ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಂತ್ರಿಕ ಹಬ್ಬದ ಉದ್ಘಾಟನೆಯನ್ನು ತೀಟಾಡೈನಾಮಿಕ್ಸ್‌ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಗಜೇಂದ್ರ ದೇಶಪಾಂಡೆಯವರು ನಿರ್ವಹಿಸಿ ವಿದ್ಯಾರ್ಥಿಗಳನ್ನು ಕುರಿತು ತಂತ್ರಜ್ಞಾನ ವಿಷಯಗಳ ನವನವೀನ ವಿಚಾರಗಳನ್ನು ತಿಳಿ ಹೇಳಿದರು.ಕಾರ್ಯಕ್ರಮದಲ್ಲಿ 2 ರೀತಿಯ ವೈಶಿಷ್ಟ್ಯವಾದ ಪ್ರಮುಖ ಸ್ಪರ್ಧೆಗಳಾದ ಸ್ಲೈಡ್ ಸಿಂಕ-ಪವರ ಪಾಯಿಂಟ್ ಪ್ರೆಸೆಂಟೆಶನ್ ಹಾಗೂ ಬಗ್ ಹಂಟ್-ಕೋಡಿಂಗ್ ಹಾಗೂ ಡಿಕೋಡಿಂಗ್ ಸವಾಲುಗಳನ್ನು ಏರ್ಪಡಿಸಲಾಗಿತ್ತು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ಒಟ್ಟು ₹20 ಸಾವಿರ ಮೊತ್ತದ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು.ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬರಹಗಾರರು ಹಾಗೂ ಆಯ್ಕೆ ದರ್ಜೆಯ ಹಿರಿಯ ಉಪನ್ಯಾಸಕರಾದ ರಾಜೇಶ ಹೊಂಗಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹುಬ್ಬಳ್ಳಿ ಅವರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪ್ರಯೋಜನೆಗಳನ್ನು ತಿಳಿಸಿ ಪ್ರೋತ್ಸಾಹಿಸಿದರು.ಗಣಕಯಂತ್ರ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಅನುರಾಧಾ ದೇಸಾಯಿ ಹಾಗೂ ಉಪನ್ಯಾಸಕಿ ಸಾಕ್ಷಿ ಜೋಶಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದರು. ಕಾರ್ಯಕ್ರಮದ ಕುರಿತು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಯು.ಎನ್.ಕಾಲಕುಂದ್ರಿಕರರವರು ಹಾಗೂ ಸರ್ವ ಸದಸ್ಯರು ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ಎಸ್.ಎಸ್.ಮಲಾಜ್‌ರವರು ಮೆಚ್ಚುಗೆ ವ್ಯಕ್ತಪಡಿಸಿದರು.