ಕನ್ನಡಪ್ರಭ ವಾರ್ತೆ ಜಮಖಂಡಿ
ತಮಿಳುನಾಡು ಎಂ.ಕೆ. ಸ್ಪೋರ್ಟ್ಸ್ ತಂಡ 28-25 ಅಂತರದಿಂದ ಬಾಗಲಕೋಟೆ ತಂಡವನ್ನು ಪರಾಭವಗೊಳಿಸಿದರೆ, ಚಂಡಿಗಡ ತಂಡ 38-26 ಅಂತರದಿಂದ ಮುಂಬೈನ ಆರ್ ಬಿಎಸ್ ಸಿ ತಂಡವನ್ನು, ಎಸ್ ಎಸ್ ಬಿ ರಾಜಸ್ಥಾನ ತಂಡ 30-12ರಿಂದ ತಮಿಳುನಾಡಿನ ನೇಲೈ ಸ್ಪೋರ್ಟ್ಸ್ ತಂಡವನ್ನು ಸೋಲಿಸಿದವು. ಭಾರತ ತಮಿಳುನಾಡು (27-21) ಮುಂಬೈನ ಆರ್ ಬಿಎಸ್ ಸಿ, ಗುಜರಾತಿನ ಸ್ವಾಮಿನಾರಾಯಣ (41-27) ತಮಿಳುನಾಡಿನ ಎಂ.ಕೆ. ಸ್ಪೋರ್ಟ್ಸ್, ಮುಂಬೈನ ಮಿಡ್‌ಲೈನ್ (32-13) ಬಾಗಲಕೋಟೆ, ಎಂಡಿಎಸ್ ತಂಡ (33-13) ತಮಿಳುನಾಡಿನ ಸೂರ್ಯ, ಹರಿಯಾಣದ ಅಲ್ಟಿಮೇಟ್ (29-18) ತಮಿಳುನಾಡಿನ ಎಂಕೆವಿಎಸ್, ಕರ್ನಾಟಕ (37-15) ಚಂಡಿಗಡ, ಹರಿಯಾಣದ ಎಸ್ಎಸ್ಎ (37-13) ಕರ್ನಾಟಕ, ರಾಜಸ್ಥಾನದ ಎಸ್ಎಸ್ಬಿ ತಂಡ (30-24) ಕರ್ನಾಟಕ ತಂಡವನ್ನು, ಮುಂಬೈ ಪೊಲೀಸ್ ತಂಡ (35-11) ತಮಿಳುನಾಡಿನ ನೇಳಾ ಸ್ಪೋರ್ಟ್ಸ್, ಸೌತ್ರೈ ಲ್ವೆ (35-15) ದುರ್ಗಾ ಶಕ್ತಿ, ಮುಂಬೈನ ಮಿಡಲೈನ್ (39-16) ಗುಜರಾತಿನ ಸ್ವಾಮಿ ನಾರಾಯಣ, ಕರ್ನಾಟಕ (30-17) ಭಾರತ ತಮಿಳುನಾಡು, ತಮಿಳುನಾಡಿನ ಸೂರ್ಯ (32-22) ಕರ್ನಾಟಕ, ಸವಣೂರಿನ ದುರ್ಗಾಶಕ್ತಿ (27-24) ತಮಿಳುನಾಡಿನ ಎಮ್ ಕೆವಿಎಸ್ ತಂಡವನ್ನು ಸೋಲಿಸಿದವು.
ಕನ್ನಡ ಸಂಘದ 60ನೇ ವರ್ಷಾಚರಣೆ ನಿಮಿತ್ತ ಏರ್ಪಡಿಸಿರುವ ರಾಷ್ಟ್ರಮಟ್ಟದ ಕ್ರೀಡಾ ಕೂಟಗಳಲ್ಲಿ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಕ್ರೀಡಾಭಿಮಾನಿಗಳು ಹರ್ಷವ್ಯಕ್ತಪಡಿಸುತ್ತಿದ್ದಾರೆ.- ರಾಹುಲ್ ಕಲೂತಿ ಕನ್ನಡ ಸಂಘದ ಅಧ್ಯಕ್ಷ