗೊಂಡಿವೆ.
2024ರ ಫಲಿತಾಂಶದ ಆಧಾರದಲ್ಲಿ ಜಿಲ್ಲೆ ಶೇ 90ಕ್ಕಿಂತ ಅಧಿಕ ಅಂಕ ಪಡೆದ 3 ಎ+ ಶಾಲೆಗಳನ್ನು ಹಾಗೂ ಶೇ 80 ರಿಂದ 90 ಅಂಕ ಪಡೆದ 4 ಎ ಗ್ರೇಡ್ ಶಾಲೆಗಳನ್ನು ಗುರುತಿಸಲಾಗಿತ್ತು. ಈ ಬಾರಿ ಎ+ ಶಾಲೆಗಳ ಸಂಖ್ಯೆ 10 ಮತ್ತು ಎ ಗ್ರೇಡ್ ಶಾಲಾ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ವಿಷಯವಾರು ಫಲಿತಾಂಶದಲ್ಲಿ ಕಳೆದ ಬಾರಿ 552 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದಿದ್ದರು. ಈ ಬಾರಿ 910 ವಿದ್ಯಾರ್ಥಿಗಳು ಶೇ. 100ರಷ್ಟು ಅಂಕ ಪಡೆಯುವ ಮೂಲಕ ಶೈಕ್ಷಣಿಕ ಸುಧಾರಣೆಯ ಹಾದಿಯನ್ನು ತೋರಿದ್ದಾರೆ. ಏನೇನು ಕ್ರಮ?ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಇತರೆ ಶಾಲೆಗಳ ಮೇಲ್ವಿಚಾರಣೆ, ಪೂರ್ವಸಿದ್ಧತಾ ಪರೀಕ್ಷೆ ಪತ್ರಿಕೆಗಳ ಪರಿಶೀಲನೆ ಜತೆಗೆ ಹಲವು ಜವಾಬ್ದಾರಿ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ ಶಿಕ್ಷಕರಿಗೆ ತರಬೇತಿ ಶಿಬಿರ, ಶಾಲಾ ವಾರು ಶಿಕ್ಷಕರಿಗೆ ಜವಾಬ್ದಾರಿ ನೀಡಿ, ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸುವ ಕುರಿತು ಸರಣಿ ಸಭೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳನ್ನು ಗುರುತಿಸಿ ವಿಶೇಷ ಕಲಿಕಾ ಶಿಬಿರಗಳನ್ನು ಶಿಕ್ಷಣ ಇಲಾಖೆ ಏರ್ಪಡಿಸಿತ್ತು. ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕಡಿಮೆ ಅಂಕಗಳ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿಯಿಂದ ಕಲಿಕಾ ಕ್ರಮಗಳನ್ನು ತಿಳಿಸಲಾಗಿತ್ತು. ಅದೇ ರೀತಿ ಕಳೆದ ಸಾಲಿನಲ್ಲಿ ‘ಸಿ’ ಮತ್ತು ‘ಸಿ+’ ಶ್ರೇಣಿ ಪಡೆದ ಶಾಲೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ಪರಿಹಾರ ಬೋಧನೆ ಕ್ರಮಗಳನ್ನು ಶಿಕ್ಷಣ ಇಲಾಖೆ ಅನುಸರಿಸಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳು ಕಲಿಕಾ ಮಟ್ಟ ಹೆಚ್ಚಾಗಿರುವುದು ಫಲಿತಾಂಶದಲ್ಲಿ ಗೋಚರವಾಗುತ್ತಿದೆ. ಕಳೆದ ಸಾಲಿನಲ್ಲಿ ಶಾಲಾ ಶಿಕ್ಷಕರಿಗೆ, ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು, ವಿಶೇಷವಾಗಿ ಬಿ ಮತ್ತು ಸಿ ಗ್ರೇಡ್ ಫಲಿತಾಂಶ ಪಡೆದಿದ್ದ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ಶಿಬಿರ ಹಾಗೂ ತರಬೇತಿ ನೀಡಲಾಗಿತ್ತು. ಮಕ್ಕಳಲ್ಲಿ ಸಕಾರಾತ್ಮಕ ಕಲಿಕಾ ವಾತಾವರಣ ಸೃಷ್ಟಿಸುವಲ್ಲಿ ನಮ್ಮ ಶಿಕ್ಷಕರು ಅತೀ ಹೆಚ್ಚು ಶ್ರಮ ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ವಾರು ಕಳೆದ ಸಾಲಿಗಿಂತಲೂ ಈ ಬಾರಿ ಶಾಲಾ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕಂಡಿದೆ. ಇನ್ನು ಉತ್ತಮಗೊಳಿಸುವತ್ತ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಡಿಡಿಪಿಒ ಆರ್. ಎಸ್. ಬುರಡಿ ಹೇಳಿದರು.ಗ್ರೇಡ್ ವಾರು ವಿದ್ಯಾರ್ಥಿಗಳ ಸಂಖ್ಯೆ
ಗದಗ ಶಹರ: