ಲಿಂ.ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ಜನರಲ್ ವರ್ಕ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯಿಂದ ಜೂ.17ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ ಎಂದು ಆದಪ್ಪ ಮಾರೆಪ್ಪನವರ ಹೇಳಿದರು.
ಗದಗ: ಲಿಂ.ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ಜನರಲ್ ವರ್ಕ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯಿಂದ ಜೂ.17ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ ಎಂದು ಆದಪ್ಪ ಮಾರೆಪ್ಪನವರ ಹೇಳಿದರು.
ನಗರದ ಎಪಿಎಂಸಿಯ ಗದಗ-ಬೆಟಗೇರಿ ಜನರಲ್ ವರ್ಕ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿಯ ಸಭಾಭವನದಲ್ಲಿ ಕುಸ್ತಿ ಪಂದ್ಯಾವಳಿಗಳ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿಗಳನ್ನು ಜೂ.17ರಂದು ಮಧ್ಯಾಹ್ನ 3ಕ್ಕೆ ವೀರೇಶ್ವರ ಪುಣ್ಯಾಶ್ರಮ ಆವರಣದಲ್ಲಿ ಆಯೋಜಿಸಲಾಗಿದ್ದು, ನೇಮಿಸಿದ ಕುಸ್ತಿ ಹೊರತುಪಡಿಸಿ ಬೇರೆ ಕುಸ್ತಿ ಆಡುವಂತಿಲ್ಲ. ಮಿಲಾಪಿ ಕುಸ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜನವರು ವೀರೇಶ್ವರ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ, ಉಮರಸಾಬ ಕೌತಾಳ, ಬಿ.ಬಿ.ಅಸೂಟಿ, ವಸಂತ ಸಿದ್ದಮ್ಮನಹಳ್ಳಿ ಸೇರಿದಂತೆ ಹಮಾಲರ ಚಕ್ಕಡಿಯವರ ಸಮಿತಿಯ ಪದಾಧಿಕಾರಿಗಳು ಹಾಗೂ ದಲಾಲ ಅಂಗಡಿಯ ವರ್ತಕರು ಹಾಗೂ ಖರೀದಿದಾರರ ಅಂಗಡಿ ವರ್ತಕರು, ಬ್ರೋಕರ್‌ದಾರರು ಪಾಲ್ಗೊಳ್ಳುವರು. ಕುಸ್ತಿ ನಿರ್ಣಾಯಕರಾಗಿ ಸುಭಾಸ ಸಂಗಪ್ಪ ಕಡಿಗೇರಿ, ಆದಪ್ಪ ಮಾರೆಪ್ಪನವರ, ಇಮಾಮಸಾಬ ರೋಣದ, ಅಮರಪ್ಪ ಕುಡಗುಂಟಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸುಭಾಸ ಕಟಗೇರಿ, ಇಮಾಮಸಾಬ ರೋಣದ, ಅಯ್ಯಪ್ಪ ನಾಯ್ಕರ, ರಾಮಣ್ಣ ವಾಲ್ಮೀಕಿ, ಗೋವಿಂದಪ್ಪ ಮುಂಡರಗಿ, ಬಸಣ್ಣ ಸೂಡಿ, ಮಾಬುಸಾಬ ವಾಲಿಕಾರ, ಮಾರುತಿ ರಾಲದೊಡ್ಡಿ, ದೇವರಾಜ ಬಿನ್ನಾಳ, ಯಲ್ಲಪ್ಪ ಬೇವಿನಮರದ, ರವಿ ರಾಲದೊಡ್ಡಿ, ವಸಂತ ಸಿದ್ದಮ್ಮನಹಳ್ಳಿ, ದೇವಪ್ಪ ಗಡಾದ, ಅಮರಪ್ಪ ಗುಡಗುಂದಿ, ಸೋಮನಾಥ ಹಾತಲಗೇರಿ, ದೇವಪ್ಪ ಕನ್ಯಾಳ, ಅಮೀನಸಾಬ ಅಣ್ಣೀಗೇರಿ, ಅಲ್ಲಾಸಾಬ ನದಾಫ, ರಾಮಚಂದ್ರ ಹರಿಜನ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.